»   » ಇಬ್ಬರಿಗೂ ಇದು ಚೊಚ್ಚಲ ಬಸುರಲ್ಲದಿದ್ದರೂ, ವೈದ್ಯರು ಕೇರ್‌ ತೆಗೆದುಕೊಳ್ಳೋಕೆ ಹೇಳಿರುವುದರಿಂದ ಹೆರಿಗೆಯಾಗುವವರೆಗೆ ಕೆಮೆರಾದಿಂದ ಇಬ್ಬರೂ ದೂರ.

ಇಬ್ಬರಿಗೂ ಇದು ಚೊಚ್ಚಲ ಬಸುರಲ್ಲದಿದ್ದರೂ, ವೈದ್ಯರು ಕೇರ್‌ ತೆಗೆದುಕೊಳ್ಳೋಕೆ ಹೇಳಿರುವುದರಿಂದ ಹೆರಿಗೆಯಾಗುವವರೆಗೆ ಕೆಮೆರಾದಿಂದ ಇಬ್ಬರೂ ದೂರ.

Posted By:
Subscribe to Filmibeat Kannada

*ದಟ್ಸ್‌ಕನ್ನಡ ಬ್ಯೂರೋ

ಈಟೀವಿ ಕನ್ನಡದಲ್ಲಿ ಪ್ರತಿ ಶನಿವಾರ ಪ್ರಸಾರವಾಗುವ ಎಸ್ಪಿ ಬಾಲು ಹಾಡುವ ಜನಪ್ರಿಯ ಕಾರ್ಯಕ್ರಮ ‘ಎದೆ ತುಂಬಿ ಹಾಡುವೆನು’. ಬಾಲು ಎಷ್ಟು ಚೆನ್ನಾಗಿ ಹಾಡುತ್ತಾರೋ ನಟಿ ವಿನಯಾ ಪ್ರಕಾಶ್‌ ಅಷ್ಟೇ ಚೆನ್ನಾಗಿ ಕಾರ್ಯಕ್ರಮ ನಿರೂಪಿಸುತ್ತಿದ್ದರು. ನಿಜ ಹೇಳ್ತೇವೆ ಕೇಳಿ- ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮ ಜನಪ್ರಿಯಗೊಳ್ಳುವಲ್ಲಿ ಬಾಲು ಅವರ ಕಂಚಿನ ಕಂಠದ ಆಕರ್ಷಣೆ ಮಾತ್ರವಲ್ಲ - ವಿನಯಾ ಪ್ರಕಾಶ್‌ ಅವರ ಸುಲಿದ ಬಾಳೆಯ ಹಣ್ಣಿನಂದದ ಕನ್ನಡ ನಿರೂಪಣೆಯ ಅಳಿಲು ಸೇವೆಯೂ ಇತ್ತು !

ಇದ್ದಕ್ಕಿದ್ದಂತೆ, ನಿರೂಪಕಿ ವಿನಯಾ ಪ್ರಕಾಶ್‌ ಜಾಗಕ್ಕೆ ‘ಮನ್ವಂತರ’ ಫೇಮ್‌ನ ಮೇಘಾ ನಾಡಿಗೇರ್‌ ಬಂದು ಕೂತಿದ್ದು ಹೇಗೆ? ಅಥವಾ ವಿನಯಾ ಜಾಗಕ್ಕೆ ಮೇಘಾರನ್ನು ತಂದು ಕೂಡಿಸಿದ್ದು ಯಾಕೆ? ಹಾಗಂತ ಜನ ಕಳೆದ ಶನಿವಾರ (ಫೆ. 8) ಮಾತಾಡಿಕೊಂಡರು.
ವಿನಯಾ ಪ್ರಕಾಶ್‌ ಈಗ ಬಸುರಿ ಅನ್ನುವುದು ಪಾಪ ಆಕೆಯ ಮಾತುಗಳ ಅಭಿಮಾನಿಗಳಿಗೆ ಗೊತ್ತಿಲ್ಲ.

ನಲವತ್ತರ ಆಸುಪಾಸಲ್ಲಿ ಗರ್ಭಧಾರಣೆ

ಹಿಂದಿ ಹಾಗೂ ತೆಲುಗು ಧಾರಾವಾಹಿ ನಿರ್ದೇಶನದಲ್ಲಿ ಪಳಗಿರುವ ಜ್ಯೋತಿ ಪ್ರಕಾಶ್‌ ಜೊತೆ ವಿನಯಾ ಮದುವೆಯಾದದ್ದು , ಮೊದಲೇ ನೋಟದಲ್ಲೇ ತಮ್ಮಿಬ್ಬರಿಗೂ ಪ್ರೇಮಾಂಕುರವಾದುದನ್ನು ರಮ್ಯವಾಗಿ ಬಣ್ಣಿಸಿದ್ದು ಈಗ ಹಳೆಯ ಕಥೆ. ಮದುವೆಯಾಂದಿಗೆ ವಿನಯಾ ಅನೇಕ ಕನಸುಗಳನ್ನು ಹೊರಹಾಕಿದ್ದರು. ತಮ್ಮದೇ ಆದ ಘನ ಗಂಭೀರ ಸೀರಿಯಲ್ಲುಗಳನ್ನು ತೆಗೆಯುವ ದೊಡ್ಡ ಯೋಜನೆ ಇತ್ತು. ಈಗ ಕಥೇನೆ ಬೇರೆ ಬಿಡಿ !

ತಾನು ತಂದೆಯಾಗುತ್ತಿದ್ದೇನೆ ಎಂಬ ಗುಡ್‌ ನ್ಯೂಸ್‌ ಬಲು ಬೇಗ ಪ್ರಕಟವಾಗಿದ್ದೇ ತಡ, ಪ್ರಕಾಶ್‌ ಹೆಂಡತಿಯ ಮೇಲೆ ತೀವ್ರ ನಿಗಾ ಇಟ್ಟಿದ್ದಾರೆ. ಹೀಗಾಗಿ ಮಗು ಹೆರುವವರೆಗೆ ಭಾರ ಎತ್ತುವುದಿರಲಿ, ವೇದಿಕೆ ಹತ್ತುವುದೂ ನಿಷಿದ್ಧ.

ವಿನಯಾಗೆ ಮಗು ಹುಟ್ಟುವವರೆಗೆ ‘ಎದೆ ತುಂಬಿ ಹಾಡುವೆನು’ ಅಷ್ಟೇ ಅಲ್ಲ, ಯಾವುದೇ ಧಾರಾವಾಹಿಗಾಗಲೀ ಕೆಮೆರಾಗೆ ಮುಖ ಕೊಡುವುದಿಲ್ಲ ಎಂದು ಅವರು ಸಂಕಲ್ಪ ಮಾಡಿದ್ದಾರೆ. ನಲವತ್ತರ ಆಸುಪಾಸಿನಲ್ಲಿ ಗರ್ಭ ಧರಿಸಿರುವುದರಿಂದ ಹುಷಾರಾಗಿರಿ ಎಂದು ವೈದ್ಯರು ನೋಟಿಸ್‌ ನೀಡಿದ್ದಾರೆ. ಆ ಕಾರಣದಿಂದಾಗಿ ವಿನಯಾ ಪ್ರಕಾಶ್‌ ಬೆಂಗಳೂರಿನ ಬಸವೇಶವರ ನಗರದ ಮನೆಯಲ್ಲಿ ಕೂತು ಕೂಸಿಗೆ ಕುಲಾವಿ ಹೆಣೆಯುತ್ತಿದ್ದಾರೆ.

ಬೋನಸ್ಸು ಸುದ್ದಿ : ಒಂದು ಕಾಲದ ನಿಂಬೆ ಹಣ್ಣಿನಂಥ ಹುಡುಗಿ ಜೂಹಿ ಚಾವ್ಲಾ ಎರಡನೇ ಬಾರಿಗೆ ತಾಯಾಗುವ ಸುದ್ದಿ ಬಾಲಿವುಡ್‌ ಓಣಿಗಳಿಂದ ಹೊರಬಿದ್ದಿದೆ. ಈ ಸಿಹಿ ಸುದ್ದಿಯ ಕಾರಣ ತನಿಜಾ ಚಂದ್ರ ಅವರ ‘ವಾಸ್ತಾ’ ಚಿತ್ರದಿಂದ ಜೂಹಿ ಅನಿವಾರ್ಯವಾಗಿ ಹೊರ ಬರಬೇಕಾಯಿತು.

Post your views

ಸಿನಿಮಾ ಸಂಚಯ
ವಿರಸದ ಮುನ್ನುಡಿಯ ಸರಸ= ವಿನಯಾ ಪ್ರಕಾಶ್‌

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada