ಚಂದ್ರವಂಶ ಚಿತ್ರಕ್ಕೆ ನಾ ಒಲ್ಲೆ ಎಂದ ಪ್ರೇಮಾ!
ಸಾಯಿಪ್ರಕಾಶ್ ನಿರ್ದೇಶನದ ಚಂದ್ರವಂಶ ಚಿತ್ರದಲ್ಲಿ ನಟಿ ಪ್ರೇಮಾ ಕೂಡ ನಟಿಸಬೇಕಿತ್ತು. ಅವರಿಗೆಂದೇ ಒಂದು ವಿಶೇಷ ಪಾತ್ರ ಹೆಣೆದಿದ್ದ ಸಾಯಿಪ್ರಕಾಶ್ ಇತ್ತೀಚೆಗೆ ಅವರನ್ನು ಸಂಪರ್ಕಿಸಿ ಕಾಲ್‌ಶೀಟ್ ಕೇಳುವ ಯತ್ನ ಮಾಡುತ್ತಿದ್ದಾರೆ. ಆದರೆ, ಪ್ರೇಮಾ ಅದೇಕೋ ಮನಸ್ಸು ಮಾಡುತ್ತಿಲ್ಲ ಎನ್ನುವುದು ಲೇಟೆಸ್ಟ್ ಸುದ್ದಿ.
ಶಿಶಿರ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅವರು, ಅದಾದನಂತರ ಕೋರಮಂಗಲದ ಮನೆಯೇ ಮಂತ್ರಾಲಯ ಎನ್ನ ತೊಡಗಿದರು. ಐತಿಹಾಸಿಕ ಚಿತ್ರ ಮಾಡಲುಹೊರಟಿರುವ ಸಾಯಿಪ್ರಕಾಶ್ ಈ ಚಿತ್ರದಲ್ಲೂ ಒಂದಷ್ಟು ಹಿರಿಯ ನಟಿಯರನ್ನು ತಂದು ನಿಲ್ಲಿಸುವ ಯತ್ನದಲ್ಲಿದ್ದಾರೆ. ಅದರಲ್ಲಿ ಒಂದಷ್ಟು ಮಂದಿ ಓಕೆ ಆಗಿದ್ದಾರೆ. ಇನ್ನೊಂದಿಷ್ಟು ಮಂದಿಯ ಆಯ್ಕೆ ಭರದಿಂದ ಸಾಗಿದೆ.
ಸಾಯಿ ಪ್ರಕಾಶ್ ನಿರ್ದೇಶನದ 90ನೇಯ ಹಾಗೂ ನಿರ್ಮಾಣದ 12ನೇ ಚಿತ್ರ ಇದಾಗಿದೆ. ಚಿತ್ರದ ನಾಯಕನಟ ರಾಮ್ ಕುಮಾರ್. ಮೋನಿಕಾ ನಾಯಕಿ. ಉಳಿದಂತೆ ಚಿತ್ರದಲ್ಲಿ ಅನುಪ್ರಭಾಕರ್, ಚಂದ್ರಿಕಾ, ಸುಧಾರಾಣಿ, ತಾರಾ, ಭವ್ಯಾ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ. ಗೋಟೂರಿ ಅವರ ಸಂಭಾಷಣೆ, ಸಾಹಿತ್ಯ, ನಾರಾಯಣ್ ಛಾಯಾಗ್ರಹಣ ಹಾಗೂ ಸಂತೋಷ್ ಸಂಗೀತ ಚಿತ್ರಕ್ಕಿದೆ.


Click it and Unblock the Notifications











