»   » ಪ್ರೇಮ್‌ ಸಿನಿಮಾದಲ್ಲಿ ಮಲ್ಲಿಕಾ ಶೆರಾವತ್‌ ಇರ್ತಾಳಾ? ಕುಣಿತಾಳಾ?

ಪ್ರೇಮ್‌ ಸಿನಿಮಾದಲ್ಲಿ ಮಲ್ಲಿಕಾ ಶೆರಾವತ್‌ ಇರ್ತಾಳಾ? ಕುಣಿತಾಳಾ?

Subscribe to Filmibeat Kannada


‘ಜೋಗಿ’ ಖ್ಯಾತಿಯ ಪ್ರೇಮ್‌ರ ಹೊಸ ಸಿನಿಮಾ(ಪ್ರೀತಿ ಏಕೆ ಭೂಮಿ ಮೇಲಿದೆ?)ದ ಕತೆಯೇನು? ನಾಯಕಿ ಯಾರು? ಚಿತ್ರದಲ್ಲಿ ಸೆಕ್ಸ್‌ ಬಾಂಬ್‌ ಮಲ್ಲಿಕಾ ಶೆರಾವತ್‌ಳ ಐಟಂ ಸಾಂಗ್‌ ನಿಜಕ್ಕೂ ಇರುತ್ತಾ? -ಇಂತಹ ಪ್ರಶ್ನೆಗಳಿಗೆ ಒಂದಿಷ್ಟು ಉತ್ತರಗಳು ಸಿಕ್ಕಿವೆ.

ಮಲ್ಲಿಕಾ ಶೆರಾವತ್‌ ಚಿತ್ರದ ಐಟಂ ಸಾಂಗ್‌ನಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಎನ್ನುವ ಸುದ್ದಿ ಗಾಂಧಿನಗರದ ತುಂಬ ಆವರಿಸಿದೆ. ‘ಇದೆಲ್ಲವೂ ಸುಳ್ಳು, ನ.24ರಂದು ವಿದೇಶದಲ್ಲಿ ಚಿತ್ರೀಕರಣ ಮುಗಿಸಿಕೊಂಡು ಚಿತ್ರತಂಡ ಮರಳಲಿದೆ. ನಂತರ ಬೆಂಗಳೂರಿನಲ್ಲಿ ಶೆರಾವತ್‌ ಹಾಡಿನ ಚಿತ್ರೀಕರಣ ನಡೆಯಲಿದೆ’ ಎನ್ನುತ್ತಾರೆ ನಿರ್ಮಾಪಕ ಅಶ್ವಿನಿ ರಾಮಪ್ರಸಾದ್‌. ಪಡ್ಡೆ ಹುಡುಗರು ಯಾವುದು ನಿಜ ಎಂಬುದು ಗೊತ್ತಾಗದೇ, ಕಂಗೆಟ್ಟಿದ್ದಾರೆ?

ಸದ್ಯಕ್ಕೆ 22ಜನರ ಸಿನಿ ತಂಡದೊಂದಿಗೆ ಪ್ರೇಮ್‌ ವಿದೇಶದಲ್ಲಿದ್ದಾರೆ. ಹಾಡುಗಳ ಚಿತ್ರೀಕರಣಕ್ಕಾಗಿ ಈಜಿಪ್ಟ್‌, ಆಸ್ಟ್ರೇಲಿಯಾ, ಇಟಲಿಯಲ್ಲಿ ಸುತ್ತಾಡುತ್ತಿದ್ದಾರೆ. ತಮನ್ನಾ ಚಿತ್ರದ ನಾಯಕಿ. ಜೊತೆಗೆ ಈ ಚಿತ್ರದ ಮೂಲಕ ಇಬ್ಬರು ಹೊಸ ನಾಯಕಿಯರು ಸ್ಯಾಂಡಲ್‌ವುಡ್‌ಗೆ ಎಂಟ್ರಿ ಪಡೆಯುತ್ತಿದ್ದಾರೆ. ಅವರುಗಳ ಹೆಸರು; ನಮ್ರತಾ, ರೋಹಿಣಿ. ಇವರಿಬ್ಬರಿಗೂ ಸಿನಿಮಾ ಹೊಸತಾದರೂ, ಮಾಡೆಲಿಂಗ್‌ ಹೊಸತೇನಲ್ಲ. ಚೆನ್ನಾಗಿ ಪಳಗಿದವರು.

ಸದ್ಯಕ್ಕೆ ಮುಂಬೈನಲ್ಲಿ ನೆಲಸಿರುವ ನಮ್ರತಾಳ ತಂದೆಗೆ ಚೀನಾದಲ್ಲಿ ವ್ಯವಹಾರಗಳಿವೆ. ಈಗಾಗಿ ಆಕೆಗೆ ಚೈನಾ ಭಾಷೆ ಚೆನ್ನಾಗಿ ಗೊತ್ತು. ಇನ್ನೊಬ್ಬ ನಾಯಕಿ ರೋಹಿಣಿ ಅಮೆರಿಕಾದವರು. ಸಿನಿಮಾ ರಂಗದಲ್ಲಿ ಭವಿಷ್ಯ ಅರಸಿ, ಅವರು ಭಾರತಕ್ಕೆ ಬರಲು ಸಿದ್ಧರಾಗಿದ್ದಾರಂತೆ.

ಆರ್‌.ಪಿ.ಪಟ್ನಾಯಕ್‌ ಸಂಗೀತ ಚಿತ್ರಕ್ಕಿದೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada