twitter
    For Quick Alerts
    ALLOW NOTIFICATIONS  
    For Daily Alerts

    ಕೋಲ್ಕತ್ತಾದಲ್ಲಿ ಉಪ್ಪಿ-ಪಿಂಕಿ ಮದುವೆ

    By Staff
    |

    ರಿಯಲ್‌ಸ್ಟಾರ್‌ ಉಪೇಂದ್ರ ಹಾಗೂ ಅಮಲುಕಣ್ಣಿನ ಸುಂದರಿ ಪ್ರಿಯಾಂಕಾ ತ್ರಿವೇದಿ ಅವರ ವಿವಾಹ ಡಿ.14ರ ಭಾನುವಾರ ಕೋಲ್ಕತ್ತಾದಲ್ಲಿ ನಡೆಯಿತು.

    ಉಪೇಂದ್ರ ಅವರು ಕೊನೆಯ ಗಳಿಗೆಯವರೆಗೂ ತಮ್ಮ ವಿವಾಹದ ವಿಷಯವನ್ನು ಗುಟ್ಟಾಗಿರಿಸಿದ್ದರು. ಉಪೇಂದ್ರ ಅವರ ಮನೆಯವರು ಹಾಗೂ ನಿರ್ಮಾಪಕ ಮುನಿರತ್ನ ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್‌.ರಮೇಶ್‌, ಉಪೇಂದ್ರ ಅವರ ಮದುವೆಯಲ್ಲಿ ಭಾಗವಹಿಸಿದ್ದರು.

    ಉಪೇಂದ್ರ ನಾಯಕರಾಗಿ ಅಭಿನಯಿಸಿದ ಎಚ್‌ಟೂಓ ಚಿತ್ರದ ಮೂಲಕ ಬಂಗಾಳಿ ಚೆಲುವೆ ಪ್ರಿಯಾಂಕಾ ತ್ರಿವೇದಿ ಕನ್ನಡ ಚಿತ್ರರಂಗ ಪ್ರವೇಶಿಸಿದ್ದರು. ವಿಷ್ಣುವರ್ಧನ್‌ರ ಕೋಟಿಗೊಬ್ಬ ಪ್ರಿಯಾಂಕ ಅಭಿನಯದ ಇನ್ನೊಂದು ಚಿತ್ರ. ಇನ್ನೂ ಬಿಡುಗಡೆಯಾಗದ ರವಿಚಂದ್ರನ್‌ರ ಮಲ್ಲ ಹಾಗೂ ಶಿವರಾಜ್‌ಕುಮಾರ್‌ರ ರೌಡಿ ಅಳಿಯ ಚಿತ್ರಗಳಲ್ಲೂ ಪ್ರಿಯಾಂಕ ನಾಯಕಿಯಾಗಿ ಅಭಿನಯಿಸಿದ್ದಾರೆ.

    ಉಪೇಂದ್ರ ಅವರು ತಮ್ಮ ಮದುವೆಯ ವಿಷಯವನ್ನು ಇದೇ ವಾರದಲ್ಲಿ ಬೆಂಗಳೂರಿನಲ್ಲಿ ಪ್ರಕಟಿಸುವ ನಿರೀಕ್ಷೆಯಿದೆ.

    (ಇನ್ಫೋ ವಾರ್ತೆ)

    ಇದನ್ನೂ ಓದಿ
    ಉಪೇಂದ್ರ ಮದುವೆಯಾಗುತ್ತಿದ್ದಾರೆ !?

    ಮುಖಪುಟ / ಸ್ಯಾಂಡಲ್‌ವುಡ್‌

    Friday, March 29, 2024, 4:04
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X