ಪ್ರೀತಿಸಿ ಹೊರಟವಳ ಹಿಂದೆ ಬಿದ್ದ ಕುಮಾರ್ ಗೋವಿಂದ್

By Mahesh

ಕೆಲವರಿಗೆ ಸಿನಿಮಾ ಗೀಳು ಒಮ್ಮೆ ಹಿಡಿದರೆ ಹಾಗೆ ನೆಲಕಚ್ಚಿದರೂ ಮತ್ತೆ ಮತ್ತೆ ಏಳುವ ಆಸೆಯಿಂದ ಮುಗಿಲ ಕಡೆ ನೋಡುತ್ತಿರುತ್ತಾರೆ. ಸದ್ಯಕ್ಕೆ ನಮ್ಮ ಕುಮಾರ್ ಗೋವಿಂದು ಪರಿಸ್ಥಿತಿ ತುಂಬಾ ಹದಗೆಟ್ಟಿಲ್ಲವಾದರೂ ಯಾವುದೆ ಚಿತ್ರ ಹಿಟ್ ಆಗದೇ ಒಳಗೊಳಗೆ ಕೊರಗುತ್ತಿದ್ದಾರೆ. ಅಕ್ಕರೆಯಿಂದ ಕಾಪಾಡಿಕೊಂಡು ಬಂದ ಸತ್ಯ ಚಿತ್ರ ಇನ್ನಿಲ್ಲದ್ದಂತೆ ಸೋತರೂ, ಮತ್ತೆ ಗೆಲ್ಲುವ ಹುಮ್ಮಸ್ಸಿನಿಂದ ಮೈಕೊಡವಿಕೊಂಡು ಹೊಸ ಯೋಜನೆಗೆ ಕೈ ಹಾಕಿದ್ದಾರೆ.

ಮಂದಾಕಿನಿ ಎಂಬ ಚಿತ್ರ ಮಾಡಿ ಕೈಸುಟ್ಟುಕೊಂಡ ಬಿಕೆ ಶ್ರೀನಿವಾಸ್ ಅವರ ಸಹಾಯ ಹಸ್ತದಿಂದ ಕುಮಾರ್ ಗೋವಿಂದು, "ಪ್ರೀತಿಸಿ ಹೊರಟವಳೆ" ಎಂಬ ಚಿತ್ರದ ಚಿತ್ರೀಕರಣವನ್ನು ಸದ್ದಿಲ್ಲದೆ ಮುಗಿಸಿದ್ದಾರೆ. ಇಬ್ಬರು ಹಿಂದಿನ ಸೋಲನ್ನು ಮರೆತು ಈ ಚಿತ್ರದ ಮೂಲಕ ಹೊಸ ಹಾದಿ ಕಂಡುಕೊಳ್ಳುವ ಆಶಯ ಹೊಂದಿದ್ದಾರೆ.

ಶ್ ನಂತರ ಕುಮಾರ್ ಗೋವಿಂದು ತಮ್ಮ ಬ್ಯಾನರ್ ನಲ್ಲಿ ಅನುರಾಗ ಸಂಗಮ ನಿರ್ಮಿಸಿ ಗೆದ್ದಾಗ ಕನ್ನಡ ಚಿತ್ರರಂಗ ಖುಷಿ ಪಟ್ಟಿತ್ತು. ನಟ ಕುಮಾರ್ ಗೋವಿಂದು ಒಂದು ವೇಳೆ ಸೋತರೂ ನಿರ್ಮಾಪಕ ಗೋವಿಂದು ಗೋತಾ ಹೊಡೆಯಲ್ಲ ಬಿಡಿ ಎಂದು ಗಾಂಧಿನಗರದ ಮಂದಿ ಆಡಿಕೊಳ್ಳುತ್ತಿದ್ದರು.

ಆದರೆ, ಸತತ ಸೋಲು ಕಂಡಿದ್ದ ಕುಮಾರ್, ಸತ್ಯ ಚಿತ್ರದ ಸ್ಯಾಟಲೈಟ್ ಹಕ್ಕುಗಳನ್ನು ಒಳ್ಳೆ ಬೆಲೆ ಮಾರಾಟ ಮಾಡಿ ಸೇಫ್ ಅಗಿದ್ದಾರೆ ಎಂಬ ಸುದ್ದಿಯಿದೆ. ಸತ್ಯ ಚಿತ್ರದ ಛಾಯೆ ಪ್ರೀತಿಸಿ ಹೊರಟವಳೆ ಚಿತ್ರದಲ್ಲೂ ಮುಂದುವರೆಯುವ ಸಾಧ್ಯತೆಯಿದೆ. ಬಹುತೇಕ ಅದೇ ತಾರಾಗಣವಿದೆ, ಚಿತ್ರ ಬಿಡುಗಡೆ ದಿನಾಂಕವನ್ನು ಪೋಸ್ಟ್ ಪ್ರೊಡೆಕ್ಷನ್ ಜವಾಬ್ದಾರಿ ಹೊತ್ತಿರುವ ಅಶ್ವಿನಿ ಮೀಡಿಯಾ ನೆಟ್ ವರ್ಕ್ಸ್ ನಿರ್ಧರಿಸಬೇಕಿದೆ. ಎನಿವೇ, ಕುಮಾರ್ ಗೆ ಬೆಸ್ಟ್ ಆಫ್ ಲಕ್.

More from Filmibeat

English summary
Kannada Actor, Director Kumar Govind has made a come back to Kannada Film Industry with Sathya movie But it didn t click at box office. Now he joined by BK Srinivas of Mandakini fame. Both loser aim to gain high through latest flick Preethisi Horatavale.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X