»   » ನೋಟ 1, ಸುದ್ದಿ 7ಜ್ಯೂನಿಯರ್‌ ಮಾಲಾಶ್ರೀ.. ತೆರೆ ಮೇಲೆ ಪ್ರೇಮ್‌-ರಕ್ಷಿತಾ!

ನೋಟ 1, ಸುದ್ದಿ 7ಜ್ಯೂನಿಯರ್‌ ಮಾಲಾಶ್ರೀ.. ತೆರೆ ಮೇಲೆ ಪ್ರೇಮ್‌-ರಕ್ಷಿತಾ!

Posted By:
Subscribe to Filmibeat Kannada


ಮಾಲಾಶ್ರೀ ಸ್ಥಾನವನ್ನು ತುಂಬುವ ಹಂಬಲದಿಂದ ಬಂದಿರುವ ಪ್ರಿಯಾ ಹಾಸನ್‌ ಅಭಿನಯ-ನಿರ್ದೇಶನ-ನಿರ್ಮಾಣದ ‘ಜಂಭದ ಹುಡುಗಿ’ ಈವಾರ ತೆರೆ ಕಂಡಿದೆ. ಡ್ಯೂಪ್‌ ಬಳಸದೇ ಅವರು ಆ್ಯಕ್ಷನ್‌ ದೃಶ್ಯಗಳಲ್ಲಿ ನಟಿಸಿದ್ದಾರಂತೆ. ಚಿತ್ರದ ಹೆಸರು ‘ಜಂಭದ ಹುಡುಗಿ’ಯಾದರೂ, ಇದು ಹೃದಯವಂತರಿಗೆ ಮಾತ್ರ ಅನ್ನುತ್ತದೆ ಚಿತ್ರದ ಜಾಹೀರಾತು.

***

ಆಗಸ್ಟ್‌ 24ರಂದು ‘ಪ್ರೀತಿ ಏಕೆ ಭೂಮಿ ಮೇಲಿದೆ?’ ಬಿಡುಗಡೆ. ಪ್ರೇಮ್‌ ಜೊತೆ ರಕ್ಷಿತಾ ಸಹಾ ಚಿತ್ರದಲ್ಲಿದ್ದಾರಂತೆ. ಮದ್ವೆಯಾದ ಮೇಲೆ ಸುಂಟರಗಾಳಿ ಹೇಗಿದೆಯೋ ನೋಡೋಣ ಬಿಡಿ.

***

90ಕೋಟಿ ಅಂದಾಜಿನ ತಮಿಳಿನ ‘ಶಿವಾಜಿ’ ಚಿತ್ರದಿಂದ, ಯಾವ್ಯಾವ ಕನ್ನಡ ಚಿತ್ರಗಳಿಗೆ ಪೆಟ್ಟಾಗುವುದೋ ಕಾದು ನೋಡಬೇಕು. ಈಗಾಗಲೇ ಮುಂದಿನ ಎರಡು ವಾರಗಳ ಟಿಕೆಟ್‌ಗಳು ಬುಕ್‌ ಆಗಿವೆ. ಕಾಳಸಂತೆಯಲ್ಲಿ ಟಿಕೆಟ್‌ ಬೆಲೆ ಸಾವಿರದಿಂದ ಎರಡು ಸಾವಿರದ ತನಕ ಇದೆ! ಕನ್ನಡ ಚಿತ್ರಗಳಿಗೆ ಈ ಭಾಗ್ಯ ಸಿಗೋದು ಎಂದು? ಸಿಗುತ್ತಾ?

***

‘ದುನಿಯಾ’ 17ನೇ ವಾರವಾದರೇ, ‘ಮುಂಗಾರು ಮಳೆ’ 25ನೇ ವಾರ. ಈ ರೇಸ್‌ಗೆ ಯಾವ ಚಿತ್ರ ಸೇರಿಕೊಳ್ಳುತ್ತದೆಯೋ ನೀವೇನಾದರೂ ಊಹಿಸುವಿರಾ?

***

‘ಪಲ್ಲಕ್ಕಿ’ ಕೆಳಕ್ಕೆ ಬಿತ್ತು ಅನ್ನುವಾಗಲೇ, ಚೇತರಿಸಿಕೊಂಡಿದೆ. ಹುಡುಗಿಯರ ನಿದ್ದೆ ಕೆಡಿಸುವ ‘ಪ್ರೇಮ್‌’ ಮತ್ತು ರವೆಉಂಡೆಯಂತಿರುವ ರಮಣಿತೂ ಚೌಧುರಿಯ ಈ ಚಿತ್ರದ ಪ್ರದರ್ಶನ 7ನೇ ವಾರದಲ್ಲಿ ಮುನ್ನುಗಿದೆ. ಪ್ರೇಮ್‌ ಹಾಡಲ್ಲಿ ಓಕೆ. ಅಭಿನಯದಲ್ಲಿ?

***

‘ಹುಡುಗಾಟ’ ಎರಡನೇ ವಾರಕ್ಕೆ ಕಾಲಿಟ್ಟಿದೆ. ಚಿತ್ರ ನೋಡಿದವರೆಲ್ಲರೂ ಖುಷಿಯಲ್ಲಿಯೇ ಇದ್ದಾರೆ. ಈ ಮಧ್ಯೆ ಜೂ.22ರಿಂದ ಎಸ್‌.ನಾರಾಯಣ್‌ ನಿರ್ದೇಶನ ಮತ್ತು ನಿರ್ಮಾಣದ ‘ಚೆಲುವಿನ ಚಿತ್ತಾರ’ ಬಿಡುಗಡೆಯಾಗಲಿದೆ. ಅಂದ ಹಾಗೇ ಇದು ತಮಿಳಿನ ‘ಕಾದಲನ್‌’ ಚಿತ್ರದ ರೀಮೇಕು. ಈ ಬಗ್ಗೆ ನಿಮ್ಮದೇನೂ ಆಕ್ಷೇಪಣೆ ಇಲ್ಲವೇ?

***

ಸುದೀಪ್‌ ಕನಸಿನ ‘ನಂ.73, ಶಾಂತಿನಿವಾಸ ’ ಶುಕ್ರವಾರ ಬಿಡುಗಡೆ. ಬೇರೆ ನಟರ ಚಿತ್ರಗಳಿಗೆ ತೊಂದರೆಯಾಗಬಾರದು ಎಂದು, ಬಿಡುಗಡೆ ದಿನವನ್ನು ಮುಂದೂಡುತ್ತಲೇ ಬಂದಿದ್ದ ಸುದೀಪ್‌ ಚಿತ್ರಕ್ಕೆ ಒಳ್ಳೆ ಆರಂಭ ಸಿಕ್ಕಿದೆ. ಈ ಚಿತ್ರವೂ ರೀಮೇಕ್‌ ಅಂತೆ! ಆ ಮಾತ್ಯಾಕೆ ಅನ್ನುವಿರಾ?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada