For Quick Alerts
  ALLOW NOTIFICATIONS  
  For Daily Alerts

  ರಾಜ್‌ ಕುಟುಂಬದ ವಜ್ರೇಶ್ವರಿ ಕಂಬೈನ್ಸ್‌ ಕಟ್ಟಡಕ್ಕೆ ಬೆಂಕಿ

  By Staff
  |

  ಬೆಂಗಳೂರು : ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್‌ ಅವರಿಗೆ ಸೇರಿದ ವಜ್ರೇಶ್ವರಿ ಕಂಬೈನ್ಸ್‌ ಚಲನಚಿತ್ರ ವಿತರಣಾ ಕಚೇರಿಗೆ ಬೆಂಕಿಬಿದ್ದಿದ್ದು, ಸಿನಿಮಾ ರೀಲ್‌ ಮತ್ತು ಪೀಠೋಪಕರಣಗಳು ಭಸ್ಮವಾಗಿವೆ.

  ಸದಾಶಿವನಗರದ 8ನೇ ಮುಖ್ಯರಸ್ತೆಯಲ್ಲಿರುವ ಈ ಕಚೇರಿಯಿಂದ ಹೊಗೆ ಬರುವುದನ್ನು, ಸಮೀಪದಲ್ಲಿಯೇ ಇರುವ ತಮ್ಮ ನಿವಾಸದಿಂದ ನಟ ಶಿವರಾಜ್‌ಕುಮಾರ್‌ ಗಮನಿಸಿದರು. ನಂತರ ಕೂಡಲೇ ಅಗ್ನಿಶಾಮಕದಳಕ್ಕೆ ಸುದ್ದಿ ಮುಟ್ಟಿಸಿದರು. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳ, ಹೆಚ್ಚಿನ ಹಾನಿ ತಪ್ಪಿಸಿದೆ.

  ಮಂಗಳವಾರ ರಾತ್ರಿ 11.20ರ ಸುಮಾರಿನಲ್ಲಿ ಸಂಭವಿಸಿದ ಈ ಅಗ್ನಿ ಆಕಸ್ಮಿಕಕ್ಕೆ ಕಾರಣ ತಿಳಿದು ಬಂದಿಲ್ಲ. ಕಚೇರಿಗೆ ಬೆಂಕಿ ಬಿದ್ದಾಗ, ಅಲ್ಲಿ ಯಾರು ಇರಲಿಲ್ಲ.

  (ದಟ್ಸ್‌ ಕನ್ನಡ ವಾರ್ತೆ)

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X