»   » ನಟಿ ಐಶ್ವರ್ಯ ಚೊಚ್ಚಲ ಹೆರಿಗೆ ಕಾಲದ ನೋವು ನಲಿವು ಹೇಗಿತ್ತು?

ನಟಿ ಐಶ್ವರ್ಯ ಚೊಚ್ಚಲ ಹೆರಿಗೆ ಕಾಲದ ನೋವು ನಲಿವು ಹೇಗಿತ್ತು?

Posted By:
Subscribe to Filmibeat Kannada
<ul id="pagination-digg"><li class="next"><a href="/news/16-baby-girl-to-aishwarya-rai-normal-delivery-aid0135.html">Next »</a></li></ul>
aishwarya-rai-with-her-parents
ಮುಂಬೈ, ನ.16: ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ತಾರಾ ದಂಪತಿಗೆ ಬುಧವಾರ ಬೆಳಗ್ಗೆ ಹೆಣ್ಣು ಮಗುವಾಗಿದೆ. ಇದರೊಂದಿಗೆ ಬಿಗ್ ಬಿ ಕುಟುಂಬಕ್ಕೆ ಅನೇಕ ವರ್ಷಗಳ ನಂತರ ಮುದ್ದಾದ ಕೂಸೊಂದು ಆಗಮಿಸಿದಂತಾಗಿದೆ.

35 ವರ್ಷದ ಅಭಿಷೇಕ್ ಬಚ್ಚನ್ ಮೊನ್ನೆಯಷ್ಟೇ 'ಪತ್ನಿ ಐಶ್ವರ್ಯಳಂತೆ ಇರುವ ಮುದ್ದಾದ ಹೆಣ್ಣು ಮಗು ಬೇಕೆಂದು ಬಯಸಿದ್ದರು. ಅದನ್ನು ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದ್ದರು. ಅಪ್ಪನ ಅಭಿಲಾಷೆ ಈಗ ಪೂರ್ತಿಯಾಗಿದೆ.

ಸೆವೆನ್ ಹಿಲ್ಸ್ ಆಸ್ಪತ್ರೆಯ ದಾದಿಯರು ನೀವೀಗ ಹೆಣ್ಣು ಮಗುವಿನ ತಂದೆಯಾದಿರಿ ಎನ್ನುತ್ತಿದ್ದಂತೆ ಹುರ್ರೆ ಎಂದ ಅಭಿಷೇಕ್ ಎಂದು ಕ್ಷಣವೂ ತಡಮಾಡದೆ 'IT'S A GIRL!!' ಎಂದು ತಮ್ಮ ಸಾಮಾಜಿಕ ತಾಣದಲ್ಲಿ ಟ್ವೀಟ್ ಮಾಡಿದ್ದಾರೆ.

ಇನ್ನು ಹೆಮ್ಮೆಯ ಅಜ್ಜ ಅಂತೂ ಆನಂದತುಂದಲಿತರಾಗಿದ್ದಾರೆ. ಸಂತೋಷ ಅದುಮಿಟ್ಟುಕೊಳ್ಳಲಾಗದೆ 'I AM DADA to the cutest baby girl, A dada ji ... Ecstatic' ಎಂದು ಟ್ವಿಟ್ಟರ್ ನಲ್ಲಿ ಗೀಚಿದ್ದಾರೆ.

ಕುತೂಹಲದ ಸಂಗತಿಯೆಂದರೆ ಐಶ್ವರ್ಯ 2007ರ ಏಪ್ರಿಲ್ ನಲ್ಲಿ ಅಭಿಷೇಕ್ ಬಚ್ಚನ್ ಅವರನ್ನು ವರಿಸಿದರು. ಅಂದಿನಿಂದಲೇ ಐಶ್ವರ್ಯ ಗರ್ಭಿಣಿ ಎಂಬ ಸುದ್ದಿ ಚಾಲ್ತಿಗೆ ಬಂದಿತು. ಮೊನ್ನೆ ಜೂನ್ ನಲ್ಲಿ ಮಾವ ಅಮಿತಾಭ್ ತನ್ನ ಸೊಸೆ ಗರ್ಭಿಣಿ ಎಂದು ಟ್ವಿಟ್ಟರಿನಲ್ಲಿ ಘೋಷಿಸಿದಾಗ ಆ ಸಂತಸದ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿತ್ತು.

<ul id="pagination-digg"><li class="next"><a href="/news/16-baby-girl-to-aishwarya-rai-normal-delivery-aid0135.html">Next »</a></li></ul>
English summary
Actress Aishwarya Rai has given birth to baby girl. Its a first baby for The Bollywood star couple. Hospital sources said the delivery was normal and came a few minutes before 10 a.m. The Bachchan and Rai families were present for the momentous occasion.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada