ನವ ತಾರುಣ್ಯಕ್ಕಾಗಿ ತಹತಹಿಸುತ್ತಿರುವ ನಟಿ ಮೀನಾ
ಬೆಂಗಳೂರಿನ ಸಾಫ್ಟ್ ವೇರ್ ಉದ್ಯೋಗಿ ವಿದ್ಯಾ ಸಾಗರ್ ಅವರನ್ನು ಕೈಹಿಡಿದ ಬಳಿಕ ನಟಿ ಮೀನಾ ಚಿತ್ರರಂಗದಿಂದ ದೂರ ಸರಿದಿದ್ದರು. 'ಹೆಂಡ್ತೀರ್ ದರ್ಬಾರ್' ಚಿತ್ರ ಮೀನಾ ಅಭಿನಯದ ಕೊನೆಯ ಕನ್ನಡ ಚಿತ್ರ. ಬಳಿಕ ಸಂಸಾರ, ಮಕ್ಕಳು ಎಂದು ಮೀನಾ ಬ್ಯುಸಿಯಾದರು.
ಪುಟ್ಟ ಮಗಳು ನೈನಿಕಾ ಜೊತೆ ಕಳೆಯುವುದು. ಅದರ ಆಲನೆ ಪಾಲನೆ ನೋಡಿಕೊಳ್ಳುವುದು, ಇಷ್ಟರಲ್ಲೇ ಸರಿಹೋಗುತ್ತದೆ. ತಾವು ಸಂಸಾರದಲ್ಲಿ ಕಳೆದುಹೋಗಿದ್ದರೂ ತಮ್ಮನ್ನು ಇನ್ನೂ ಪಾತ್ರಗಳು ಹುಡುಕಿಕೊಂಡು ಬರುತ್ತಿವೆ. ಆದರೆ ಬಂದ ಆಫರ್‌ಗಳನ್ನೆಲ್ಲಾ ಒಪ್ಪಿಕೊಳ್ಳಲು ಸಾಧ್ಯವಿಲ್ಲ.
ಆಸಕ್ತಿಕರವಾದ ಪಾತ್ರಗಳು ಬಂದರೆ ಖಂಡಿತ ಮತ್ತೆ ಬೆಳ್ಳಿತೆರೆ ಅಥವಾ ಕಿರುತೆರೆಗೆ ಹಿಂತಿರುಗುತ್ತೇನೆ. ಅಮ್ಮನಾದ ಬಳಿಕ ಮೀನಾ ಗ್ಲಾಮರ್ ಕೊಂಚ ಡಲ್ ಆಗಿದೆ. ತಮ್ಮ ಸೊಂಟ, ದೇಹದ ಅಂಗಾಗಳಿಗೆ ಹೊಸ ಸ್ಫೂರ್ತಿ ತುಂಬಲು ಜಿಮ್‌ಗೆ ಮೊರೆ ಹೋಗಿದ್ದಾರಂತೆ. ಸ್ಟ್ರಿಕ್ಟ್ ಡಯಟ್‌ನ್ನು ಪಾಲಿಸುತ್ತಿದ್ದಾರಂತೆ. ಶೀಘ್ರ ಮೀನಾ ಬೆಳ್ಳಿತೆರೆಗೆ ಬರಲಿ ಎಂಬುದು ಆಕೆಯ ಅಭಿಮಾನಿಗಳ ಆಶಯ. (ಏಜೆನ್ಸೀಸ್)
More from Filmibeat
English summary
Actress Meena said that she will definitely return to the big screen or the small screen if she gets interesting roles. In preparation, she is hitting the gym and following a strict diet to get back into shape.


Click it and Unblock the Notifications











