»   » ನಾನು ಗುರಿಗಳ ಗುಲಾಮನಲ್ಲ -ಪ್ರಕಾಶ್‌ರೈ

ನಾನು ಗುರಿಗಳ ಗುಲಾಮನಲ್ಲ -ಪ್ರಕಾಶ್‌ರೈ

Subscribe to Filmibeat Kannada
  • ದಟ್ಸ್‌ಕನ್ನಡ ಬ್ಯೂರೋ
ಪ್ರಕಾಶ್‌ ರೈ ಪ್ರಕಾರ ಪ್ರತಿಯಾಬ್ಬ ಸಣ್ಣ -ದೊಡ್ಡ, ಸೂಪರ್‌, ಡ್ಯೂಪರ್‌...ನಟನೊಳಗೊಬ್ಬ ಹೀರೋ ಇರುತ್ತಾನೆ. ಅಲ್ಲದೆ ಆತ ಯಾವುದೇ ಪಾತ್ರ ಮಾಡುತ್ತಿರಲಿ - ಅಲ್ಲೊಂದು ಹೀರೋಯಿಸಂ ಇರುತ್ತದೆ.

ತೆಲುಗು, ತಮಿಳು, ಮಲಯಾಳಂ, ಕನ್ನಡ ಮತ್ತು ಹಿಂದಿ- ಹೀಗೆ ಪಂಚಭಾಷಾ ತಾರೆಯೆಂದು ಗುರುತಿಸಿಕೊಂಡಿರುವ ಪ್ರಕಾಶ್‌ ರೈ ಫಿಲಾಸಫಿಕ್‌ ಆಗಿ ಮಾತಿಗಿಳಿಯುತ್ತಾರೆ.

ನಾನು ನನ್ನ ಶಾಲಾ ದಿನಗಳಲ್ಲೇ ಸಿನೆಮಾ ಕ್ಷೇತ್ರಕ್ಕೆ ಬರುವ ಕನಸು ಕಂಡಿದ್ದೆ. ನಾನು ಹುಟ್ಟಿದ್ದೇ ಸಿನೆಮಾದಲ್ಲಿ ಕೆಲಸ ಮಾಡಲು ಎಂದು ಭಾವಿಸಿದ್ದೆ ಎನ್ನುವ ಪ್ರಕಾಶ್‌ ರೈ ಅನ್ನು- ನೀವು ಇಷ್ಟು ಮೇಲೇರಲು ಕಾರಣವೇನು ಎಂದು ಕೇಳಿ. ನಗುತ್ತಾ ಉತ್ತರಿಸುತ್ತಾರೆ- ‘ಉಳಿದವರಿಗಿಂತ ನಾನು ಲಕ್ಕಿ ಇರಬಹುದು’ !

ಇತರರಿಗಿಂತ ನೀವು ಹೇಗೆ ಭಿನ್ನ ಎಂಬ ಪ್ರಶ್ನೆಗೆ ‘ಭಿನ್ನವೇನೂ ಇಲ್ಲ. ಬೇರೆಯವರು 2 ಪ್ಲಸ್‌ 2 ಅಂದ್ರೆ 4 ಅಂತಾರೆ. ನಾನು 3 ಪ್ಲಸ್‌ 1 ಅಂದ್ರೆ ಫೋರ್‌ ಅಂತೀನಿ, ಅಷ್ಟೇ’ ಎನ್ನುವ ಪ್ರಕಾಶ್‌ ಕೈಯಲ್ಲಿ ವರ್ಷಂ, ಟಾಗೋರ್‌, ಶಿವಮಣಿ ಮತ್ತು ಸಿಂಹಾಚಲಂ ಚಿತ್ರಗಳಿವೆ. ತಮಿಳಲ್ಲಿ ಮೂರು ಚಿತ್ರಗಳ ನಿರ್ಮಾಣಕ್ಕೆ ಕೈ ಹಾಕಿದ್ದಾರೆ.

ನಾಗಾರ್ಜುನ, ರವಿತೇಜ, ರವಿಚಂದ್ರನ್‌ ಹೀಗೆ ಪ್ರಕಾಶ್‌ ವಯಸ್ಸಿನ ಇತರ ನಟರು ಹೀರೋಗಳಾಗೇ ಮುಂದುವರೆದಿದ್ದರೆ ಪ್ರಕಾಶ್‌ ಮಾತ್ರ ಅಪ್ಪ, ಮಾವ, ಅಣ್ಣ- ವಿಲನ್‌ ಆಗಿ ನಟಿಸಲೂ ಒಪ್ಪುತ್ತಾರೆ. ಕಾರಣ ಪ್ರಕಾಶ್‌ ಎಲ್ಲ ಪಾತ್ರದಲ್ಲಿಯೂ ಅದರದ್ದೇ ಆದ ಹೀರೋಯಿಸಂ ಗುರುತಿಸುತ್ತಾರಂತೆ. ಅಲ್ಲದೆ ಒಂದೇ ನಮೂನೆಯ ಪಾತ್ರವನ್ನು ಮತ್ತೆ ಮತ್ತೆ ಮಾಡುವುದೆಂದರೆ ಪ್ರಕಾಶ್‌ಗೆ ಬೋರ್‌.

ಫಿಲಾಸಫಿಯಲ್ಲಿ ತಲ್ಲೀನರಾಗುವ ಪ್ರಕಾಶ್‌ ರೈಗೆ ಗುರಿಗಳಲ್ಲಿ ನಂಬಿಕೆಯಿಲ್ಲ. ‘ನನ್ನ ಪಾಲಿಗೆ ಪ್ರಯಾಣವೇ ಒಂದು ಸಂತೋಷ’ ಎನ್ನುವ ಪ್ರಕಾಶ್‌, ಜೀನ್ಸ್‌ ಪ್ಯಾಂಟ್‌ ದೊಗಳೆ ಟೀ ಶರ್ಟ್‌ನಲ್ಲಿ ಆರಾಮ್‌ !

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada