»   » ಸಿನಿಮಾದಲ್ಲಿ ಉತ್ಕಟ ಪ್ರೇಮಿಯಾದ ದೇಶಪ್ರೇಮಿ ಭಗತ್‌ಸಿಂಗ್‌

ಸಿನಿಮಾದಲ್ಲಿ ಉತ್ಕಟ ಪ್ರೇಮಿಯಾದ ದೇಶಪ್ರೇಮಿ ಭಗತ್‌ಸಿಂಗ್‌

Posted By: Super
Subscribe to Filmibeat Kannada

ನೈನಿತಾಲ್‌: ಸ್ವಾತಂತ್ರ್ಯ ಹೋರಾಟಗಾರ ಭಗತ್‌ಸಿಂಗ್‌ ಜೀವನ ಕುರಿತು ತೆಗೆದಿರುವ ಚಲನಚಿತ್ರದಲ್ಲಿ ಚಿತ್ರಿಸಿರುವ ಪ್ರೇಮ ದೃಶ್ಯಗಳ ಕುರಿತು ಭಗತ್‌ಸಿಂಗ್‌ ಕುಟುಂಬದವರು ಬೇಜಾರು ಮಾಡಿಕೊಂಡಿದ್ದು, ಅಂತಹ ದೃಶ್ಯಗಳನ್ನು ತಕ್ಷಣವೇ ತೆಗೆದುಹಾಕಬೇಕೆಂದು ಒತ್ತಾಯಿಸಿದ್ದಾರೆ.

ಉಧಾಮ್‌ ಸಿಂಗ್‌ ನಗರ ಜಿಲ್ಲೆಯ ಬಾಜ್ಪುರದಲ್ಲಿ ಚಿತ್ರಮಂದಿರದಿಂದ ಹೊರ ಬಂದ ನೂರಾರು ಅಭಿಮಾನಿಗಳು ಭಗತ್‌ ಸಿಂಗ್‌ ಚಿತ್ರದಲ್ಲಿರುವ ಪ್ರೇಮ ದೃಶ್ಯಗಳ ಬಗ್ಗೆ ಸಿಟ್ಟಾಗಿದ್ದಾರೆ. ಸ್ವಾತಂತ್ರ್ಯ ಸೇನಾನಿಗಳ ಬಂಧುಗಳ ಸಂಘಟನೆ ಪ್ರತಿಭಟನೆಯನ್ನು ಆಯೋಜಿಸಿತ್ತು.

ಪ್ರತಿಭಟನೆಯಲ್ಲಿ ಭಗತ್‌ಸಿಂಗ್‌ರ ಹತ್ತಿರದ ಸಂಬಂಧಿಗಳೂ ಇದ್ದರು. ಪ್ರೇಮದೃಶ್ಯಗಳನ್ನು ಪ್ರದರ್ಶಿಸುವುದರ ಮೂಲಕ ಭಗತ್‌ ಸಿಂಗ್‌ರನ್ನು ಬರೆಯ ಪ್ರೇಮಿ ಎಂದೇ ಚಿತ್ರಿಸಲಾಗಿದೆ. ಆದರೆ ಆತ ಒಬ್ಬ ಉತ್ಕಟ ದೇಶಪ್ರೇಮಿಯಷ್ಟೇ ಆಗಿದ್ದರು. ಭಗತ್‌ ಸಿಂಗ್‌ ಸ್ವಾತಂತ್ರ್ಯ ಹೋರಾಟದಲ್ಲಿ ಎಷ್ಟು ತಲ್ಲೀನರಾಗಿದ್ದರು ಎಂದರೆ ಅವರು ಮದುವೆ ವಿಷಯಗಳನ್ನು ಕಿವಿಗೇ ಹಾಕಿಕೊಳ್ಳುತ್ತಿರಲಿಲ್ಲ ಎಂದು ಭಗತ್‌ ಸಿಂಗ್‌ ಸೋದರ ಸಂಬಂಧಿ ಲಕ್ಷ್ಮೀಂದರ್‌ ಸಿಂಗ್‌ ತಮ್ಮ ಭಾಷಣದಲ್ಲಿ ಚಿತ್ರ ತಯಾರಕರನ್ನು ತರಾಟೆಗೆ ತೆಗೆದುಕೊಂಡರು. (ಇನ್ಫೋ ವಾರ್ತೆ)

English summary
Ninital : Freedom fighters relatives organization protest against bhagath movie

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada