»   » ‘ಸಂಗೀತಾ’ದಿಂದ ಅಣ್ಣಾವ್ರ ಹಾಡುಗಳ ಬುತ್ತಿ

‘ಸಂಗೀತಾ’ದಿಂದ ಅಣ್ಣಾವ್ರ ಹಾಡುಗಳ ಬುತ್ತಿ

Subscribe to Filmibeat Kannada

ಅಣ್ಣಾವ್ರ ಕಂಠದ ಯಾವ ಹಾಡು ನಿಮಗೆ ಮೆಚ್ಚು?
ಬೆರಳು ಮಡಿಸುತ್ತಾ ಒಂದೊದಾಗಿ ಎಣಿಸತೊಡಗುವವರ ಪೈಕಿ ನೀವಾದರೆ, ಇದೋ ಇಲ್ಲಿವೆ ಅವರ ಕಂಠಸಿರಿಯಲ್ಲಿ ಹೊಮ್ಮಿರುವ ಬರೋಬ್ಬರಿ 75 ಹಾಡುಗಳ ಧ್ವನಿ ಸುರುಳಿಗಳು.

ಏನೋ ಮೋಹ, ಓ ಪ್ರಿಯತಮ, ಸದಾ ಕಣ್ಣಲಿ, ನಲಿಯುತ ಹೃದಯ, ಸರಸ ಸಂಭಾಷಣೆ, ಜೇನಿನ ಹೊಳೆಯೋ, ಕನ್ನಡವೇ ನಿತ್ಯ ಹಾಗೂ ಭಾಗ್ಯದ ಲಕ್ಷ್ಮಿ ಬಾರಮ್ಮ- ಈ ಶೀರ್ಷಿಕೆಗಳ 8 ಧ್ವನಿಸುರುಳಿಗಳು ಹಾಗೂ ಸಿ.ಡಿ.ಗಳಲ್ಲಿ ಡಾ.ರಾಜ್‌ಕುಮಾರ್‌ ಹಾಡಿರುವ ಮರೆಯಲಾಗದ ಹಾಡುಗಳಿವೆ. ಕೆರಳಿದ ಸಿಂಹ, ನೀ ನನ್ನ ಗೆಲ್ಲಲಾರೆ, ಜ್ವಾಲಾಮುಖಿ, ಧ್ರುವತಾರೆ, ಜೀವನ ಚೈತ್ರ, ಶ್ರಾವಣ ಬಂತು, ಭಾಗ್ಯದ ಲಕ್ಷ್ಮಿ ಬಾರಮ್ಮ, ಒಡಹುಟ್ಟಿದವರು ಮೊದಲಾದ ಚಿತ್ರಗಳ ಹಾಡುಗಳಲ್ಲದೆ, ಕೆಲವು ಭಕ್ತಿ ಗೀತೆಗಳನ್ನು ಕೂಡ ಧ್ವನಿ ಸುರುಳಿಗೆ ತುಂಬಲಾಗಿದೆ.

ಕ್ರೆಸೆಂಟೋ ಮ್ಯೂಸಿಕಲ್‌ ಹೌಸ್‌ ಸಹಯೋಗದಲ್ಲಿ ಸಂಗೀತ ರೆಕಾರ್ಡಿಂಗ್‌ ಕಂಪನಿ ಅಣ್ಣಾವ್ರಿಗೆ 75 ತುಂಬಿದ ಸಂದರ್ಭದ ನೆನಪಿಗಾಗಿ ಈ ಆಲ್ಬಂಗಳನ್ನು ಹೊರತಂದಿದೆ. ನಿಮಗೂ ಒಂದು ಸೆಟ್ಟು ಬೇಕಾ ? ಕ್ಯಾಸೆಟ್ಟುಗಳ ಅಂಗಡಿಗೆ ಹೊರಡಿ.

(ಇನ್ಫೋ ವಾರ್ತೆ)

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada