ಯೋಗಿ, ವಿಜಿ ಜೊತೆ ನಟಿಸ್ಬೇಡಿ: ರಮ್ಯಾಗೆ ತಾಕೀತು

Yogesh Ramya Vijay
ಸಿದ್ಲಿಂಗು ಚಿತ್ರದಲ್ಲಿ ಲೂಸ್ ಮಾದ ಯೋಗೇಶ್ ಜೊತೆ ನಟಿಸಿದ್ದಕ್ಕಾಗಿ ರಮ್ಯಾ ಅಭಿಮಾನಿಗಳು ಸಿಟ್ಟಾಗಿದ್ದಾರೆ. ಫೇಸ್ ಬುಕ್ ಹಾಗೂ ಟ್ಟಿಟರ್ ನಲ್ಲಿ ಈ ಕುರಿತು ಬರೆದಿರುವ ರಮ್ಯಾ ಅಭಿಮಾನಿಗಳು, "ಲೂಸ್ ಮಾದ ಯೋಗೇಶ್' ಹಾಗೂ 'ದುನಿಯಾ ವಿಜಯ್' ಅವರುಗಳ ಜೊತೆ ನೀವು ಅಭಿನಯಿಸುವುದನ್ನು ನಾವು ಇಷ್ಟಪಡುವುದಿಲ್ಲ. ಇನ್ನು ಮುಂದೆ ನಟಿಸಬೇಡಿ" ಎಂದು ತಾಕೀತು ಮಾಡಿದ್ದಾರಂತೆ.

ಯೋಗೇಶ್ ಹಾಗೂ ದುನಿಯಾ ವಿಜಯ್ ಅವರುಗಳು ನಟರೆಂದು ನೀವು ನಂಬುತ್ತೀರಾ ಎಂದು ರಮ್ಯಾಗೆ ಪ್ರಶ್ನಿಸಿರುವ ಅಭಿಮಾನಿಗಳು ಇನ್ನು ಮುಂದಾದರೂ ಅವರೊಂದಿಗೆ ನಟಿಸಬೇಡಿ ಎಂದು ಷರತ್ತು ಹಾಕಿದ್ದಾರೆ ಎನ್ನಲಾಗಿದೆ. "ಅವರನ್ನು ಹೀರೋಗಳೆಂದು ಯಾವ ರೀತಿಯಲ್ಲೂ ಒಪ್ಪಿಕೊಳ್ಳಲಾಗುವುದಿಲ್ಲ. ಅವರಿಗಿಂತ ನಾವೇ ಎಷ್ಟೋ ಮೇಲು" ಎಂದರು ಎನ್ನಲಾಗಿದೆ.

ಸಿದ್ಲಿಂಗು ಚಿತ್ರದಲ್ಲಿ ಕೀಳುಮಟ್ಟದ ಸಂಭಾಷಣೆಗಳಿವೆ ಎಂದು ಸ್ವತಃ ರಮ್ಯಾ ಬಾಯ್ಬಿಟ್ಟಿದ್ದಾರೆ. ಅದಕ್ಕಾಗಿಯೇ ಮೊದಲು ಸಿದ್ಲಿಂಗು ಚಿತ್ರವನ್ನು ರಮ್ಯಾ ಒಪ್ಪಿರಲಿಲ್ಲವಂತೆ. ನಂತರ ಸಂಭಾಷಣೆಯನ್ನು ಸಾಕಷ್ಟು ಬದಲಾಯಿಸಿದ ಮೇಲೆ ರಮ್ಯಾ ನಟಿಸಿದ್ದಾರೆ. ಆದರೂ, ಈಗ ಕೂಡ ಸಾಕಷ್ಟು ಕೆಟ್ಟ ಸಂಭಾಷಣೆಗಳಿವೆ, ಅವುಗಳನ್ನು ಸೀರಿಯಸ್ ಆಗಿ ತೆಗೆದುಕೊಳ್ಳಬೇಡಿ ಎಂದು ರಮ್ಯಾ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. (ಒನ್ ಇಂಡಿಯಾ ಕನ್ನಡ)

More from Filmibeat

English summary
Kannada actress Ramya's Fans objected Ramya for acting with Yogesh and Duniya Vijay. They twitted in Twitter and gave message in Facebook like this. 
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X