ಚಾಲೆಂಜಿಂಗ್ ಸ್ಟಾರ್ ಆರೋಗ್ಯ ಸುಧಾರಿಸಿದೆ
ಜಾಂಡೀಸ್ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ನಟ ದರ್ಶನ್ ಅವರ ಆರೋಗ್ಯ ಹಂತಹಂತವಾಗಿ ಸುಧಾರಿಸುತ್ತಿದೆ ಎಂದು ರಾಜೀವ್ ಗಾಂಧಿ ಆಸ್ಪತ್ರೆ ನಿರ್ದೇಶಕ ಡಾ.ಶಶಿಧರ್ ಬುಗ್ಗಿ ಹೇಳಿದ್ದಾರೆ. ಇನ್ನು ಕೆಲ ದಿನಗಳ ಚಿಕಿತ್ಸೆ ಬಳಿಕ ಅವರನ್ನು ಬಿಡುಗಡೆ ಮಾಡಲಾಗುತ್ತದೆ ಎಂದಿದ್ದಾರೆ.
ಏತನ್ಮಧ್ಯೆ ದರ್ಶನ್ ದರ್ಶನಕ್ಕಾಗಿ ರಾಜೀವ್ ಗಾಂಧಿ ಆಸ್ಪತ್ರೆಗೆ ಅಭಿಮಾನಿಗಳ ಸಾಗರವೇ ಹರಿದುಬರುತ್ತಿದೆ. ಆದರೆ ಇವರನ್ನು ನಿಯಂತ್ರಿಸಲು ಪೊಲೀಸರು ಪರದಾಡುವಂತಾಗಿದೆ. ದರ್ಶನ್‌ರನ್ನು ಭೇಟಿ ಮಾಡಲು ಯಾರಿಗೂ ಅವಕಾಶ ಮಾಡಿಕೊಡುತ್ತಿಲ್ಲ.
ತಮ್ಮ ನೆಚ್ಚಿನ ನಟನಿಗಾಗಿ ಅಭಿಮಾನಿಗಳ ಹುಚ್ಚಾಟವೂ ಹೆಚ್ಚಾಗಿದೆ. ಮಂಜುನಾಥ್ ಎಂಬ ಹುಚ್ಚು ಅಭಿಮಾನಿಯೊಬ್ಬ ದರ್ಶನ್ ಅಭಿನಯದ ಚಿತ್ರಗಳನ್ನು ಮೈಮೇಲೆ ಹಚ್ಚೆ ಹಾಕಿಸಿಕೊಂಡು ತಮ್ಮ ಅಭಿಮಾನವನ್ನು ಮೆರೆದಿದ್ದಾನೆ. ದರ್ಶನ್ ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು ಬೈರಸಂದ್ರ ದೇವಾಲಯದಲ್ಲಿ 101 ತೆಂಗಿನಕಾಯಿ ಹೊಡೆದು ಪೂಜೆ ಸಲ್ಲಿಸಿದ್ದಾರೆ. (ಏಜೆನ್ಸೀಸ್)
English summary
Kannada actor Darshan is recovering gradually and his health condition is slightly better at the moment, say reports from RGICD.
ದರ್ಶನ್ ನಿಖಿತಾ ಚಾಲೆಂಜಿಂಗ್ ಸ್ಟಾರ್ ನಟ ಪೊಲೀಸ್ ಬಂಧನ ಬೆಂಗಳೂರು darshan nikhita challenging star actor police arrest bangalore


Click it and Unblock the Notifications