»   » ಶ್ರೀರಾಂ 100, ಶಿವಣ್ಣನ ‘ಚಿಗುರಿದ ಕನಸು’

ಶ್ರೀರಾಂ 100, ಶಿವಣ್ಣನ ‘ಚಿಗುರಿದ ಕನಸು’

Subscribe to Filmibeat Kannada

*ದಟ್ಸ್‌ಕನ್ನಡ ಬ್ಯೂರೊ

ಶಿವಣ್ಣನ ಎಪ್ಪತ್ತೆೈದನೇ ಚಿತ್ರ ‘ಶ್ರೀರಾಂ’ ಅಂತೂಇಂತೂ ನೂರು ದಿನ ಓಡಿದೆ. ಇತ್ತೀಚೆಗೆ ಸೋಲಿನ ಮೇಲೆ ಸೋಲುಂಡು ನಿರಾಶರಾಗಿದ್ದ ಶಿವರಾಜ್‌ಗೆ ಈ ನೂರು ದಿನಗಳ ಓಟ ಒಂಚೂರು ಆತ್ಮವಿಶ್ವಾಸ ತಂದುಕೊಟ್ಟಿರುವುದರಲ್ಲಿ ಸಂದೇಹವಿಲ್ಲ .

ಈ ಮುಂಚಿನ ‘ತವರಿಗೆ ಬಾ ತಂಗಿ’ ಚಿತ್ರ ಭಾರೀ ಯಶಸ್ಸು ಕಂಡಿದ್ದರೂ- ಆ ಯಶಸ್ಸಲ್ಲಿ ನಾಯಕಿ ರಾಧಿಕಾ ಹಾಗೂ ನಿರ್ದೇಶಕ ಸಾಯಿಪ್ರಕಾಶ್‌ ಅವರಿಗೂ ಪಾಲು ಸಂದಿತ್ತು . ಆದರೆ, ‘ಶ್ರೀರಾಂ’ ವಿಷಯದಲ್ಲಿ ಹಾಗಲ್ಲ . ಶಿವರಾಜ್‌ ನಟನೆ ಹಾಗೂ ಎಪ್ಪತ್ತೆೈದರ ವಿಶೇಷ ಚಿತ್ರದ ಕುರಿತು ಪ್ರೇಕ್ಷಕರ ಗಮನ ಸೆಳೆದಿತ್ತು . ಆ ಕಾರಣದಿಂದಾಗಿಯೇ ಕಷ್ಟಕಾಲದಲ್ಲೂ ಶ್ರೀರಾಮ ನೂರು ದಿನ ಪೂರೈಸಿದ್ದಾರೆ.

‘ಶ್ರೀರಾಂ’ ಗೆಲುವು ಶಿವರಾಜ್‌ಗೆ ಸಂತಸ ಉಂಟು ಮಾಡಿದ್ದರೂ, ‘ನಂಜುಂಡಿ’ಯ ಸೋಲು ಅವರಿಗೆ ಕಹಿ ನೆನಪು. ರಾಮು ನಿರ್ಮಾಣದ ‘ನಂಜುಂಡಿ’ಯ ಬಗ್ಗೆ ನಿರ್ಮಾಪಕರಷ್ಟೇ ಶಿವಣ್ಣ ಕೂಡ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದರು. ಪತ್ರಿಕೆಗಳು ಮಾತ್ರವಲ್ಲದೆ, ಚಿತ್ರ ನೋಡಿದ ಪಾರ್ವತಮ್ಮ ಹಾಗೂ ರಾಜ್‌ಕುಮಾರ್‌ ‘ನಂಜುಂಡಿ’ಯನ್ನು ಮುಕ್ತಕಂಠದಿಂದ ಹೊಗಳಿದ್ದರು. ಆದರೆ, ಇದ್ಯಾವ ಹೊಗಳಿಕೆಯೂ ‘ನಂಜುಂಡಿ’ ಗೆಲ್ಲಲಿಕ್ಕೆ ಅನುಕೂಲವಾಗಿ ಪರಿಣಮಿಸಿಲ್ಲ . ರಾಮು ಮುಖದಲ್ಲಿ ನಗೆ ಮರಳಿಲ್ಲ !

‘ನಂಜುಂಡಿ’ಯ ಕುರಿತ ನಿರೀಕ್ಷೆ ಹುಸಿಯಾದರೂ, ಮುಂದಿನ ಚಿತ್ರದ ಬಗ್ಗೆ ಶಿವಣ್ಣ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸ್ವಂತ ಬ್ಯಾನರ್‌ನ ‘ಚಿಗುರಿದ ಕನಸು’ ಚಿತ್ರ ಅಕ್ಟೋಬರ್‌ ಮೊದಲ ವಾರದಲ್ಲಿ ತೆರೆ ಕಾಣಲಿದೆ. ಜ್ಞಾನಪೀಠ ಪುರಸ್ಕೃತ ಸಾಹಿತಿ ಶಿವರಾಮಕಾರಂತರ ಕಾದಂಬರಿ ಆಧಾರಿತ ‘ಚಿಗುರಿದ ಕನಸು’ ಚಿತ್ರವನ್ನು ಟಿ.ಎಸ್‌.ನಾಗಾಭರಣ ನಿರ್ದೇಶಿಸಿದ್ದಾರೆ. ಈ ಚಿತ್ರ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯುವಂತದ್ದು ಎಂದು ‘ಚಿಗುರಿದ ಕನಸು’ ಚಿತ್ರದ ಬಗ್ಗೆ ಶಿವರಾಜ್‌ ವಿಶ್ವಾಸ ವ್ಯಕ್ತಪಡಿಸುತ್ತಾರೆ.
ಕನಸು ನನಸಾಗಲಿ !

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada