»   » ಅವರ ಹೆಂಡ ಅವರ ಬುರುಡೆ ಕುಡಿದುಕೊಳ್ಲಿ ಬಿಡ್ರಿ ಅಂತ ಹೆಂಡತೀನೇ ಹೇಳಿದರೆ ಗತಿ?

ಅವರ ಹೆಂಡ ಅವರ ಬುರುಡೆ ಕುಡಿದುಕೊಳ್ಲಿ ಬಿಡ್ರಿ ಅಂತ ಹೆಂಡತೀನೇ ಹೇಳಿದರೆ ಗತಿ?

Posted By: Staff
Subscribe to Filmibeat Kannada

ಅನು ಪ್ರಭಾಕರ್‌ಗೆ ಸಿಗರೇಟು ಇಷ್ಟವಾ? ಸಿಗರೇಟ್‌ ಸೇದೋದು ಬೇಡವಾದರೂ, ಸೇದೋರಂತೂ ಇಷ್ಟ. ಯಾಕೆಂದರೆ ಅವರ ಪತಿ ಕೃಷ್ಣಕುಮಾರ್‌ 'ಧಮ್‌"ಪತಿ. ಆಡುವ ಮಾತಿಗಿಂತ ಬಿಡುವ ಹೊಗೆಯೇ ಹೆಚ್ಚು.

ಜಯಂತಿಯ ಪ್ರೀತಿಯ ಮಗ ಪಂಡು ಉರುಫ್‌ ಕೃಷ್ಣಕುಮಾರ್‌ ಇರೋದೇ ಹಾಗೆ. ಸಿಗರೇಟು ಸೇದೋದಕ್ಕೆ ಮುಲಾಜೇ ಇಲ್ಲ. ಎದುರಿಗೆ ವಿಷ್ಣುವರ್ಧನ್‌ ನಿಂತರೂ ಮುಜುಗರವಿಲ್ಲ. ಮೊನ್ನೆ 'ತವರಿಗೆ ಬಾ ತಂಗಿ" ಸಿನಿಮಾ ಸೆಟ್ಟೇರಿದ ಸಂತೋಷದಲ್ಲೂ ಪಂಡು ಎಲ್ಲರಿಗೂ ಕಾಣಿಸಿಕೊಂಡದ್ದು ಸಿಗರೇಟು ಸಿಕ್ಕಿಸಿಕೊಂಡ ಮೂತಿಯಾಂದಿಗೆ ! ನಾಯಕ ಶಿವರಾಜ್‌, ತಂಗಿ ಪಾತ್ರಧಾರಿ ರಾಧಿಕ ಸೇರಿದಂತೆ ಚಿತ್ರರಂಗದ ಅನೇಕರು ಅಲ್ಲಿದ್ದರು.

ಪಂಡು ಅವತಾರ ನೋಡಿದ ಯಾರೋ, 'ನಿನ್ನ ಗಂಡನಿಗೆ ನೀನಾದ್ರೂ ಹೇಳಮ್ಮಾ; ಈ ಪಾಟಿ ಸಿಗರೇಟು ಸೇದಬೇಡ ಅಂತ" ಎಂದು ಅನುಗೆ ಹೇಳಿದಾಗ, ಅನು ಕೊಟ್ಟ ಉತ್ತರ ಏನು ಗೊತ್ತೆ ?- 'ದುಡ್ಡು ಅವರದ್ದು. ಸಿಗರೇಟು ಅವರದ್ದು. ಹೊಗೆ ಕುಡಿಯೋದೂ ಅವರೇ. ಪರ್ಸನಲ್‌ ವಿಷಯಗಳಲ್ಲಿ ಹಾಗೆಲ್ಲಾ ತಲೆ ಹಾಕೋದು ನಂಗಿಷ್ಟವಿಲ್ಲ".

ಅನು ಆಡಿದ ಈ ಮಾತನ್ನು ಕೇಳಿ ಅಲ್ಲಿದ್ದ ಎಲ್ಲರೂ ಬೇಸ್ತು !

English summary
Anu Prabhakars apathy on chain smoking husbands

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada