ಇದೇ ಮೊದಲ ಬಾರಿಗೆ ಐಟಂ ಸಾಂಗ್‌ನಲ್ಲಿ ರಮ್ಯಾ

By Rajendra

ಇಷ್ಟು ದಿನ ಡೀಸೆಂಟ್‌ಗಾಗಿ ಬೆಳ್ಳಿಪರದೆ ಮೇಲೆ ಕಾಣಿಸುತ್ತಿದ್ದ ರಮ್ಯಾ ಈಗ ದಿಢೀರ್ ಎಂದು ತಮ್ಮ ಗೆಟಪ್ ಚೇಂಜ್ ಮಾಡಿದ್ದಾರೆ. ಚೂಡಿದಾರ್, ಸೀರೆ ಅಥವಾ ಲಂಗಾ ದಾವಣಿಯಲ್ಲಿ ಪ್ರೇಕ್ಷಕರ ಮನಗೆದ್ದಿದ್ದ ರಮ್ಯಾ ಈಗ ತಮ್ಮ ಗೆಟಪ್ ಚೇಂಜ್ ಮಾಡಿದ್ದಾರೆ. ಇದೆಲ್ಲಾ 'ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್' ಚಿತ್ರಕ್ಕಾಗಿ.

ಪ್ರೀತಂ ಗುಬ್ಬಿ ನಿರ್ದೇಶಿರುವ ಈ ಚಿತ್ರದ ಆಡಿಯೋ ಈಗಾಗಲೆ ಮಾರುಕಟ್ಟೆಗೆ ಬಿಡುಗಡೆಯಾಗಿದ್ದು, ಭರ್ಜರಿಯಾಗಿ ಬಿಕರಿಯಾಗುತ್ತಿದೆ. ಹರಿಕೃಷ್ಣ ಸಂಗೀತದಮ್ಯಾಜಿಕ್ ಮತ್ತೊಮ್ಮೆ ಕ್ಲಿಕ್ ಆಗುವ ಲಕ್ಷಣಗಳು ಧಾರಾಳವಾಗಿವೆ. ಚಿತ್ರದ "ಊರಿಗೆಲ್ಲಾ ಪದ್ಮಾವತಿ..."ಹಾಡಂತೂ ಈಗ ಎಲ್ಲೆಲ್ಲೂ ಕೇಳಿಬರುತ್ತಿದೆ. ತೆರೆಯ ಮೇಲೆ ಈ ಹಾಡು ಹೇಗೆ ಮೂಡಿಬಂದಿದೆ ಎಂಬ ಕುತೂಹಲ ಪ್ರೇಕ್ಷಕರಿಗೆ ಇದ್ದೇ ಇದೆ.

"ಊರಿಗೆಲ್ಲಾ ಪದ್ಮಾವತಿ" ಹಾಡು ಬಾಲಿವುಡ್‌‍ನ ಜನಪ್ರಿಯ ಐಟಂ ಹಾಡು "ಶೀಲಾ ಕಿ ಜವಾನಿ"ಯ ಅನುಕರಣೆ ಎನ್ನಲಾಗಿದೆ. ಈ ಹಾಡಿನಲ್ಲಿ ರಮ್ಯಾ ಕೂಡ ಮೈ ಚಳಿ ಬಿಟ್ಟು ಕುಣಿದಿದ್ದಾರಂತೆ. ಹಿಂದೆಂದೂ ಕಾಣದಷ್ಟು ಹಾಟ್ ಅಂಡ್ ಸ್ಪೈಸಿಯಾಗಿ ರಮ್ಯಾ ಈ ಹಾಡಿನಲ್ಲಿ ಕಾಣಿಸಲಿದ್ದಾರೆ. ಯೋಗರಾಜ್ ಭಟ್ ಲೇಖನಿಯಿಂದ "ಊರಿಗೆಲ್ಲಾ ಪದ್ಮಾವತಿ" ಹಾಡು ಹೊರಹೊಮ್ಮಿರುವುದು ವಿಶೇಷ.

ದುನಿಯಾ ವಿಜಯ್ ನಾಯಕ ನಟನಾಗಿರುವ ಈ ಚಿತ್ರದ ಹಾಟ್ ಪೋಸ್ಟರ್‌ಗಳು ಈಗ ಎಲ್ಲೆಲ್ಲೂ ಕಣ್ಣಿಗೆ ರಾಚುತ್ತಿವೆ. ಈ ಚಿತ್ರದ ಬಗ್ಗೆ ಪ್ರೀತಿ ಗುಬ್ಬಿ ಎಲ್ಲಿಲ್ಲದ ವಿಶ್ವಾಸವನ್ನು ಇಟ್ಟುಕೊಂಡಿದ್ದು ಚಿತ್ರ ಶೀಘ್ರದಲ್ಲೆ ತೆರೆಗೆ ಅಪ್ಪಳಿಸಲು ಸಿದ್ಧವಾಗಿದೆ. 'ಜಾನಿ ಮೇರಾ ನಾಮ್' ಚಿತ್ರ ಗಾಂಧಿನಗರದಲ್ಲಿ ಭಾರಿ ಕುತೂಹಲವನ್ನು ಕೆರಳಿಸಿದೆ. (ದಟ್ಸ್‌ಕನ್ನಡ ಸಿನಿವಾರ್ತೆ)

More from Filmibeat

English summary
Duniya Vijay and Ramya starrer Johny Mera Naam item song Oorigella Padmavathy...has become hugely popular now. The film has directed by Preetham Gubbi. Sources says that the song has mainly inspired by "Sheela Ki Jawani". Ramya is looking very hot in this song.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X