»   » ಐಟಂ ಸಾಂಗಲ್ಲಿ ಮುಂಗಾರು ಮಳೆ ಹುಡುಗಿ ಪೂಜಾ ಗಾಂಧಿ!

ಐಟಂ ಸಾಂಗಲ್ಲಿ ಮುಂಗಾರು ಮಳೆ ಹುಡುಗಿ ಪೂಜಾ ಗಾಂಧಿ!

Subscribe to Filmibeat Kannada

ಬಾಲಿವುಡ್ ನಿಂದ ರಾಖಿ ಸಾವಂತ್, ಮುಮೈತ್ ಖಾನ್ ಮತ್ತಿತರ ಐಟಂ ಹುಡುಗಿಯರನ್ನು ಸ್ಯಾಂಡಲ್ ವುಡ್ ಗೆ ಕರೆಸಿ ಕೆಲವರು ಸಾರ್ಥಕತೆ ಅನುಭವಿಸಿದರು! ಹೊಸ ಹುಡುಗಿಯರ ಜೊತೆ ಮಾಜಿ ಚೆಲುವೆಯರು ಸಹಾ ಐಟಂ ಸಾಂಗಿಗೆ ಹೆಜ್ಜೆ ಹಾಕಿದ್ದನ್ನು ಪ್ರೇಕ್ಷಕರು ಕಂಡಿದ್ದಾರೆ. ಪ್ರೇಕ್ಷಕನಿಗೆ ಬೇಕೋ, ನಿರ್ದೇಶಕ ಅಥವಾ ನಿರ್ಮಾಪಕರಿಗೆ ಬೇಕೋ ಗೊತ್ತಿಲ್ಲ, ಐಟಂ ಸಾಂಗ್ ಗಳು ಹಿಟ್ ಮೇಲೆ ಹಿಟ್ ಆಗುತ್ತಿವೆ. ಈಗ ಐಟಂ ಸಾಂಗಲ್ಲಿ ಮುಂಗಾರುಮಳೆಯ ಹುಡುಗಿ ಪೂಜಾ ಗಾಂಧಿ ಕಾಣಿಸಿಕೊಳ್ಳಲಿದ್ದಾರೆ.

'ಕಾಮಣ್ಣನ ಮಕ್ಕಳು'ಚಿತ್ರಕ್ಕಾಗಿ ಅವರು ಐಟಂ ಸಾಂಗ್ ಒಪ್ಪಿಕೊಂಡಿದ್ದಾರೆ. ಈಗ ಚಿತ್ರೀಕರಣ ಮೈಸೂರಿನಲ್ಲಿ ಮುಂದುವರೆದಿದೆ. ಗುರುದತ್ ನಿರ್ದೇಶನದ ಈ ಚಿತ್ರದಲ್ಲಿ ಸುದೀಪ್, ದೀಪು, ದೊಡ್ಡಣ್ಣ , ರಾಕ್ ಲೈನ್ ವೆಂಕಟೇಶ್ ಮತ್ತಿತರರಿದ್ದಾರೆ. ಮುಂಗಾರು ಮಳೆ ಚಿತ್ರದ ಹಾಡುಗಳಲ್ಲಿ ಐಟಂ ಹುಡುಗಿಯರು ನಾಚುವಷ್ಟು ಪೂಜಾಗಾಂಧಿ ಮೈ ತೋರಿಸಿದ್ದರು. ಆದರೆ ಅಲ್ಲಿ ಆ ಭಾವನೆಗಳು ಮೂಡಲೇ ಇಲ್ಲ.

ಐಟಂ ಸಾಂಗ್ ವಿಷಯ ಪಕ್ಕಕ್ಕಿಟ್ಟರೇ, ಪೂಜಾ ಗಾಂಧಿ ಓಕೆ. ಲಂಡನ್ನಿನಲ್ಲಿಯೇ ಹುಟ್ಟಿದವರಂತೆ ಇಂಗ್ಲಿಷ್ ಉಗುಳುವ ರಮ್ಯಾ ಮತ್ತಿತರ ಕನ್ನಡದ ಹುಡುಗಿಯರು ಪೂಜಾ ಗಾಂಧಿಯನ್ನು ಕಂಡು ನಾಚಬೇಕು. ಈ ನೆಲದಲ್ಲಿ ಉಳಿಯಬೇಕಾದರೆ, ಈ ನೆಲದವಳೇ ಆಗಬೇಕು ಎಂಬ ಸತ್ಯವನ್ನು ಪೂಜಾ ಅರಿತಿದ್ದಾರೆ. ಈ ನೆಲಕ್ಕೆ ಕಾಲಿಟ್ಟ ಅಲ್ಪ ಅವಧಿಯಲ್ಲಿಯೇ ಕಷ್ಟಪಟ್ಟು ಕನ್ನಡ ತೊದಲುತ್ತಿದ್ದಾರೆ.

(ದಟ್ಸ್ ಕನ್ನಡ ಸಿನಿವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada