»   » ನಿರ್ದೇಶಕರ ಸಂಘದ ಅಧ್ಯಕ್ಷರಾಗಿ ಟಿ.ಎಸ್‌.ನಾಗಾಭರಣ

ನಿರ್ದೇಶಕರ ಸಂಘದ ಅಧ್ಯಕ್ಷರಾಗಿ ಟಿ.ಎಸ್‌.ನಾಗಾಭರಣ

Posted By: Super
Subscribe to Filmibeat Kannada

ಬೆಂಗಳೂರು : ಚಲನಚಿತ್ರ ನಿರ್ದೇಶಕರ ಸಂಘದ ನೂತನ ಅಧ್ಯಕ್ಷರಾಗಿ ಟಿ.ಎಸ್‌.ನಾಗಾಭರಣ ಆಯ್ಕೆಯಾಗಿದ್ದಾರೆ. ಈ ಹಿಂದೆ ಸಂಘದ ಅಧ್ಯಕ್ಷರಾಗಿ ಎಸ್‌.ವಿ.ರಾಜೇಂದ್ರ ಸಿಂಗ್‌ ಬಾಬು ಕಾರ್ಯನಿರ್ವಹಿಸುತ್ತಿದ್ದರು.

ಶ್ರೀರಾಂಪುರದಲ್ಲಿರುವ ಸಂಘದ ಕಚೇರಿಯಲ್ಲಿ ಭಾನುವಾರ(ನ.14) ನಡೆದ ಚುನಾವಣೆಯಲ್ಲಿ ತಮ್ಮ ಪ್ರತಿಸ್ಪರ್ಧಿ ಜೋಸೈಮನ್‌ವಿರುದ್ಧ ಐದು ಮತಗಳ ಅಂತರದಲ್ಲಿ ನಾಗಾಭರಣ ಜಯ ಸಾಧಿಸಿದರು. ಸಂಘದ ಉಪಾಧ್ಯಕ್ಷರಾಗಿ ಕೆ.ಸುರೇಶ್‌ ರೆಡ್ಡಿ ಮತ್ತು ಬಿ.ರಾಮಮೂರ್ತಿ ಆಯ್ಕೆಯಾಗಿದ್ದಾರೆ.

ಕಾರ್ಯದರ್ಶಿಯಾಗಿ ಶ್ರೀಪ್ರಸಾದ್‌ ಹಾಗೂ ಬೂದಾಳ್‌ ಕೃಷ್ಣ ಮೂರ್ತಿ, ಖಜಾಂಚಿಯಾಗಿ ರಾಜೇಂದ್ರ ಕುಮಾರ್‌ ಆರ್ಯ , ಕಾರ್ಯಕಾರಿ ಸಮಿತಿ ಸದಸ್ಯರಾಗಿ ಎಸ್‌.ಮಹೇಂದರ್‌, ಎಸ್‌.ವಿ.ಪ್ರಸಾದ್‌, ಕೆ.ವಿ.ರಾಜು,ರಾಜಾರೆಡ್ಡಿ, ಆನಂದ ಪಿ.ರಾಜು, ಕೆ.ಎನ್‌.ವೈದ್ಯನಾಥ್‌, ತಿಪಟೂರು ರಘು, ಪಿ.ಎಚ್‌. ವಿಶ್ವನಾಥ್‌ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಸಂಘದ ಮಾಜಿ ಅಧ್ಯಕ್ಷ ಎಸ್‌.ವಿ.ರಾಜೇಂದ್ರ ಸಿಂಗ್‌ ಬಾಬು, ನಿರ್ದೇಶಕರಾದ ಕೂಡ್ಲು ರಾಮಕೃಷ್ಣ, ಎಸ್‌.ನಾರಾಯಣ್‌ ಹಾಜರಿದ್ದರು.

(ಇನ್ಫೋ ವಾರ್ತೆ)

English summary
Negabharana is the new President of KANFIDA

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada