»   » ಉಪ್ಪಿ ಎಂಬ ‘ನಂದಗೋಪಾಲ’!

ಉಪ್ಪಿ ಎಂಬ ‘ನಂದಗೋಪಾಲ’!

Posted By:
Subscribe to Filmibeat Kannada

ಮೈಸೂರು : ಯಾವುದೇ ಸಂಭಾವನೆಯಿಲ್ಲದೇ ನಂದಿನಿ ಹಾಲಿನ ಪ್ರಚಾರ ರಾಯಭಾರಿಯೆಂದು ಗುರ್ತಿಸಿಕೊಂಡಿರುವ ಚಿತ್ರನಟ ಉಪೇಂದ್ರ ಅವರನ್ನು ಮೈಸೂರಿನಲ್ಲಿ ಶುಕ್ರವಾರ ಸನ್ಮಾನಿಸಲಾಗುತ್ತಿದೆ.

ನಗರದ ಕಲಾಮಂದಿರದಲ್ಲಿ ಸಂಜೆ 6.30ಕ್ಕೆ ನಡೆಯಲಿರುವ ಈ ಕಾರ್ಯಕ್ರಮವನ್ನು ವಿಆರ್‌ಎಲ್‌ ಸಮೂಹದ ವಿಜಯ ಕರ್ನಾಟಕ, ವಿಜಯ್‌ ಟೈಮ್ಸ್‌ ಮತ್ತು ಉಷಾಕಿರಣ ಪತ್ರಿಕೆಗಳು ಪ್ರಾಯೋಜಿಸಿದೆ.

ಮೈಸೂರು- ಚಾಮರಾಜನಗರ ಜಿಲ್ಲಾ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ಮೈಮುಲ್‌)ದ ಈ ಕಾರ್ಯಕ್ರಮದಲ್ಲಿ ಉಪೇಂದ್ರ ಅವರನ್ನು ಅಭಿನಂದಿಸಿ, ನಂದಗೋಪಾಲ ಬಿರುದನ್ನು ದಕ್ಷಿಣ ವಲಯದ ಐಜಿಪಿ ಕೆಂಪಯ್ಯ ಪ್ರದಾನ ಮಾಡುವರು.
ಮೈಸೂರು ವಿವಿ ಕುಲಪತಿ ಪ್ರೊ.ಜೆ.ಶಶಿಧರಪ್ರಸಾದ್‌ ಅಧ್ಯಕ್ಷತೆ ವಹಿಸುವರು. ಸಾಹಿತಿ ಹಾಗೂ ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ ಅಭಿನಂದನಾ ಭಾಷಣ ಮಾಡಲಿದ್ದಾರೆ. ನಟಿ ರಮ್ಯ ಮೈಸೂರು ಡೈರಿಗೆ ಐಎಸ್‌ಓ 9001 : 2000 ದೃಢೀಕರಣ ಪತ್ರವನ್ನು ಹಸ್ತಾಂತರಿಸುವರು.


ಪೂರಕ ಓದಿಗೆ :

  • ‘ನಂದಗೋಪಾಲ’ನಾದನು ಉಪೇಂದ್ರ !

  • ಉಪೇಂದ್ರ-ಪ್ರಿಯಾಂಕ-ಪುಟ್ಟಗೌರಿ!
  • Post your views

    ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada