»   » ‘ಶಿವಾಜಿ’ ಬಿಡುಗಡೆ : ಬೆಂಗಳೂರಲ್ಲಿ ಸ್ಥಿತಿ-ಗತಿ ಹೇಗಿದೆ?

‘ಶಿವಾಜಿ’ ಬಿಡುಗಡೆ : ಬೆಂಗಳೂರಲ್ಲಿ ಸ್ಥಿತಿ-ಗತಿ ಹೇಗಿದೆ?

Posted By: Super
Subscribe to Filmibeat Kannada
Sivaji-The Boss
ಬೆಂಗಳೂರು : ರಜನಿ ಕಾಂತ್‌ ಅಭಿನಯದ ಬಹುಕೋಟಿ(ಸುಮಾರು 90ಕೋಟಿ) ವೆಚ್ಚದ 'ಶಿವಾಜಿ "ಚಿತ್ರ ಅಪಸ್ವರಗಳ ನಡುವೆಯೂ ಶುಕ್ರವಾರ, ಬೆಂಗಳೂರು ಸೇರಿದಂತೆ ಕರ್ನಾಟಕದೆಲ್ಲೆಡೆ ಪ್ರದರ್ಶನಗೊಳ್ಳುತ್ತಿದೆ.

ಕರ್ನಾಟಕ ರಕ್ಷಣಾ ವೇದಿಕೆಯ ಬೆದರಿಕೆ ಹಿನ್ನೆಲೆಯಲ್ಲಿ ಪೊಲೀಸರು, ಚಿತ್ರಮಂದಿರಗಳಿಗೆ ಹೆಚ್ಚಿನ ಬಿಗಿಭದ್ರತೆ ಒದಗಿಸಿದ್ದಾರೆ. ಶುಕ್ರವಾರ ಮಧ್ಯಾಹ್ನ ಲಭ್ಯವಿರುವ ವರದಿಗಳ ಪ್ರಕಾರ, ಪರಿಸ್ಥಿತಿ ಶಾಂತವಾಗಿದೆ.

ಬೆಂಗಳೂರಿನ ಕಾವೇರಿ, ನಟರಾಜ್‌, ಪೂರ್ಣಿಮಾ, ಅಜಂತ, ಲಕ್ಷ್ಮಿ, ಶ್ರೀ ಬಾಲಾಜಿ, ಮುಕುಂದ, ಪುಷ್ಪಾಂಜಲಿ, ಈಶ್ವರಿ ಸೇರಿದಂತೆ 10ಚಿತ್ರಮಂದಿರಗಳು ಮತ್ತು ಮೂರು ಮಲ್ಟಿಪ್ಲೆಕ್ಸ್‌ಗಳಲ್ಲಿ ಚಿತ್ರ ಪ್ರದರ್ಶನಗೊಳ್ಳುತ್ತಿದೆ. ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ ಎಂದು ಹೆಚ್ಚುವರಿ ಪೊಲೀಸ್‌ ಆಯುಕ್ತ(ಕಾನೂನು ಮತ್ತು ಸುವ್ಯವಸ್ಥೆ ) ಬಿಪಿನ್‌ ಗೋಪಾಲಕೃಷ್ಣ ಸುದ್ದಿಗಾರರಿಗೆ ತಿಳಿಸಿದ್ದಾರೆ.

ರಾಜ್ಯದಲ್ಲಿ 1200ಚಿತ್ರಮಂದಿರಗಳಿದ್ದು, ಬೆಂಗಳೂರಿನ 13 ಮತ್ತು ಉಳಿದೆಡೆ 3ಕೇಂದ್ರಗಳಲ್ಲಿ ಶಿವಾಜಿ ಚಿತ್ರ ಪ್ರದರ್ಶನಗೊಳ್ಳುತ್ತಿದೆ.

ಕನ್ನಡೇತರ ಚಿತ್ರಗಳಿಗೆ ಕೆಲವು ಶರತ್ತುಗಳನ್ನುವೊಡ್ಡಿ, ಚಿತ್ರಪ್ರದರ್ಶನಕ್ಕೆ ನಿಯಮ ರೂಪಿಸಲಾಗಿದೆ. ಹೀಗಾಗಿ ಪ್ರದರ್ಶನಕ್ಕೆ ಅವಕಾಶ ನೀಡಿರುವುದಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹೇಳಿದೆ.

ಕಾವೇರಿ ವಿವಾದದ ಹಿನ್ನೆಲೆಯಲ್ಲಿ ಎರಡು ಕನ್ನಡ ಚಿತ್ರಗಳ ಚಿತ್ರೀಕರಣಕ್ಕೆ ತಮಿಳುನಾಡಿನಲ್ಲಿ, ತಮಿಳರು ತಡೆಯಾಡ್ಡಿದ್ದಾರೆ. ಈ ಕ್ರಮ ವಿರೋಧಿಸಿ, ಶಿವಾಜಿ ಚಿತ್ರಕ್ಕೆ ಬಹಿಷ್ಕಾರ ಹಾಕುತ್ತಿರುವುದಾಗಿ ರಕ್ಷಣಾ ವೇದಿಕೆ ಹೇಳಿತ್ತು.(ಏಜನ್ಸೀಸ್‌)

English summary
Sivaji-The Boss, the much- awaited film starring Tamil superstar Rajnikanth, was today(Jun.15) released in theatres here amid tight police security following threats by the Karnataka Rakshana Vedike that they would sabotage all screenings.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada