»   » ಅಂಬರೀಷ್‌ ರಾಜೀನಾಮೆಗೆ ಯಾರ್ಯಾರು ಏನನ್ನುತ್ತಾರೆ?

ಅಂಬರೀಷ್‌ ರಾಜೀನಾಮೆಗೆ ಯಾರ್ಯಾರು ಏನನ್ನುತ್ತಾರೆ?

Subscribe to Filmibeat Kannada


ಬೆಂಗಳೂರು : ಅಂಬರೀಷ್‌ ರಾಜೀನಾಮೆಯನ್ನು ಕನ್ನಡ ಚಿತ್ರರಂಗ ಸ್ವಾಗತಿಸಿದೆ. ಕಾವೇರಿ ಹೋರಾಟಕ್ಕೆ ಅಂಬರೀಷ್‌ ರಾಜೀನಾಮೆ ಮೂಲಕ ಇನ್ನಷ್ಟು ಕಾವು ತಂದಿದ್ದಾರೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

ಯಾರ್ಯಾರು ಏನಂದರು?

ವಿಷ್ಣುವರ್ಧನ್‌ - ಸರಿಯಾದ ಸಮಯದಲ್ಲಿ ಸರಿಯಾದ ನಿರ್ಣಯ. ಇದು ಅಂಬರೀಷ್‌ ಅವರ ಕಮೀಟ್‌ಮೆಂಟ್‌ ಬಿಂಬಿಸುತ್ತದೆ. ಅಂಬರೀಷ್‌ ರಾಜೀನಾಮೆಯಿಂದ ನನಗೆ ಅಚ್ಚರಿಯೇನೂ ಆಗಿಲ್ಲ. ನಾನದನ್ನು ನಿರೀಕ್ಷಿಸಿದ್ದೆ... ನಂಬಿದವರ ಹಿತಕ್ಕಾಗಿ, ನಾಡಿನ ರೈತರ ಹಿತಕ್ಕಾಗಿ ಅಧಿಕಾರ ತ್ಯಜಿಸಿ ಅಂಬರೀಷ್‌ ಮಾದರಿಯಾಗಿದ್ದಾರೆ.

ಶಶಿಕುಮಾರ್‌ - ರಾಜೀನಾಮೆ ಮೂಲಕ ಅಂಬರೀಷ್‌ ಈಗ ನಿಜವಾದ ‘ಮಂಡ್ಯದ ಗಂಡು’. ಅಂಬರೀಷ್‌ ನಿಲುವಿನಿಂದ ಕಾವೇರಿ ಹೋರಾಟಕ್ಕೆ ಸಿಂಹಬಲ ಬಂದಂತಾಗಿದೆ.

ಜಗ್ಗೇಶ್‌ - ರಾಜೀನಾಮೆ ವಿಚಾರ ಕೇಳಿ ನಿಜಕ್ಕೂ ಸಂತೋಷವಾಯಿತು. ಅಧಿಕಾರವನ್ನು ಎಂದೂ ಕೇರ್‌ ಮಾಡದ ಅಂಬಿ ಅಣ್ಣನ ನಿಲುವು ಶ್ಲಾಘನೀಯ. ಇನ್ನಾದರೂ ಅಂಬರೀಷ್‌ ಬಗೆಗಿನ ಅರ್ಥಹೀನ ಟೀಕೆಗಳು ನಿಲ್ಲಲಿ.

ಸಾ.ರಾ.ಗೋವಿಂದ್‌ - ಕಾವೇರಿ ಹಕ್ಕುಗಳಿಗಾಗಿ ನಡೆಯುತ್ತಿರುವ ಹೋರಾಟ ಅಂಬಿ ನೇತೃತ್ವದಲ್ಲಿ ಮುಂದುವರೆದು, ಯಶಸ್ಸು ಪಡೆಯಲಿದೆ. ಜನರ ಆಶಯಕ್ಕೆ ರಾಜೀನಾಮೆ ಮೂಲಕ ಅಂಬರೀಷ್‌ ಸ್ಪಂದಿಸಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada