»   » ಜಗ್ಗೇಶ್‌-ರಾಧಿಕಾ ಚೌಧುರಿ ಲುಕ್ಕು ಡಿಕ್ಕಿ!

ಜಗ್ಗೇಶ್‌-ರಾಧಿಕಾ ಚೌಧುರಿ ಲುಕ್ಕು ಡಿಕ್ಕಿ!

Subscribe to Filmibeat Kannada

*ಟ್ಸ್‌ಕನ್ನಡ ಬ್ಯೂರೋ

ಜಗ್ಗೇಶ್‌ ವರಸೆಯ ನವರಸಗಳು ಇನ್ನೂ ಜೀವಂತವಾಗಿವೆಯೇ?
ಒಂದಾದ ನಂತರ ಒಂದರಂತೆ ಚಿತ್ರೀಕರಣದಲ್ಲಿ ಅವರು ಬ್ಯುಸಿಯಾಗುತ್ತಿರುವುದನ್ನು ನೋಡಿದರೆ ಹೌದು ಅನಿಸುತ್ತೆ. ‘ಕಾಸು ಇದ್ದೋನೆ ಬಾಸು’ ಮೊದಲ ಪ್ರತಿ ನೋಡಿ, ‘ಹುಚ್ಚನ ಮದುವೆಯಲ್ಲಿ ಉಂಡವನೇ ಜಾಣ’ ಚಿತ್ರದ ಲುಕ್ಕೂ ಲುಕ್ಕೂ ಡಿಕ್ಕಿ ಆಗೋಯ್ತು.. ಎಂಬ ಹಾಡಿಗೆ ಹೆಜ್ಜೆ ಹಾಕಿ, ನಿರ್ಮಾಪಕ- ಪ್ರದರ್ಶಕರ ಸೇವಾ ಶುಲ್ಕ ಹಂಚಿಕೆ ತಗಾದೆಯ ಸಭೆಗೂ ಹಾಜರಾಗುವ ಜಗ್ಗೇಶ್‌ ಶೆಡ್ಯೂಲು ಸದ್ಯಕ್ಕೆ ಫುಲ್ಲೋ ಫುಲ್ಲು.

ಮಹತ್ವಾಕಾಂಕ್ಷೆಯ ‘ಮೇಕಪ್‌’ ಮಕಾಡೆ ಮಲಗಿದ ನಂತರ ಜಗ್ಗಿ ಮತ್ತೆ ತಮ್ಮ ಎಂದಿನ ಹಳೇ ಲಯದ ಐತೇರೀಕಿ.. ತಮಾಷೆಯ ವರಸೆಗೇ ಜೋತುಬಿದ್ದಿದ್ದಾರೆ. ಎ.ಆರ್‌.ಬಾಬು ಜೊತೆ ಕೂತು ಕತೆ ಹೊಸೆದು, ಅವರ ಕೈಲೇ ಚಿತ್ರ ನಿರ್ದೇಶಿಸಿ ‘ಕಾಸು ಇದ್ದೋನೆ ಬಾಸು’ ಚಿತ್ರವನ್ನು ಡಬ್ಬಕ್ಕೆ ತುಂಬಿಸಿರುವ ಜಗ್ಗೇಶ್‌ ವಿರಾಮ ತೆಗೆದುಕೊಳ್ಳಲಿಲ್ಲ. ಯಾಕೆಂದರೆ, ಅಷ್ಟು ಹೊತ್ತಿಗೆ ಜಗ್ಗಿ ಕೈಗೆ ‘ಹುಚ್ಚನ ಮದುವೆಯಲ್ಲಿ ಉಂಡವನೇ ಜಾಣ’ ಸಿಕ್ಕಿತು.

ಮೊನ್ನೆ ತಿಪಟೂರಿನ ನಡುಬೀದಿಯಲ್ಲಿ ‘ಹುಮಉಂಜಾ’ ಚಿತ್ರಕ್ಕೆ ಕೊನೆ ಹಾಡಿನ ಚಿತ್ರೀಕರಣ. ಅದಾದ ನಂತರ ಚಿತ್ರೀಕರಣ ಸಂಪೂರ್ಣ. ಡಬ್ಬಿಂಗ್‌ ಒಂದೇ ಈಗ ಬಾಕಿ. ‘ಕಣ್ಣು ಕಣ್ಣು ಕಲೆತಾಗ...’ ಹಾಡಿನ ಕಂಗ್ಲೀಷ್‌ ರೂಪದಂತಿದ್ದ ‘ಲುಕ್ಕೂ ಲುಕ್ಕೂ ಡಿಕ್ಕಿ ಆಗೋಯ್ತು...’ ಹಾಡಲ್ಲಿ ಡಿಕ್ಕಿ ಆಗಿದ್ದು ಕೇವಲ ಕಣ್ಣುಗಳಷ್ಟೇ ಅಲ್ಲ ಅಂದರೆ ನಾಯಕಿ ರಾಧಿಕಾ ಚೌಧುರಿ ಕೆನ್ನೆ ಕೆಂಪಾದೀತು.

ಅಂದಹಾಗೆ, ‘ಡಿಕ್ಕಿ... ’ ಹಾಡನ್ನು ಬರೆದಿರುವವರು ಸೊಂಟದ ಇಸ್ಯ ಖ್ಯಾತಿಯ ಡಾ.ನಾಗೇಂದ್ರ ಪ್ರಸಾದ್‌. ಕೆಲವು ಸಾಲುಗಳು ತಮ್ಮವು ಎಂದು ಭಂಗೀರಂಗ ಕ್ಲೇಮ್‌ ಮಾಡುತ್ತಾರೆ. ಸಿ.ಎಚ್‌.ಬಾಲಾಜಿಸಿಂಗ್‌ ನಿರ್ದೇಶನದ ಈ ಚಿತ್ರಕ್ಕೆ ರಿಚರ್ಡ್‌ ಲೂಯಿಸ್‌ ಸಂಭಾಷಣೆ ಬರೆದಿದ್ದಾರೆ. ಜಗ್ಗೇಶ್‌, ರಾಧಿಕಾ ಚೌಧುರಿ, ರಶ್ಮಿ, ದೊಡ್ಡಣ್ಣ, ಗಿರಿಜಾ ಲೋಕೇಶ್‌, ಶರತ್‌ ಲೋಹಿತಾಶ್ವ, ದತ್ತಣ್ಣ ಮೊದಲಾದವರು ನಟಿಸಿದ್ದಾರೆ.

Post Your Views

ಇದನ್ನೂ ಓದಿ-
ಜಗ್ಗೇಶ್‌ ಡೋಸು ; ಕಾಸು ಇದ್ದೋನೆ ಬಾಸು


ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada