»   » ರಾಜ್‌ಕುಮಾರ್‌ ಬಗ್ಗೆ ಜಯಂತಿ ಏನನ್ನುತ್ತಾರೋ?

ರಾಜ್‌ಕುಮಾರ್‌ ಬಗ್ಗೆ ಜಯಂತಿ ಏನನ್ನುತ್ತಾರೋ?

Posted By:
Subscribe to Filmibeat Kannada


ಈಟೀವಿಯಲ್ಲಿ ಪ್ರಸಾರವಾಗುತ್ತಿರುವ ನಟಸಾರ್ವಭೌಮನಿಗೆ ನಮಸ್ಕಾರ ಕಾರ್ಯಕ್ರಮದಲ್ಲಿ ಜಯಂತಿ, ರಾಜ್‌ ವ್ಯಕ್ತಿತ್ವ, ಅವರೊಂದಿಗಿನ ಒಡನಾಟದ ಬಗ್ಗೆ ಮಾತನಾಡಿದ್ದಾರೆ.

ಸಭೆಯೋ ಸಮಾರಂಭವೋ ಯಾವುದಾದರೂ ಸರಿ. ಸಾವಿರಾರು ಜನರಿದ್ದರೂ, ರಾಜ್‌ಕುಮಾರ್‌ ಕೆನ್ನೆಗೆ ಮುತ್ತು ನೀಡಿ ಬೆರಗು ಹುಟ್ಟಿಸುತ್ತಿದ್ದವರು; ಅಭಿನಯ ಶಾರದೆ ಜಯಂತಿ. ಅವರೀಗ ತಮ್ಮ ನೆಚ್ಚಿನ ಸಹನಟ ರಾಜ್‌ಕುಮಾರ್‌ ಬಗ್ಗೆ ಮಾತನಾಡಲಿದ್ದಾರೆ.

ಈಟೀವಿಯಲ್ಲಿ ಪ್ರಸಾರವಾಗುತ್ತಿರುವ ನಟಸಾರ್ವಭೌಮನಿಗೆ ನಮಸ್ಕಾರ ಕಾರ್ಯಕ್ರಮದಲ್ಲಿ ಜಯಂತಿ, ರಾಜ್‌ ವ್ಯಕ್ತಿತ್ವ, ಅವರೊಂದಿಗಿನ ಒಡನಾಟದ ಬಗ್ಗೆ ಮಾತನಾಡಿದ್ದಾರೆ. ಜಯಂತ್‌ ಕಾಯ್ಕಿಣಿ ಸಂದರ್ಶನದ ಹೊಣೆ ಹೊತ್ತಿದ್ದಾರೆ. ಕಾರ್ಯಕ್ರಮ ಇದೇ ಭಾನುವಾರ(ಡಿ.17) ಬೆಳಗ್ಗೆ 11ಗಂಟೆಗೆ ಮೂಡಿ ಬರಲಿದೆ. ಇದೇ ಕಾರ್ಯಕ್ರಮ ರಾತ್ರಿ 11ಕ್ಕೆ ಮರುಪ್ರಸಾರಗೊಳ್ಳಲಿದೆ.

ನಾಡಿನ ಪಾಲಿಗೆ ರಾಜ್‌ಕುಮಾರ್‌, ಅಣ್ಣಾವ್ರು, ರಾಜಣ್ಣ ಇನ್ನು ಏನೇನೋ... ಆದರೆ ಜಯಂತಿ ಪಾಲಿಗೆ ರಾಜ್‌. ಬಹುಶಃ ‘ರಾಜ್‌’ ಎಂದು ಕರೆಯುತ್ತಿದ್ದ ಏಕೈಕ ನಟಿ ಈಕೆ ಒಬ್ಬಳೇ ಇರಬಹುದು. ರಾಜ್‌ರನ್ನು ಅತಿ ಹತ್ತಿರದಿಂದ ಬಲ್ಲ, ಜಯಂತಿ ಏನ್‌ ಹೇಳ್ತಾರೆ ಅನ್ನುವ ಕುತೂಹಲ ಅಭಿಮಾನಿಗಳಿಗಿದೆ. ಚಿಂತಿಸೋದು ಬೇಕಿಲ್ಲ, ಭಾನುವಾರ ಸಮೀಪದಲ್ಲಿಯೇ ಇದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada