ಜೂಲಿ ಲಕ್ಷ್ಮೀ ಎಂಬ ಪದೇಪದೇ ನೆನಪಾಗುವ ಸುಂದರಿ

ಒಂದು ಸಂದರ್ಶನದಲ್ಲಿ ಈ ಸಾಕ್ಷಾತ್ ಲಕ್ಷ್ಮೀ ಹೇಳಿದ ಮಾತು ಕಿವಿಗೂ, ತಲೆಗೂ ಸೂಪರ್. "ನಮ್ಮ ಮನೆಯಲ್ಲಿ ನಾವು ಸಿನಿಮಾ ಬಗ್ಗೆ ಮಾತನಾಡುವುದಿಲ್ಲ. ಮನೆಯವರೆಲ್ಲರೂ ಒಟ್ಟಿಗೆ ಸಿನಮಾಕ್ಕೆ ಹೋಗಿದ್ದೂ ನೆನಪಿಲ್ಲ. ಮನೆಯಲ್ಲಿದ್ದಾಗ ನಾನು ಸಿನಿಮಾದವಳು ಎಂಬುದನ್ನು ಮರೆತಿರುತ್ತೇನೆ." ಇದು ಜೂಲಿ ಮೂಲಕ ಮನೆಮಾತಾದ ಲಕ್ಷ್ಮಿಯ ಮುತ್ತಿನಂಥ ಮಾತುಗಳು.
ಆಕರ್ಷಕ ದನಿ, ಮತ್ತೆಮತ್ತೆ ನೋಡಬೇಕೆಂಬ ಮುಖ, ಕಣ್ಣಲ್ಲೇ ಕಾದಂಬರಿ ಬರೆಯಬಲ್ಲ ಚೆಲುವಿನ ಖನಿ ಈ ಲಕ್ಷ್ಮೀ. ಸಿನಿಮೇತರ ಚಟುವಟಿಕೆಯಿಂದಲೂ ಸಾಕಷ್ಟು ಪ್ರಸಿದ್ಧರಾದವರು. ಕನ್ನಡದಲ್ಲಿ 'ಕತೆಯಲ್ಲ, ಜೀವನ', ಅದಕ್ಕೂ ಮೊದಲು ತಮಿಳಿನಲ್ಲಿ 'ಅಚ್ಚುಮಿಲೈ ಅಚ್ಚುಮಿಲೈ' ಕಾರ್ಯರ್ಕ್ರಮದ ಮೂಲಕ ಸಾಮಾಜಿಕ ಕಳಕಳಿ ಮೆರೆದವರು. ಅದಕ್ಕೆ ಬೆದರಿಕೆ ಕರೆ ಬಂದರೂ ಕುಗ್ಗದೇ ಜಗ್ಗದೇ ಇರುವವರು.
ನಾಲ್ಕು ದಶಕಗಳ ಹಿಂದಿನ ಜೂಲಿಯನ್ನು ಇಂದಿಗೂ ಜನ ನೆನಪಿಸಿಕೊಳ್ಳುತ್ತಾರೆ. ಅಂದಿನ ಅವರನ್ನು ಇಂದು ಟಿವಿಯಲ್ಲಿ ನೋಡಿ ಕಣ್ಣುಮುಚ್ಚಲಾಗದೇ ಕಂಬದಂತೆ ಕುಳಿತಿರುತ್ತಾರೆ. ಲಕ್ಷ್ಮೀ ತರಹದ ಹುಡುಗಿ ಯಾರಾದರೂ ಸಿಗಬಾರದೇ ಎಂದು ಅಂದುಕೊಳ್ಳುತ್ತಾರೆ, ಬಾಯ್ಬಿಟ್ಟೂ ಕೂಡ ಹೇಳುತ್ತಾರೆ. ಖಾಸಗಿ ವಾಹಿನಿಯ ಕಾರ್ಯಕ್ರಮದಲ್ಲಿ ನೋಡಿದವರು ಈಗಲೂ ಮೆಚ್ಚುವಂತೆ, ಖುಷಿಪಡುವಂತೆ ಇದ್ದಾರೆ ಈ 'ಸೌಂದರ್ಯ ಲಕ್ಷ್ಮೀ'... (ಒನ್ ಇಂಡಿಯಾ ಕನ್ನಡ)


Click it and Unblock the Notifications











