»   » ಮಾಧುರಿ ದೀಕ್ಷಿತ್‌ಗೆ ನೀವೂ ‘ಹ್ಯಾಫಿ ಬರ್ಥ್‌ ಡೇ’ ಹೇಳಿ...

ಮಾಧುರಿ ದೀಕ್ಷಿತ್‌ಗೆ ನೀವೂ ‘ಹ್ಯಾಫಿ ಬರ್ಥ್‌ ಡೇ’ ಹೇಳಿ...

Posted By:
Subscribe to Filmibeat Kannada

ಭಾರತೀಯ ಚಿತ್ರರಂಗದ ನಾಯಕಿಯ ಸ್ಥಾನವನ್ನು ಹೊಸ ಎತ್ತರಕ್ಕೆ ಕೊಂಡೊಯ್ದ ಖ್ಯಾತಿ ಮಾಧುರಿಗೇ ಸಲ್ಲಬೇಕು. ಈ ಮೊದಲು ಒಬ್ಬೊಬ್ಬ ನಾಯಕಿ ಒಂದೊಂದು ವಿಶಿಷ್ಟ ಛಾಪೊತ್ತಿದ್ದರೂ, ಮಾಧುರಿ ಚಿತ್ರರಂಗದಲ್ಲಿ ತಂದ ಸಂಚಲನಕ್ಕೆ ಸಾಟಿಯೇ ಇಲ್ಲ.

‘ತೇಜಾಬ್‌’ ಚಿತ್ರದಲ್ಲಿ ‘ಏಕ್‌ ದೋ ತೀನ್‌...’ ಹಾಡು ಹಾಡುತ್ತಾ ತರುಣರ ಹೃದಯಕ್ಕೆ ಲಗ್ಗೆ ಇಟ್ಟವಳು; ಮಾಧುರಿ. ‘ಬೇಟಾ’ ಚಿತ್ರದಲ್ಲಿ ‘ಧಕ್‌ ಧಕ್‌ ಕರನೇ ಲಗಾ... ’ ಹಾಡುತ್ತಾ ಅವಳು ಎದೆಬಡಿತ ಏರಿಸಿದವಳು. ‘ಹಮ್‌ ಆಪ್‌ಕೆ ಹೈ ಕೌನ್‌’ ಚಿತ್ರದಲ್ಲಿ ಮನೋಜ್ಞ ಭಾವುಕ ಪಾತ್ರ ಮಾಡಿ ಮನದಲ್ಲಿ ಚಿರವಾಗಿ ನಿಂತವಳು; ಮಾಧುರಿ. ಕಲಾವಿದ ಹುಸೇನಜ್ಜನಿಗೆ ಹುಚ್ಚು ಹಿಡಿಸಿದ್ದು ಸಹಾ ಈಯಮ್ಮನೇ.

ಇದಲ್ಲದೆ ಅತ್ಯಂತ ಬೇಡಿಕೆಯಲ್ಲಿರುವಾಗಲೇ ಮದುವೆಯಾಗಿ ಸಹಜ ಸುಂದರ ಜೀವನದತ್ತ ಸಾಗಿದವಳು; ಮಾಧುರಿ. ಮದುವೆಯಾಗಿದ್ದು ವೃತ್ತಿಯಿಂದ ವೈದ್ಯನಾಗಿರುವ ಶ್ರೀರಾಮ್‌ ನೇಣೆಯನ್ನು. ಅಮೆರಿಕಾದಲ್ಲಿ ವಾಸ. ಮದುವೆಯ ನಂತರವೂ ‘ದೇವ್‌ದಾಸ್‌’ ಚಿತ್ರದಲ್ಲಿ ನಟಿಸಿ ಎಂದಿನಂತೆ ಜನಮನ್ನಣೆ ಪಡೆದದ್ದು, ಈಕೆಯ ಹೆಗ್ಗಳಿಕೆ. ಈ ಮಧ್ಯೆ ತಾಯ್ತನದ ಭಾಗ್ಯವೂ ಒದಗಿ ಬಂತು. ಎರಡು ಸಲ ತಾಯ್ತನ ಅನುಭವಿಸಿದ ಧನ್ಯತೆ ಈಕೆಯದು.

ಮಾಧುರಿ ಮತ್ತೆ ಚಿತ್ರಗಳಲ್ಲಿ ಅಭಿನಯಿಸುತ್ತಾರೆ ಎಂಬ ಮಾತುಗಳು ಬಾಲಿವುಡ್‌ ಅಂಗಳದಿಂದ ಆಗಾಗ ಚಿಮ್ಮಿ ಬರುತ್ತಿರುತ್ತವೆ. ಮಾಧುರಿಯೇ ಇದನ್ನು ಖಚಿತಪಡಿಸಬೇಕಷ್ಟೆ... ಮಾಧುರಿ ಅಭಿನಯಿಸಿದರೆ ಮತ್ತೆ ಅದೇ ಪ್ರೀತಿಯಿಂದ ನೋಡಲು ಅಭಿಮಾನಿಗಳು ಸಿದ್ಧ. ಎಲ್ಲೇ ಇರಲಿ ಮಾಧುರಿ ಜೀವನ ಸುಖಮಯವಾಗಿರಲಿ ಎಂದು ಅಭಿಮಾನಿಗಳು ಆದರದಿಂದ ಹಾರೈಸುತ್ತಾರೆ.

ಹುಟ್ಟುಹಬ್ಬದ ಶುಭ ಸಂದರ್ಭದಲ್ಲಿ ಮಾಧುರಿಗೆ ನೀವೂ ಸಂದೇಶ(ಎಸ್‌ಎಂಎಸ್‌) ಕಳುಹಿಸಬಹುದು.
ಎಸ್‌ಎಂಎಸ್‌ ಸಂಖ್ಯೆ : 7333

(ಏಜೆನ್ಸೀಸ್‌)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada