»   » ‘ದುನಿಯಾ’ ಸಿನಿಮಾ ಕರಿಯನಿಗೆ ಐದು ಪ್ರಶ್ನೆಗಳು

‘ದುನಿಯಾ’ ಸಿನಿಮಾ ಕರಿಯನಿಗೆ ಐದು ಪ್ರಶ್ನೆಗಳು

Subscribe to Filmibeat Kannada


ಸ್ಯಾಂಡಲ್‌ವುಡ್‌ನಲ್ಲಿ ಮಿಂಚುತ್ತಿರುವ ಹೊಸ ಹುಡುಗರಲ್ಲಿ ವಿಜಯ್‌ ಸಹಾ ಒಬ್ಬರು. ಅವರ ಜೊತೆ ಪುಟ್ಟ ಮಾತುಕತೆ.

  • ಶುಭ ಕಡಬಾಳ
1.ನಾಯಕ ನಟನಾಗಲು ಸಾಧಾರಣ ರೂಪವಾದರೂ ಸಾಕು ಎಂಬುದನ್ನು ಸಾಬೀತು ಮಾಡಿದ್ದೀರಲ್ವಾ?

ವಿಜಯ್‌ - ರೂಪದಿಂದ ಪ್ರತಿಭೆ ಅಳೆಯಲು ಅಸಾಧ್ಯ. ಸ್ವಂತ ಅಣ್ಣ, ತಮ್ಮಂದಿರ ರೂಪ, ಬುದ್ಧಿವಂತಿಕೆಯಲ್ಲಿ ವ್ಯತ್ಯಾಸ ಇದೆ ಎಂಬ ಕಾರಣಕ್ಕೆ ತಾಯಿ ಅವರಿಗೆ ತಾರತಮ್ಯ ಮಾಡುವುದಿಲ್ಲ. ಅದೇ ರೀತಿ ಅಭಿನಯದಲ್ಲಿ ಕೇವಲ ರೂಪಕ್ಕೆ ಬೆಲೆ ಇಲ್ಲ. ಚಿತ್ರರಂಗ ಬಯಸುವ ರೂಪ ನನಗಿಲ್ಲ. ಆದರೆ ಯಶಸ್ಸಿಗೆ ಪ್ರಾಮಾಣಿಕ ಪ್ರಯತ್ನವೇ ಕಾರಣ.

2. ದುನಿಯಾ ಚಿತ್ರದ ಯಶಸ್ಸಿನ ಬಗ್ಗೆ ಹೇಳಿ?

ವಿಜಯ್‌ - ಚಿತ್ರದ ಉದ್ದಕ್ಕೂ ಸಾಕಷ್ಟು ಪರಿಶ್ರಮ ಪಟ್ಟಿದ್ದೇನೆ. ಬದುಕಿನ ನೋವು ಸಂಕಟಗಳು ಮನುಷ್ಯನನ್ನು ಎಂಥ ಸ್ಥಿತಿಗೆ ಕೊಂಡೊಯ್ಯುತ್ತದೆ ಎಂಬ ಅರಿವು ಮೂಡಿಸಿದ್ದು ಇದೇ ಚಿತ್ರ.

3. ಕಷ್ಟವೇ ನಿಮ್ಮ ಜೀವನವಾಗಿತ್ತು ಎನ್ನುವ ಮಾತಿದೆಯೆಲ್ಲಾ?

ವಿಜಯ್‌ - ಅಂತಹ ಕಷ್ಟ ಇರಲಿಲ್ಲ. ಅಪ್ಪ-ಅಮ್ಮ ನನಗೆ ಯಾವುದಕ್ಕೂ ಕೊರತೆ ಇಲ್ಲದ ಹಾಗೆ ಬೆಳೆಸಿದ್ರು. ಆದರೂ ಶ್ರೀಮಂತ ಮಕ್ಕಳನ್ನು ನೋಡಿದರೆ ಆ ಸಿರಿವಂತಿಕೆ ನನಗಿಲ್ಲವಲ್ಲ ಎಂದು ಬೇಸರ ಆಗುತ್ತಿತ್ತು.

4. ದುನಿಯಾ ಗೆಲುವಿನ ನಂತರ ಪ್ರತಿಕ್ರಿಯೆ ಹೇಗಿದೆ?

ವಿಜಯ್‌ - ಚಿತ್ರರಂಗ ಪ್ರವೇಶಿಸಿ ಹಲವು ವರ್ಷಗಳಾಗಿವೆ. ಕೆಲವು ನಿರ್ದೇಶಕರು ನನ್ನ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುತ್ತಿ ದ್ದಾರೆ. ಎಲ್ಲೊ ಮೂಲೆಯಲ್ಲಿ ಬಿದ್ದಿದ್ದ ವೇಸ್ಟ್‌ ಪ್ರಾಡಕ್ಟ್‌ ಒಳ್ಳೆ ಜಾಗಕ್ಕೆ ಬಂದು ಸೇರಿದೆ ಎಂದು ಆಶ್ಚರ್ಯಪಡುವವರೂ ಇದ್ದಾರೆ.

5. ಆ ಗೆಲುವು ಅವಕಾಶಗಳ ರಹದಾರಿಯಾಗಿರಬೇಕಲ್ಲಾ?

ವಿಜಯ್‌ - ಹೌದು. ಹಾಗಂತ ಒಂದೆ ಸಲ ಹತ್ತಾರು ಚಿತ್ರಗಳಲ್ಲಿ ಮಿಂಚಿ ನಂತರ ಮೂಲೆಗುಂಪಾಗುವುದು ನನಗೆ ಇಷ್ಟವಿಲ್ಲ. ನಿಧಾನವಾದರೂ ಒಳ್ಳೆ ಅವಕಾಶಗಳನ್ನು ಒಪ್ಪಿ ಕೊಳ್ಳುತ್ತೇನೆ. ಬದುಕಲಿಕ್ಕಾಗಿ ಏನಾದರೂ ಮಾಡುವುದು ಅನಿವಾರ್ಯ. ಈಗಿನ ಆರ್ಥಿಕ ಸ್ಥಿತಿ ಸುಧಾರಿಸಿಕೊಳ್ಳಲು 3 ಚಿತ್ರಗಳಲ್ಲಿ ಅಭಿನಯಿಸುತ್ತಿದ್ದೇನೆ. ಆ ಮೇಲೆ 1 ವರ್ಷ ಗ್ಯಾಪ್‌.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada