»   » ಅವಕಾಶಗಳ ಕೊಲ್ಲಬೇಡಿ -ಅರ್ಚನಾ ಗುಪ್ತಾ

ಅವಕಾಶಗಳ ಕೊಲ್ಲಬೇಡಿ -ಅರ್ಚನಾ ಗುಪ್ತಾ

By: *ಜಯಂತಿ
Subscribe to Filmibeat Kannada
Archana Gupta
ಇಷ್ಟಗಳ ಪಟ್ಟಿ ಹೇಳಿಕೊಳ್ಳುತ್ತಿದ್ದ ನಟಿ ಅರ್ಚನಾ ಗುಪ್ತಾ ಕಷ್ಟದ ಮಾತು ಬಂದೊಡನೆಯೇ ಮೌನವಾದರು. 'ಕನ್ನಡ ಚಿತ್ರಗಳೆಂದರೆ ಈಕೆಗೆ ಅಸಡ್ಡೆ", 'ಇನ್ನು ಮುಂದೆ ಅರ್ಚನಾ ಕನ್ನಡ ಚಿತ್ರಗಳಲ್ಲಿ ನಟಿಸುವುದಿಲ್ಲ" ಎನ್ನುವ ಅರ್ಥದ ಮಾತುಗಳು ಗಾಂಧಿನಗರದಲ್ಲಿ ಸುತ್ತಾಡುತ್ತಿವೆ. ಈ ಮಾತುಗಳೇ ಅರ್ಚನಾ ಬೇಸರಕ್ಕೆ ಕಾರಣ.

'ಕನ್ನಡ ಚಿತ್ರಗಳಲ್ಲಿ ನಟಿಸಲಿಕ್ಕೆ ನನಗೆ ಇಷ್ಟವಿಲ್ಲ ಎಂದು ದಯವಿಟ್ಟು ಬರೆಯಬೇಡಿ. ಇನ್ನಷ್ಟು ಅವಕಾಶಗಳನ್ನು ಕನ್ನಡ ಚಿತ್ರೋದ್ಯಮದಿಂದ ನಿರೀಕ್ಷಿಸುತ್ತಿದ್ದೇನೆ. ಇಲ್ಲಿನ ಪರಿಸರ ನನಗೆ ತುಂಬಾ ಹಿಡಿಸಿದೆ" ಎಂದರು ಅರ್ಚನಾ. ಸರ್ಕಸ್ ಚಿತ್ರದ ಗೆದ್ದರೆ ತಮಗೆ ಇನ್ನಷ್ಟು ಅವಕಾಶ ಸಿಗಬಹುದು ಎನ್ನುವ ಆಶಾಭಾವವನ್ನೂ ವ್ಯಕ್ತಪಡಿಸಿದರು.

ಸರ್ಕಸ್ ಚಿತ್ರದಲ್ಲಿ ಗಣೇಶ್ ಜೊತೆ ಜೋಡಿಯಾಗಿ ನಟಿಸಿರುವುದು ಅರ್ಚನಾಗೆ ಖುಷಿಕೊಟ್ಟಿದೆ. ಸಿನಿಮಾದ ಸಾಹಸ ದೃಶ್ಯಗಳ ಬಗ್ಗೆ ಹೇಳುವಾಗ ಅರ್ಚನಾ ಥ್ರಿಲ್ ಆಗಿದ್ದರು. ಓಡುವ ರೈಲಿನ ಸದ್ದು ತಮ್ಮ ಕಿವಿಗಳಲ್ಲಿನ್ನೂ ಗುಂಯ್‌ಗುಟ್ಟುತ್ತಿದೆ ಎನ್ನುವಂತೆ ಕಿವಿಗಳಲ್ಲಿ ಬೆರಳಿಟ್ಟುಕೊಂಡರು.

ಅಂದಹಾಗೆ, ಚಿತ್ರೀಕರಣ ಸಮಯದಲ್ಲಿ ರಸ್ತೆಬದಿ ದಾರುಣ ಸ್ಥಿತಿಯಲ್ಲಿದ್ದ ನಾಯಿಯೊಂದನ್ನು ಅರ್ಚನಾ ರಕ್ಷಿಸಿದರಂತೆ!

ಸಕ್ಸಸ್ ಗಾಗಿ ಪದ್ಮನಾಭನ್ ದಯಾಳ್ ಸರ್ಕಸ್

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada