»   » ಅಥೆನ್ಸ್‌ನಲ್ಲಿ ಟಿ.ಎಸ್‌.ನಾಗಾಭರಣ

ಅಥೆನ್ಸ್‌ನಲ್ಲಿ ಟಿ.ಎಸ್‌.ನಾಗಾಭರಣ

Posted By: Staff
Subscribe to Filmibeat Kannada
Nagabharana
'ಜನುಮದ ಜೋಡಿ" ಖ್ಯಾತಿಯ ಪ್ರಶಸ್ತಿ ವಿಜೇತ ಚಿತ್ರಗಳ ನಿರ್ದೇಶಕ ಟಿ.ಎಸ್‌.ನಾಗಾಭರಣ ಮತ್ತೆ ಸುದ್ದಿಯಲ್ಲಿದ್ದಾರೆ.  ಇತ್ತೀಚಿನ 'ಚಿಗುರಿದ ಕನಸು" ಚಿತ್ರದ ಮೂಲಕ ಅಪಾರ ಭರವಸೆ ಹಾಗೂ ಅನುಕಂಪಕ್ಕೆ ತುತ್ತಾಗಿದ್ದ ನಾಗಾಭರಣ, ಉದಯ ಟೀವಿಯ 'ಮಹಾಮಾಯಿ" ಧಾರಾವಾಹಿಯ ಮೂಲಕ ಮಾನವಂತರ ಕ್ರೋಶಕ್ಕೆ ತುತ್ತಾಗಿದ್ದರು. ಪ್ರಸ್ತುತ ನಾಗಾಭರಣ ಸುದ್ದಿಯಲ್ಲಿರುವುದಕ್ಕೆ ಕಾರಣ, ಚಿಗುರಿದ ಕನಸು ಚಿತ್ರವೂ ಅಲ್ಲ , ಮಹಾಮಾಯಿಯೆಂಬ ಭಯಾನಕ ಧಾರಾವಾಹಿಯೂ ಅಲ್ಲ . ಇದು ಅಥೆನ್ಸ್‌ ಮಹಾತ್ಮೆ !

ಮಕ್ಕಳು ಹಾಗೂ ಯುವ ಜನತೆಯ ಚಿತ್ರಗಳ ಅಂತರರಾಷ್ಟ್ರೀಯ ಮಂಡಳಿಯ ಸಭೆಯಲ್ಲಿ ಪಾಲ್ಗೊಳ್ಳಲು ನಾಗಾಭರಣರಿಗೆ ಆಹ್ವಾನ ದೊರೆತಿದೆ. ಈ ಪ್ರತಿಷ್ಠಿತ ಮಂಡಳಿಯ ಸಭೆ ಜೂನ್‌ 16ರಿಂದ 23ರವರೆಗೆ ಅಥೆನ್ಸ್‌ನಲ್ಲಿ ನಡೆಯಲಿದೆ. ಮಂಡಳಿಯ ನಿರ್ದೇಶಕರಲ್ಲಿ ನಾಗಾಭರಣ ಕೂಡ ಒಬ್ಬರಾಗಿದ್ದಾರೆ.

ಪ್ರಸ್ತುತ, ನಾಗಾಭರಣ ಅಥೆನ್ಸ್‌ಗೆ ಪಾದ ಬೆಳೆಸಿದ್ದು , ಈ ಪ್ರವಾಸದ ಅವಧಿಯಲ್ಲಿ 'ಕಿಡ್ಸ್‌ ಫಾರ್‌ ಕಿಡ್ಸ್‌" ಎನ್ನುವ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲೂ ಭಾಗವಹಿಸುತ್ತಿದ್ದಾರೆ. ಈ ಚಿತ್ರೋತ್ಸವದಲ್ಲಿ ನಾಗಾಭರಣರದ್ದು ಜ್ಯೂರಿಯ ಪಾತ್ರ.ಅಥೆನ್ಸ್‌ ಪ್ರವಾಸ ನಾಗಾಭರಣರ ಸೃಜನಶೀಲ ಶಕ್ತಿಯನ್ನು ಮರಳಿ ಉದ್ದೀಪಿಸಲಿ. ಮಹಾಮಾಯಿ ಅವರನ್ನು ಕಾಯಲಿ !

English summary
T.S. Nagabharana, noted kannada film director, invited to attend the board meeting of the International Centre of Films for Children and Young People to be held in Athens from June 16 to 23
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada