ಹರಿಯಾಗಿ ದರ್ಶನ್, ಹರನಾಗಿ ಉಪೇಂದ್ರ!
ದರ್ಶನ್ ಮತ್ತು ಉಪೇಂದ್ರ ಜಂಟಿಯಾಗಿದ್ದಾರೆ. ಇವರನ್ನು ಜೊತೆಗೂಡಿಸುತ್ತಿರುವುದು, ಮುನಿರತ್ನಂ ನಿರ್ಮಾಣದ ಹೊಸ ಚಿತ್ರ‘ಹರಿ ಹರ’. ಇದು ಮತ್ತೊಂದು ಮಚ್ಚಿನ ಚಿತ್ರವೇ? ಮತ್ತೊಂದು ರೀಮೇಕ್ ಚಿತ್ರವೇ? ಎಂಬ ಪ್ರಶ್ನೆಗಳಿಗೆ ನಿರ್ಮಾಪಕರು ಉತ್ತರ ನೀಡಿಲ್ಲ.
‘ಹರಿ’ಯಾಗಿ ದರ್ಶನ್, ‘ಹರ’ನಾಗಿ ಉಪೇಂದ್ರ ನಟಿಸಲಿದ್ದು, ಸೆ.17ರಂದು ಚಿತ್ರ ಸೆಟ್ಟೇರಲಿದೆ. ಸಾಧುಕೋಕಿಲಾ ಚಿತ್ರದ ನಿರ್ದೇಶಕರು. ಜೊತೆಗೆ ಸಂಗೀತ ನಿರ್ದೇಶನ ಸಹಾ ಇವರದೇ. ಮೈಸೂರು, ಮಂಡ್ಯ ಮತ್ತು ಬೆಂಗಳೂರಿನಲ್ಲಿ ಮೂರು ಹಂತಗಳಲ್ಲಿ ಚಿತ್ರೀಕರಣ ನಡೆಸುವ ಉದ್ದೇಶ ಚಿತ್ರತಂಡಕ್ಕಿದೆ.
ಚಿತ್ರದಲ್ಲಿ ಇಬ್ಬರು ನಾಯಕಿಯರು. ಕರಾವಳಿ ನಗೆಯ ರಾಧಿಕಾ ಮತ್ತು ಸಾಂಘವಿ, ಉಪ್ಪಿ-ದರ್ಶನ್ ಜೋಡಿಯಾಗಿ ನಟಿಸಲಿದ್ದಾರೆ. ಕೃಷ್ಣಕುಮಾರ್ ಛಾಯಾಗ್ರಹಣ ಚಿತ್ರಕ್ಕಿದೆ.
‘ಐಶ್ವರ್ಯ’ ಶುಕ್ರವಾರ ತೆರೆಗೆ : ಉಪೇಂದ್ರ-ದೀಪಿಕಾ ಪಡುಕೋಣೆ ಅಭಿನಯದ ದೊಡ್ಡ ಬಜೆಟ್‌ನ ‘ಐಶ್ವರ್ಯ’, ರಾಜ್ಯದೆಲ್ಲೆಡೆ ಶುಕ್ರವಾರ(ಸೆ.15) ತೆರೆ ಕಾಣಲಿದೆ. ಇಂದ್ರಜಿತ್ ಲಂಕೇಶ್ ಚಿತ್ರದ ನಿರ್ದೇಶಕರು.
Post your views


Click it and Unblock the Notifications