15th BIFFes ; ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರಶಸ್ತಿ ಗೆದ್ದವರು ಯಾರು..?

ಈ ಬಾರಿಯ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ತೆರೆ ಬಿದ್ದಿದೆ. ಜಗತ್ತಿನಾದ್ಯಂತ ವಿವಿಧ ದೇಶ-ಭಾಷೆಗಳ ಪ್ರದರ್ಶನದಲ್ಲಿ ವಿವಿಧ ವಿಭಾಗಗಳಲ್ಲಿ ಸ್ಪರ್ಧಿಸಿದ ಸಿನಿಮಾಗಳಿಗೆ ಪ್ರಶಸ್ತಿ ನೀಡಲಾಗಿದೆ. ಅಂತರಾಷ್ಟ್ರೀಯ ಖ್ಯಾತಿಯ ಹಿರಿಯ ನಿರ್ದೇಶಕ ಎಂ.ಎಸ್​. ಸತ್ಯು ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಕನ್ನಡ ಚಲನಚಿತ್ರ ಸ್ಪರ್ಧೆ, ಭಾರತೀಯ ಚಲನಚಿತ್ರ ಸ್ಪರ್ಧೆ, ಏಷ್ಯನ್​ ಚಲನಚಿತ್ರ ಸ್ಪರ್ಧೆ ಮುಂತಾದ ವಿಭಾಗಗಳಲ್ಲಿ ಹಲವು ಸಿನಿಮಾಗಳು ಪ್ರಶಸ್ತಿ ಪಡೆದಿವೆ. ಕನ್ನಡ ಚಲನಚಿತ್ರ ಸ್ಪರ್ಧೆಯಲ್ಲಿ ನವೀನ್ ಶಂಕರ್ ಅಭಿನಯದ ಕ್ಷೇತ್ರಪತಿ ಚಿತ್ರಕ್ಕೆ ತೀರ್ಪುಗಾರರ ವಿಶೇಷ ಪ್ರಶಸ್ತಿಯನ್ನ ನೀಡಲಾಗಿದೆ. ರಮ್ಯಾ ನಿರ್ಮಾಣದ ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರಕ್ಕೂ ನೆಟ್​ಪ್ಯಾಕ್​ ತೀರ್ಪುಗಾರರ ಪ್ರಶಸ್ತಿ ಸಿಕ್ಕಿದೆ. ಏಷ್ಯನ್ ಚಿತ್ರ ಪ್ರಶಸ್ತಿ ವಿಭಾಗದಲ್ಲಿ ರಕ್ಷಿತ್ ಶೆಟ್ಟಿ ನಿರ್ಮಾಣದ ಮಿಥ್ಯ ಚಿತ್ರಕ್ಕೆ ತೀರ್ಪುಗಾರರ ವಿಶೇಷ ಪ್ರಶಸ್ತಿ ಸಿಕ್ಕಿದ್ದು ವಿಶೇಷ

15th Biffes Film Festival Awards-full-list

ಭಾರತೀಯ ಚಲನಚಿತ್ರ ಸ್ಪರ್ಧೆ, ಕನ್ನಡ ಚಲನಚಿತ್ರ ಸ್ಪರ್ಧೆ, ಏಷ್ಯನ್​ ಚಲನಚಿತ್ರ ಸ್ಪರ್ಧೆಗಳಲ್ಲಿ ಪ್ರಶಸ್ತಿ ಪಡೆದವರ ಪಟ್ಟಿ ಇಲ್ಲಿದೆ

ಮೊದಲ ಅತ್ಯುತ್ತಮ ಕನ್ನಡ ಚಿತ್ರ : ನಿರ್ವಾಣ ; ನಿರ್ದೇಶನ : ಅಮರ್​ ಎಲ್​. ನಿರ್ಮಾಣ: ಕೆ ಮಂಜು ಅವಿನಾಶ್​ ಶೆಟ್ಟಿ

ಎರಡನೇ ಅತ್ಯುತ್ತಮ ಕನ್ನಡ ಚಿತ್ರ : ಕಂದೀಲು ; ನಿರ್ದೇಶನ, ನಿರ್ಮಾಣ: ಯಶೋದಾ ಪ್ರಕಾಶ್ ಕೊಟ್ಟುಕತ್ತೀರ ​

ಮೂರನೇ ಅತ್ಯುತ್ತಮ ಕನ್ನಡ ಚಿತ್ರ : ಆಲ್​ ಇಂಡಿಯಾ ರೇಡಿಯೋ ; ನಿರ್ದೇಶನ: ರಾಮಸ್ವಾಮಿ. ನಿರ್ಮಾಣ: ದೇವಗಂಗಾ ಪ್ರೇಮ್ಸ್​

ತೀರ್ಪುಗಾರರ ವಿಶೇಷ ಪ್ರಶಸ್ತಿ: ಕ್ಷೇತ್ರಪತಿ ; ನಿರ್ದೇಶನ : ಶ್ರೀಕಾಂತ್​ ಕಟಗಿ ನಿರ್ಮಾಣ : ಅಶ್ರಗ ಕ್ರಿಯೇಷನ್ಸ್​

ನೆಟ್​ಪ್ಯಾಕ್​ ತೀರ್ಪುಗಾರರ ಪ್ರಶಸ್ತಿ: ಸ್ವಾತಿ ಮುತ್ತಿನ ಮಳೆ ಹನಿಯೇ ; ನಿರ್ದೇಶನ: ರಾಜ್​ ಬಿ. ಶೆಟ್ಟಿ. ನಿರ್ಮಾಣ: ರಮ್ಯಾ

15th Biffes Film Festival Awards-full-list

ಭಾರತೀಯ ಚಲನಚಿತ್ರ ಸ್ಪರ್ಧೆ

ಮೊದಲ ಅತ್ಯುತ್ತಮ ಸಿನಿಮಾ: ಶ್ಯಾಮ್ಚಿ ಆಯಿ ; ನಿರ್ದೇಶನ: ಸುಜಯ್​ ದಹಕೆ. ನಿರ್ಮಾಣ: ಪುಣೆ ಫಿಲ್ಮ್​ ಕಂಪನಿ

ಎರಡನೇ ಅತ್ಯುತ್ತಮ ಸಿನಿಮಾ: ಅಯೋಥಿ ; ನಿರ್ದೇಶನ : ಮಂದಿರಾ ಮೂರ್ತಿ. ನಿರ್ಮಾಣ: ಆರ್​. ರವೀಂದ್ರನ್​

ಮೂರನೇ ಅತ್ಯುತ್ತಮ ಸಿನಿಮಾ: ಛಾವೆರ್​ ; ನಿರ್ದೇಶನ: ತನು ಪಾಪಚ್ಚನ್​. ನಿರ್ಮಾಣ: ಅರುಣ್​ ನಾರಾಯಣ ಪ್ರೊಡಕ್ಷನ್ಸ್​

ಫಿಪ್ರೆಸ್ಕಿ ಪ್ರಶಸ್ತಿ: ಶ್ಯಾಮ್ಚಿ ಆಯಿ ; ನಿರ್ದೇಶನ: ಸುಜಯ್​ ದಹಕೆ. ನಿರ್ಮಾಣ: ಪುಣೆ ಫಿಲ್ಮ್​ ಕಂಪನಿ

15th Biffes Film Festival Awards-full-list

ಏಷ್ಯನ್​ ಚಲನಚಿತ್ರ ಸ್ಪರ್ಧೆ:

ಮೊದಲ ಅತ್ಯುತ್ತಮ ಸಿನಿಮಾ: ಇನ್ಶಾಅಲ್ಲಾ ಎ ಬಾಯ್​; ನಿರ್ದೇಶನ: ಅಮ್ದಜ್​ ಅಲ್​ ರಶೀದ್​. ನಿರ್ಮಾಣ: ಇಮೇಜಿನೇರಿಯಂ ಫಿಲ್ಮ್ಸ್​, ಜಾರ್ಜಸ್​ ಫಿಲ್ಮ್ಸ್​

ಎರಡನೇ ಅತ್ಯುತ್ತಮ ಸಿನಿಮಾ: ಸ್ಥಳ್​ ; ನಿರ್ದೇಶನ: ಜಯಂತ್​ ದಿಗಂಬರ್​ ಸೋಮಾಲ್ಕರ್​. ನಿರ್ಮಾಣ: ಧುನ್

ಮೂರನೇ ಅತ್ಯುತ್ತಮ ಸಿನಿಮಾ: ಸಂಡೇ ; ನಿರ್ದೇಶನ: ಶೋಕಿರ್​ ಕೊಲಿಕೊಬ್​. ನಿರ್ಮಾಣ: ಫಿರ್ದವಾಸ್​ ಅಬ್ದುಕೊಲಿಕೊವ್​

ತೀರ್ಪುಗಾರರ ವಿಶೇಷ ಪ್ರಶಸ್ತಿ: ಮಿಥ್ಯ ; ನಿರ್ದೇಶನ: ಸುಮಂತ್​ ಭಟ್​. ನಿರ್ಮಾಣ: ಪರಂವಾ ಪಿಕ್ಚರ್ಸ್​

More from Filmibeat

English summary
15th BIFFES, Full List Of 15th Bengaluru International Film Festival Awards
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X