ಸೃಜನ್ ಲೋಕೇಶ್ ಗೆ ಬೆಳ್ಳಿತೆರೆಯಲ್ಲಿ ಸಿಗುತ್ತಾ ಬ್ರೇಕ್?

ಕಿರುತೆರೆಯಲ್ಲಿ ಉತ್ತಮ ಕಲಾವಿದ, ನಿರೂಪಕ ಎಂದು ಹೆಸರು ಮಾಡಿರುವ ಈ ನಟ ಇದೀಗ ಸ್ನೇಹಿತರು ಚಿತ್ರದಲ್ಲಿ ನಾಯಕರಾಗಿ ಬಣ್ಣಹಚ್ಚಿದ್ದಾರೆ. ಸ್ನೇಹಿತರು ಚಿತ್ರದ ಉಳಿದ ನಾಯಕರು ತರುಣ್, ವಿಜಯ ರಾಗವೇಂದ್ರ ಹಾಗೂ ರವಿಶಂಕರ್. ಸ್ನೇಹಿತರ ಸ್ನೇಹಿತೆಯಾಗಿ 'ಪ್ರಣೀತಾ ಇದ್ದಾರೆ.
ಸೃಜನ್ ಅಮ್ಮ ಗಿರಿಜಾ ಲೋಕೇಶ್ ಕೂಡ ಹಿರಿತೆರೆ ಹಾಗೂ ಕಿರುತೆರೆ ಎರಡರಲ್ಲೂ ಬ್ಯುಸಿಯಾಗಿರುವ ಕಲಾವಿದೆ. ಅಕ್ಕ ಪೂಜಾ ಲೋಕೇಶ್ ಕೂಡ ಕಲಾವಿದೆಯಾಗಿ ಸೈ ಅನ್ನಿಸಿಕೊಂಡವರು. ಈ ಬಾರಿ ಬಣ್ಣ ಹಚ್ಚಿದ ಮೇಲಾದರೂ ಸೃಜನ್, ಸ್ಯಾಂಡಲ್ ವುಡ್ ನಾಯಕರ ಲಿಸ್ಟ್ ಗೆ ಸೇರಬಹುದೇ ಎಂಬುದೀಗ ಪ್ರಶ್ನೆ. (ಒನ್ ಇಂಡಿಯಾ ಕನ್ನಡ)
English summary
Actor Srujan Lokesh acts in upcoming movie 'Snehitaru'. He is expecting for a Break to settle as hero in Sandalwood.


Click it and Unblock the Notifications