»   » ಕನ್ನಡಕ್ಕೆ ರಾಘವೇಂದ್ರ ಎಂಬ ಚಾಕ್ಲೆಟ್ ಹೀರೊ !

ಕನ್ನಡಕ್ಕೆ ರಾಘವೇಂದ್ರ ಎಂಬ ಚಾಕ್ಲೆಟ್ ಹೀರೊ !

Subscribe to Filmibeat Kannada

'ಜೋಶ್' ಚಿತ್ರಕ್ಕೆ ಆಯ್ಕೆಯಾಗಿರುವ ಯುವ ನಟ ರಾಘವೇಂದ್ರ ಪ್ರಥಮ ನೋಟದಲ್ಲೇ ಎಲ್ಲರನ್ನೂ ಆಕರ್ಷಿಸುತ್ತಿದ್ದಾರೆ. ಸದ್ಯಕ್ಕೆ ಕನ್ನಡ ಚಿತ್ರರಂಗದಲ್ಲಿ ಚಾಕೊಲೇಟ್‌ ಹೀರೊಗಳಿಲ್ಲದೆ ಸೊರಗುತ್ತಿತ್ತು. ಯುವ ನಟರ ಕೊರತೆ ಎದುರಿಸುತ್ತಿರುವ ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ನಟನಾಗಬೇಕು ಎಂದು ಕನಸು ಕಂಗಳ ಯುವಕನೊಬ್ಬ ಚಿತ್ರರಂಗದಲ್ಲಿ ತನ್ನ ಚೊಚ್ಚಲ ಹೆಜ್ಜೆ ಇಟ್ಟಿದ್ದಾನೆ.

ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ ರಾಘವೇಂದ್ರ ಬಹುಶಃ ಚಿತ್ರರಂಗಕ್ಕೆ ಬರದೆ ಇದ್ದಿದ್ದರೆ ಯಾವುದೋ ಕಾರ್ಪೊರೇಟ್ ಸಂಸ್ಥೆಯ ಫೈಲ್‌ಗಳ ನಡುವೆ ಮುಳುಗಿ ಹೋಗುತ್ತಿದ್ದ. ಎಂ.ಎಸ್.ರಾಮಯ್ಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಇ ಪೂರ್ಣಗೊಳಿಸಿ ಎರಡು ವರ್ಷಗಳ ಕಾಲ ಸ್ಯಾಂಸಂಗ್ ಸಾಫ್ಟ್‌ವೇರ್ ಸಂಸ್ಥೆಯಲ್ಲಿ ಕೆಲಸ ಮಾಡಿ ಕೊನೆಗೆ ನಟನೆ ಮೇಲಿನ ಮಮಕಾರಕ್ಕೆ ಉದ್ಯೋಗಕ್ಕೆ ರಾಜೀನಾಮೆ ಸಲ್ಲಿಸಿ ಹೊರಬಿದ್ದ. ನಂತರ ಮುಂಬೈನಲ್ಲಿನ ಅನುಪಮ್ ಖೇರ್ ಸಂಸ್ಥೆಯಲ್ಲಿ ಅಭಿನಯ ತರಬೇತಿಯನ್ನು ಪಡೆದುಕೊಂಡು ಅಭಿನಯ, ನೃತ್ಯ ಹಾಗೂ ಕರಾಟೆ ಸಾಮುಗಳನ್ನು ಕರತಲಾಮಲಕ ಮಾಡಿಕೊಂಡು ಚಿತ್ರರಂಗಕ್ಕೆ ಬಂದಿದ್ದಾರೆ. ಎಂ.ಡಿ.ಶ್ರೀಧರ್ ನಿರ್ದೇಶಿಸುತ್ತಿರುವ 'ಜೋಶ್ 'ಚಿತ್ರದಲ್ಲಿ ರಾಘವೇಂದ್ರ ಮುಖ್ಯ ಪಾತ್ರವೊಂದರಲ್ಲಿ ಕಾಣಿಸಲಿದ್ದಾರೆ.

ನಾನು ನಟನಾಗಬೇಕು ಎಂಬುದರಲ್ಲಿ ವಿಶೇಷವೇನು ಇಲ್ಲ. ನನ್ನ ಹೆಗಲಿಗಿದ್ದ ಕೆಲವೊಂದು ಜವಾಬ್ದಾರಿಗಳು ಹಾಗೂ ತಂದೆ ತಾಯಿಯ ಇಚ್ಛೆಯಂತೆ ಎಂಜಿನಿಯರಿಂಗ್ ಮುಗಿಸಿದೆ. ಆದರೆ ನನ್ನ ಆಸಕ್ತಿ ಮಾತ್ರ ನಟನೆ ಕಡೆಗೇ ಇತ್ತು. ಈಗ ಪೋಷಕರು ನನ್ನನ್ನು ಅರ್ಥ ಮಾಡಿಕೊಂಡಿದ್ದಾರೆ. ಅವರು ಸಹ ನನ್ನ ಈ ಕನಸಿಗೆ ನೀರೆರೆದು ಪೊಷಿಸುತ್ತಿದ್ದಾರೆ ಎಂದು ರಾಘವೇಂದ್ರ ಆತ್ಮ ವಿಶಸ್ವಾಸ ವ್ಯಕ್ತಪಡಿಸುತ್ತಾರೆ.

ಉತ್ತಮ ಅವಕಾಶಗಳು ನನ್ನನ್ನು ಹುಡುಕಿಕೊಂಡು ಬರುತ್ತಿವೆ. 'ಜೋಶ್' ಚಿತ್ರದ ನಂತರವಷ್ಟೆ ಮುಂದಿನ ಚಿತ್ರಗಳಲ್ಲಿ ನಟಿಸುತ್ತೇನೆ. ಚಿತ್ರರಂಗದಲ್ಲಿ ನಾನೇನು ಎಂಬುದನ್ನು ನಿರೂಪಿಸಿಕೊಳ್ಳಬೇಕಾಗಿದೆ. ಅಕಕ್ಕೊಂದು ಉತ್ತಮ ವೇದಿಕೆಯನ್ನು ಎಂ.ಡಿ.ಶ್ರೀಧರ್ ಒದಗಿಸಿದರು. ಈಗ ನನ್ನ ಪ್ರತಿಭೆಯನ್ನು ನಿರೂಪಿಸಿಕೊಳ್ಳಬೇಕಾಗಿದೆ. ದೇವರ ಆಶೀರ್ವಾದ, ಪ್ರೇಕ್ಷಕರ ಪ್ರೋತ್ಸಾಹ ಇದ್ದರೆ ಈ ಕನ್ನಡ ಚಿತ್ರೋದ್ಯಮದಲ್ಲಿ ಖಂಡಿತ ನಾನು ನೆಲೆ ನಿಲ್ಲುತ್ತೇನೆ ಎನ್ನುತ್ತಾರೆ ರಾಘವೇಂದ್ರ.

(ದಟ್ಸ್‌ಕನ್ನಡ ಸಿನಿವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada