»   » ದೇಸಾಯಿಯ ‘ಕ್ಷಣ ಕ್ಷಣ’ ಚಿತ್ರದಲ್ಲಿ ಅಮೆರಿಕನ್ನಡತಿ ಸೌಮ್ಯಮೂರ್ತಿ!

ದೇಸಾಯಿಯ ‘ಕ್ಷಣ ಕ್ಷಣ’ ಚಿತ್ರದಲ್ಲಿ ಅಮೆರಿಕನ್ನಡತಿ ಸೌಮ್ಯಮೂರ್ತಿ!

Posted By:
Subscribe to Filmibeat Kannada

‘ಮಿಸ್‌ ಕ್ಯಾಲಿಫೋರ್ನಿಯಾ’ ಚಿತ್ರದಲ್ಲಿ ಹಳ್ಳಿ ಹುಡುಗಿ ಪಾತ್ರದಲ್ಲಿ ಗಮನ ಸೆಳೆದಿದ್ದ ಅಮೆರಿಕನ್ನಡತಿ ಸೌಮ್ಯಾಗೆ, ಮತ್ತೊಂದು ಅವಕಾಶ ಹುಡುಕಿಕೊಂಡು ಬಂದಿದೆ. ಸುನೀಲ್‌ ಕುಮಾರ್‌ ದೇಸಾಯಿ ನಿರ್ದೇಶನದ ‘ಕ್ಷಣ ಕ್ಷಣ’ ಚಿತ್ರದಲ್ಲಿ ಆಕೆ ನಟಿಸಲಿದ್ದಾರೆ.

ಪ್ರೇಮಾ, ಕಿರಣ್‌ ರಾಥೋಡ್‌, ಶ್ರೀದೇವಿಕಾ ಮಧ್ಯೆ ಈಕೆಗೊಂದು ಮುಖ್ಯಪಾತ್ರವಿದೆಯಂತೆ. ಈ ಬಗ್ಗೆ ಸೌಮ್ಯ ದಟ್ಸ್‌ ಕನ್ನಡಕ್ಕೆ ಮಾಹಿತಿ ನೀಡಿದ್ದು, ಜುಲೈನಲ್ಲಿ ಚಿತ್ರೀಕರಣ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.

ನ್ಯೂಯಾರ್ಕ್‌ ನಿವಾಸಿಯಾದ ಈಕೆ, ಅಲ್ಲಿ ಉದ್ಯೋಗಿ. ತಮ್ಮ ಚೊಚ್ಚಲ ಅಭಿನಯದ ‘ಮಿಸ್‌.ಕ್ಯಾಲಿಫೋರ್ನಿಯಾ’ ಚಿತ್ರದ ಬಿಡುಗಡೆ, ಪ್ರೇಕ್ಷಕರ ಪ್ರತಿಕ್ರಿಯೆ ಗಮನಿಸಲು ಅವರು, ಬೆಂಗಳೂರಿಗೆ ಇತ್ತೀಚೆಗೆ ಬಂದಿದ್ದರು.

ಪುಟ್ಟಮಾತುಕತೆಯ ವೇಳೆ, ಬೆಂಗಳೂರಿನ ಟ್ರಾಫಿಕ್‌ ಕಿರಿಕಿರಿ ನೆನೆದು ಅವರು ಮುಖ ತಿರುಚಿದರು. ಬೆಂಗಳೂರಿನ ನಂಟು ನೆನಪು ಮಾಡಿಕೊಂಡು ಮುಖ ಅರಳಿಸಿದರು. ಕೂಡ್ಲೂ ರಾಮಕೃಷ್ಣರ ಸಹಕಾರ ಸ್ಮರಿಸಿದರು. ದತ್ತಣ್ಣ, ಜಯಂತಿ ಎದುರು ನಟಿಸಿದ ಮೊದಲ ಸನ್ನಿವೇಶ ನೆನಪಿಸಿಕೊಂಡು ರೋಮಾಂಚಿತರಾದರು. ಕೂಡ್ಲೂ ಸಹಕಾರಕ್ಕೆ ಪದೇಪದೇ ಥ್ಯಾಂಕ್ಸ್‌ ಹೇಳಿದರು.

ಚಿತ್ರಪ್ರಪಂಚದ ಬಗ್ಗೆ ಆಸೆ, ಹಂಬಲ ಎಲ್ಲವೂ ಇದೆ. ನಾನು ಅಪ್ಪಟ ಕನ್ನಡತಿ. ಬೆಂಗಳೂರಿನಲ್ಲಿ ಬಂಧುಗಳಿದ್ದಾರೆ. ಜೊತೆಗೆ ಸಾಕಷ್ಟು ಗೆಳೆಯರೂ ಇದ್ದಾರೆ. ಸೂಕ್ತ ಅವಕಾಶಗಳು ಸಿಕ್ಕಿದರೆ, ಇಲ್ಲೇ ನೆಲೆಯೂರುವುದಾಗಿ ಸೌಮ್ಯ ಹೇಳಿದರು.

ಅಭಿನಯ ನನ್ನ ಹವ್ಯಾಸ. ಬಿಡುವಿನ ವೇಳೆ ನಾಟಕಗಳಲ್ಲಿ ನಟಿಸುತ್ತಿರುತ್ತೇನೆ. ದಟ್ಸ್‌ ಕನ್ನಡದಲ್ಲಿ ಪ್ರಕಟವಾದ ಜಾಹೀರಾತು, ನನ್ನನ್ನು ಸ್ಯಾಂಡಲ್‌ವುಡ್‌ಗೆ ಬರುವಂತೆ ಮಾಡಿತು. ಮುಂದಿನ ಚಿತ್ರದಲ್ಲಿ ನಿರ್ದೇಶಕರು ಒಪ್ಪಿದರೆ, ನಾನೇ ಡಬ್ಬಿಂಗ್‌ ಮಾಡ್ತೇನೆ ಎಂದ ಸೌಮ್ಯ ಅನಿವಾರ್ಯ ಕಾರಣಗಳಿಂದ ಮಾತು ಮುಗಿಸಿದರು.

Post your views

ಪೂರಕ ಓದಿಗೆ
ಸೌಮ್ಯ ನೀ ಏನಂತಿ, ಸ್ಯಾಂಡಲ್‌ವುಡ್‌ನಲ್ಲಿ ಅಮೆರಿಕನ್ನಡತಿ
ಸೌಮ್ಯ ಮೂರ್ತಿ ಗ್ಯಾಲರಿ
ಮಿಸ್‌ ಕ್ಯಾಲಿಫೋರ್ನಿಯಾ ಗ್ಯಾಲರಿ
‘ಮಿ.ಕ್ಯಾಲಿಪೋರ್ನಿಯಾ’ ಪಕ್ಕಾ ಎನ್‌ಆರ್‌ಐ ಚಿತ್ರ


ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada