»   » ಕೀರ್ತಿ ರೆಡ್ಡಿ ‘ಸೂಪರ್‌ ಸ್ಟಾರ್‌’ ಗಳಿಗೆಗಳನ್ನೇ ಮರೆತಿದ್ದಾರಾ?

ಕೀರ್ತಿ ರೆಡ್ಡಿ ‘ಸೂಪರ್‌ ಸ್ಟಾರ್‌’ ಗಳಿಗೆಗಳನ್ನೇ ಮರೆತಿದ್ದಾರಾ?

Posted By: Staff
Subscribe to Filmibeat Kannada

ಕೀರ್ತಿ ರೆಡ್ಡಿ ತವರಿಗೆ ಬಂದಿದ್ದರು. ಬೆಂಗಳೂರಿನ ಎಂ.ಜಿ. ರೋಡಲ್ಲಿ ಆಟವಾಡಿಕೊಂಡು ಬ್ರಿಗೆಡ್‌ ರೋಡಲ್ಲಿ ಮಜಾ ಹೊಡೆಯುತ್ತಿದ್ದ ತಮ್ಮ ಹಿಂದಿನ ದಿನಗಳನ್ನು ಮೆಲುಕು ಹಾಕುವ ಗೊಡವೆಗೆ ಅವರು ಹೋಗಲಿಲ್ಲ. ಸೂಪರ್‌ ಸ್ಟಾರ್‌ ಸಿನಿಮಾದ ತಮ್ಮ ಅನುಭವದ ಬುತ್ತಿಯನ್ನು ಅಪ್ಪಿ ತಪ್ಪಿ ಕೂಡ ಬಿಚ್ಚಲಿಲ್ಲ. ಪ್ರಾಯಶಃ ಆ ಪಾತ್ರವನ್ನೇ ಅವರೀಗ ಮರೆತು ಬಿಟ್ಟಿದ್ದಾರೆ !

ಯಾಕೆಂದರೆ, ಆ ಚಿತ್ರೀಕರಣದ ನಂತರ ಬಾಲಿವುಡ್‌ನ ಅಪೂರ್ವ ಅವಕಾಶ ಅವರಿಗೆ ಸಿಕ್ಕಿದ್ದು. ಅವರು ಬೆಂಗಳೂರಿಗೆ ಬಂದ ಕಾರಣ, ಶುಕ್ರವಾರ ತೆರೆಕಂಡ ತಮ್ಮ ಹೊಸ ಚಿತ್ರ'ಬಧಾಯಿ ಹೋ ಬಧಾಯಿ" ಪ್ರಚಾರಕ್ಕೆ.

ಕೀರ್ತಿ ಬಾಯಲ್ಲಿ ಹೊರಟ ಮಾತುಗಳೆಲ್ಲಾ ಬಾಲಿವುಡ್‌ನ ತಮ್ಮ ಹೊಸ ಸಿನಿಮಾ ಕುರಿತು...

''ನಾನು ಇದುವರೆಗೆ ನಟಿಸಿರುವ ಎಲ್ಲಾ ಸಿನಿಮಾಗಳ ಪೈಕಿ ಇದೇ ತುಂಬಾ ಖುಷಿಕೊಟ್ಟಿದ್ದು. ಅನಿಲ್‌ ಕಪೂರ್‌ ಜೊತೆ ಕೆಲಸ ಮಾಡಿದ ಅನುಭವವೇ ಚೆನ್ನ. ಅವರು ಶಿಸ್ತಿನ ಸಿಪಾಯಿ ಬೆಳಗ್ಗೆ 4.30ಕ್ಕೇ ಏಳುತ್ತಿದ್ದರು. ಸಿನಿಮಾಗಾಗಿ ಸ್ವಲ್ಪ ದಪ್ಪ ಆದರು. ಆಮೇಲೆ ಸಣ್ಣ ಆಗಬೇಕಾಯಿತು. ಅದಕ್ಕೂ ಹೆಣಗಾಡಿದರು. ಅವರ ಇನ್‌ವಾಲ್ವ್‌ಮೆಂಟ್‌ ಎಲ್ಲರಿಗೂ ಬರೋಲ್ಲ. ಅನಿಲ್‌ಗೆ ಹ್ಯಾಟ್ಸಾಫ್‌.

ನಿರ್ದೇಶಕ ಸತೀಶ್‌ ಕೌಶಿಕ್‌ ಕೂಡ ಅಷ್ಟೆ. ನೋಡೋಕೆ ತಮಾಷೆ ಮಾತ್ರ ಮಾಡೋರ ಥರಾ ಕಾಣಿಸ್ತಾರೆ. ಆದರೆ ನಿರ್ದೇಶಕರಾಗಿ ಅವರು ಭಾರಿ ಸ್ಟ್ರಿಕ್ಟ್‌. ತೆರೆ ಮೇಲೆ ನಗಿಸುವ ಅವರು ಶಾಟ್‌ಗಳು ಪಕ್ಕಾ ಆಗೋವರಗೆ ಪಟ್ಟು ಬಿಡೋದಿಲ್ಲ. ಅವರ ವೃತ್ತಿಪರತೆಯಿಂದ ನಾನು ಸಾಕಷ್ಟು ಕಲಿತಿದ್ದೇನೆ.

ಈ ಸಿನಿಮಾದ ವೈಶಿಷ್ಟ್ಯ ಎಂದರೆ ಸ್ಕಿೃಪ್ಟ್‌ ಪಕ್ಕಾ ಆಗಿದ್ದಿದ್ದು. ಶಾಟ್‌ ಬೈ ಶಾಟ್‌, ಸೀನ್‌ ಬೈ ಸೀನ್‌ ಎಲ್ಲವೂ ಬರೆಯಲಾಗಿತ್ತು. ಹೊಟೇಲ್‌ ರೂಮಲ್ಲಿ ನಾಳಿನ ಕೆಲಸಕ್ಕೆ ಇಂದೇ ಹೋಂವರ್ಕ್‌ ಮಾಡಿಕೊಳ್ಳುವ ಅವಕಾಶ ನಮ್ಮದಾಗಿತ್ತು. ಹಾಗಿದ್ದಾಗ ನಮಗೂ ಸುಲಭ. ನಿರ್ದೇಶಕರಿಗೂ ಸುಲಭ. ಒಟ್ಟಿನಲ್ಲಿ ಮಾಡಿುವ ಕೆಲಸಕ್ಕೆ ಜನ ಬಧಾಯಿ ಹೋ ಬಧಾಯಿ ಅಂದರೆ ಸಾಕು"".

ಅಂದಹಾಗೆ, ಸೂಪರ್‌ ಸ್ಟಾರ್‌ ಚಿತ್ರೀಕರಣದ ನಂತರ ತಯಾರಾಗಿರುವ ಬಧಾಯಿ ಹೋ... ತೆರೆಕಂಡಿದೆ. 'ಸೂಪರ್‌ ಸ್ಟಾರ್‌"ನ ಹಾಡುಗಳು 6 ತಿಂಗಳಷ್ಟು ಹಳೆಯದಾಗಿದೆ. ಹನುಮಂತು ಪುಣ್ಯಕ್ಕೆ ಚಿತ್ರ ಮುಂದಿನ ವಾರ ತೆರೆ ಕಾಣಲಿದೆ. ಆದರದು ಕೀರ್ತಿಗೆ ಗೊತ್ತಿರಲಿಕ್ಕಿಲ್ಲ !

English summary
Work is fun : Keerti Reddy in bangalore

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada