»   » ಶುಭ ನಿಶ್ಚಿತಾರ್ಥ : ಫೆ.27ರಂದು ಐಶ್‌-ಅಭಿ ಮದುವೆ?

ಶುಭ ನಿಶ್ಚಿತಾರ್ಥ : ಫೆ.27ರಂದು ಐಶ್‌-ಅಭಿ ಮದುವೆ?

Posted By: Super
Subscribe to Filmibeat Kannada

ಮುಂಬಯಿ : ಅಂತೆಕಂತೆಗಳಿಗೀಗ ಪೂರ್ಣ ವಿರಾಮ. ಮಾಜಿ ವಿಶ್ವಸುಂದರಿ, ನಟಿ ಐಶ್ವರ್ಯ ರೈ ಮತ್ತು ಬಾಲಿವುಡ್‌ ನಟ ಅಭಿಷೇಕ್‌ ಬಚ್ಚನ್‌ ಮದುವೆಗೆ ಸಿದ್ಧರಾಗಿದ್ದಾರೆ.

ಈ ನಿಟ್ಟಿನಲ್ಲಿ ಭಾನುವಾರ ರಾತ್ರಿ ಮುಂಬೈನಲ್ಲಿ ಮದುವೆ ನಿಶ್ಚಿತಾರ್ಥ ನೆರವೇರಿದೆ. ಐಶ್ವರ್ಯ ಬೆರಳಿಗೆ ಅಭಿಷೇಕ್‌ ವಜ್ರದುಂಗುರ ತೊಡಿಸಿದರು. ಸಮಾರಂಭದಲ್ಲಿ ಅಭಿಷೇಕ್‌ ತಂದೆ-ತಾಯಿಗಳಾದ ಅಮಿತಾಭ್‌ ಬಚ್ಚನ್‌, ಜಯಾ ಬಚ್ಚನ್‌, ಉದ್ಯಮಿ ಅನಿಲ್‌ ಅಂಬಾನಿ ಮತ್ತಿತರರು ಹಾಜರಿದ್ದರು.

ಮದುವೆ ದಿನಾಂಕವಿನ್ನು ನಿಗದಿಯಾಗಿಲ್ಲ. ಇಬ್ಬರ ಜಾತಕಗಳ ಪ್ರಕಾರ ಫೆ.27ರೊಳಗೆ ಮದುವೆ ನೆರವೇರಲಿದೆ. ಈ ತಾರಾಜೋಡಿಯದು ಸುಖ ದಾಂಪತ್ಯ ಎಂದು ಐಶ್ವರ್ಯ ಕುಟುಂಬದ ಬೆಂಗಳೂರಿನ ಜ್ಯೋತಿಷಿ ಚಂದ್ರಶೇಖರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

ಈ ಮದುವೆಯ ಒಂದು ವಿಶೇಷವೆಂದರೆ ಐಶ್ವರ್ಯ, ತಮ್ಮ ಭಾವಿ ಪತಿ ಅಭಿಷೇಕ್‌ಗಿಂತಲೂ ಎರಡು ವರ್ಷ ದೊಡ್ಡವರು. ಅವರಿಗೀಗ 33ವರ್ಷ.

(ಏಜನ್ಸೀಸ್‌)

English summary
Aishwarya Rai and Abhishek Bachchan were engaged in a small ceremony that took place at the former Miss Worlds house in Mumbai on Sunday(Jan.15)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada