ವಿಶ್ವದ ವಾಣಿಜ್ಯಶಾಲೆಗಳಲ್ಲಿ ‘ಕ್ರಿಶ್‌’ ಮೂಲಕ ಕಲಿಕೆ

By Staff

ಮುಂಬಯಿ : ಬಾಲಿವುಡ್‌ನಲ್ಲಿ ಮಿಂಚುತ್ತಿರುವ ಹೃತಿಕ್‌ ರೋಷನ್‌ ಅಭಿನಯದ ‘ಕ್ರಿಶ್‌’ ಚಿತ್ರಕ್ಕೆ ಜಾಗತಿಕ ಮನ್ನಣೆ ದೊರೆತಿದೆ. ಭಾರತ ಮತ್ತು ವಿಶ್ವದ ಪ್ರತಿಷ್ಠಿತ ವಾಣಿಜ್ಯ ಶಾಲೆಗಳಲ್ಲಿ ಈ ಚಿತ್ರ ಪಠ್ಯವಾಗಲಿದೆ.

ಈ ಚಿತ್ರವನ್ನು ಐಐಎಂಗಳು ಮತ್ತು ರಾಷ್ಟ್ರದ ಪ್ರಮುಖ ವಾಣಿಜ್ಯ ಮಹಾವಿದ್ಯಾಲಯಗಳು ಮಾತ್ರವಲ್ಲದೇ, ವಿದೇಶದಲ್ಲಿನ ವಾಣಿಜ್ಯ ವಿದ್ಯಾಲಯಗಳು, ವ್ಯವಹಾರ ನಿರ್ವಹಣೆ ಹಿನ್ನೆಲೆ ಕಲಿಕೆಯ ವಸ್ತುವಾಗಿ ಬಳಸಿಕೊಳ್ಳಲು ನಿರ್ಧರಿಸಿವೆ.

ಇಂದೋರ್‌ನ ಐಐಎಂ, ಹಾಂಕಾಂಗ್‌ ವಿವಿ, ಐರೋಪ್ಯ ರಾಷ್ಟ್ರಗಳು, ಉತ್ತರ ಅಮೆರಿಕಾ ಸೇರಿದಂತೆ ಪ್ರತಿಷ್ಠಿತ ವಾಣಿಜ್ಯ ಸಂಸ್ಥೆಗಳಲ್ಲಿ ‘ ಕ್ರಿಶ್‌’ ಅಧ್ಯಯನದ ವಸ್ತುವಾಗಲಿದೆ. ಇದು ಭಾರತೀಯ ಚಿತ್ರವೊಂದರ ಗಣನೀಯ ಸಾಧನೆ.ಯಾವುದೇ ಹಾಲಿವುಡ್‌ ಚಿತ್ರಕ್ಕೆ ಕಡಿಮೆಯಿಲ್ಲದಂತೆ ಈ ಚಿತ್ರವನ್ನು ನಿರ್ಮಿಸಲಾಗಿದೆ.

ಅತ್ಯುತ್ತಮ ನಿರ್ವಹಣಾ ತಂತ್ರ, ತಂತ್ರಗಳ ಅನುಷ್ಠಾನ, ಉತ್ಪಾದನಾ ತಂತ್ರ, ಕೈಗಾರಿಕಾ ನಿರ್ವಾಹಣೆ ಮತ್ತಿತರ ಅನೇಕ ವಿಷಯಗಳನ್ನು ಅರಿಯಲು ಸಾಧ್ಯ ಎನ್ನಲಾಗಿದೆ. ಬೆಂಗಳೂರಿನಲ್ಲಿ ‘ಕ್ರಿಶ್‌’ 2 ವಾರದಲ್ಲಿ 15 ಲಕ್ಷಗಳಿಸಿದೆ.

(ಏಜನ್ಸೀಸ್‌)

Post your views

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X