twitter
    For Quick Alerts
    ALLOW NOTIFICATIONS  
    For Daily Alerts

    ಸೃಜನ್ ಲೋಕೇಶ್ ಗೆ ಬೆಳ್ಳಿತೆರೆಯಲ್ಲಿ ಸಿಗುತ್ತಾ ಬ್ರೇಕ್?

    |

    Srujan Lokesh
    'ತೇರಾ ಏರಿ ಅಂಬರದಾಗೆ ನೇಸರ ನಗುತಾನೆ... ಎಂದು ಹಾಡಿ ಕುಣಿದು ಕನ್ನಡಿಗರ ಮನೆ-ಮನೆಗಳಲ್ಲಿ ಮನೆಮಾಡಿರುವ ನಟ ಲೋಕೇಶ್ ರ ಮಗ ಸೃಜನ್ ಲೋಕೇಶ್. ಕನ್ನಡ ಬೆಳ್ಳಿತೆರೆಯಲ್ಲಿ ಮಿಂಚಬೇಕಾಗಿದ್ದ ನಟ ಸೃಜನ್, ಕಿರುತೆರೆಯಲ್ಲಿ ಪ್ರಖ್ಯಾತಿ ಪಡೆದಿದ್ದಾರೆ. ಪೊರ್ಕಿ, ನವಗ್ರಹ ಮುಂತಾದ ಚಿತ್ರಗಳಲ್ಲಿ ನಟಿಸಿದರೂ ಅದ್ಯಾಕೋ ಹೀರೋ ಆಗಿ ಕನ್ನಡದಲ್ಲಿ ಮಿಂಚಲು ಸಾಧ್ಯವಾಗಲೇ ಇಲ್ಲ.

    ಕಿರುತೆರೆಯಲ್ಲಿ ಉತ್ತಮ ಕಲಾವಿದ, ನಿರೂಪಕ ಎಂದು ಹೆಸರು ಮಾಡಿರುವ ಈ ನಟ ಇದೀಗ ಸ್ನೇಹಿತರು ಚಿತ್ರದಲ್ಲಿ ನಾಯಕರಾಗಿ ಬಣ್ಣಹಚ್ಚಿದ್ದಾರೆ. ಸ್ನೇಹಿತರು ಚಿತ್ರದ ಉಳಿದ ನಾಯಕರು ತರುಣ್, ವಿಜಯ ರಾಗವೇಂದ್ರ ಹಾಗೂ ರವಿಶಂಕರ್. ಸ್ನೇಹಿತರ ಸ್ನೇಹಿತೆಯಾಗಿ 'ಪ್ರಣೀತಾ ಇದ್ದಾರೆ.

    ಸೃಜನ್ ಅಮ್ಮ ಗಿರಿಜಾ ಲೋಕೇಶ್ ಕೂಡ ಹಿರಿತೆರೆ ಹಾಗೂ ಕಿರುತೆರೆ ಎರಡರಲ್ಲೂ ಬ್ಯುಸಿಯಾಗಿರುವ ಕಲಾವಿದೆ. ಅಕ್ಕ ಪೂಜಾ ಲೋಕೇಶ್ ಕೂಡ ಕಲಾವಿದೆಯಾಗಿ ಸೈ ಅನ್ನಿಸಿಕೊಂಡವರು. ಈ ಬಾರಿ ಬಣ್ಣ ಹಚ್ಚಿದ ಮೇಲಾದರೂ ಸೃಜನ್, ಸ್ಯಾಂಡಲ್ ವುಡ್ ನಾಯಕರ ಲಿಸ್ಟ್ ಗೆ ಸೇರಬಹುದೇ ಎಂಬುದೀಗ ಪ್ರಶ್ನೆ. (ಒನ್ ಇಂಡಿಯಾ ಕನ್ನಡ)

    English summary
    Actor Srujan Lokesh acts in upcoming movie 'Snehitaru'. He is expecting for a Break to settle as hero in Sandalwood. 
 
    Sunday, December 18, 2011, 14:02
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X