twitter
    For Quick Alerts
    ALLOW NOTIFICATIONS  
    For Daily Alerts

    ವಿಷ್ಣು ಅಭಿಮಾನಿಯಿಂದ 'ಸಿಂಹ ಗರ್ಜನೆ' ಪುಸ್ತಕ

    By Prasad
    |

    Author Janardhan Rao Salanke with Vishnuvardhan
    ದಿವಂಗತ ಡಾ. ವಿಷ್ಣುವರ್ಧನ್ ಅವರ ಅಪ್ಪಟ ಅಭಿಮಾನಿಯಾಗಿರುವ ಕೆಆರ್ ಜನಾರ್ಧನ ರಾವ್ ಸಾಳಂಕೆಯವರು ವಿಷ್ಣು ಕುರಿತ ಇನ್ನೊಂದು ಪುಸ್ತಕವನ್ನು ಬರೆದಿದ್ದು, ಡಿಸೆಂಬರ್ 9ರಿಂದ 11ರವರೆಗೆ ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ನಡೆಯಲಿರುವ 78ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆ ಮಾಡಲಿದ್ದಾರೆ.

    ಬೆಂಗಳೂರಿನ ಭುವಲ್ಕ ಗ್ರೂಪ್ ಆಫ್ ಕಂಪನೀಸ್ ನ ಚೇರ್ಮನ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಅವರ ಆಪ್ತ ಸಹಾಯಕರಾಗಿರುವ ಜನಾರ್ಧನ ರಾವ್ ಸಾಳಂಕೆಯವರು ವಿಷ್ಣು ಅವರ ಮೇಲಿನ ಅಭಿಮಾನವನ್ನು 'ಮರೆಯದ ಮಾಣಿಕ್ಯ - ಯಜಮಾನ ಡಾ.ವಿಷ್ಣುವರ್ಧನ್' ಎಂಬ ಪುಸ್ತಕ ತರುವ ಮುಖಾಂತರ ವ್ಯಕ್ತಪಡಿಸಿದ್ದರು. ಈ ಹೊತ್ತಗೆ ಕಳೆದ ವರ್ಷ ಸೆಪ್ಟೆಂಬರ್ 15ರಂದು ಬೆಂಗಳೂರಿನಲ್ಲಿ ಬಿಡುಗಡೆಯಾಗಿತ್ತು.

    ಆ ಪುಸ್ತಕದ ಯಶಸ್ಸಿನಿಂದ ಉತ್ತೇಜಿತರಾಗಿರುವ ಸಾಳಂಕೆ 'ಸಿಂಹ ಗರ್ಜನೆ' ಎಂಬ ಇನ್ನೊಂದು ಪುಸ್ತಕವನ್ನು ಹೊರತಂದಿದ್ದಾರೆ. ಡಿಸೆಂಬರ್ 30ರ 2009ರಂದು ಸಾಹಸಸಿಂಹ ವಿಷ್ಣುವರ್ಧನ್ ಕಾಲವಾದ ನಂತರ 2011ರ ಡಿಸೆಂಬರ್ 30ರವರೆಗೆ ವಿಷ್ಣು ಕುರಿತಾಗಿ ಜರುಗಿದ ಎಲ್ಲ ಬೆಳವಣಿಗಳನ್ನು ಈ ಪುಸ್ತಕದಲ್ಲಿ ದಾಖಲಿಸಿರುವುದಾಗಿ ಒನ್ಇಂಡಿಯಾ ಕನ್ನಡ ಪೋರ್ಟಲ್‌ಗೆ ಸಾಳಂಕೆ ತಿಳಿಸಿದ್ದಾರೆ.

    ಇದರಲ್ಲಿ ಇನ್ನೂ ಯಥಾಸ್ಥಿತಿ ಕಾಯ್ದುಕೊಂಡಿರುವ ವಿಷ್ಣು ಸ್ಮಾರಕ, ಉದ್ಯಾನವನ ಕುರಿತು ತಮ್ಮ ಅನಿಸಿಕೆಗಳನ್ನು ಸಾಳಂಕೆ ಹಂಚಿಕೊಂಡಿದ್ದಾರೆ. ಅಲ್ಲದೆ, ಚಿತ್ರರಂಗದ ಪ್ರಮುಖ ಕಲಾವಿದರ ಸಂದರ್ಶನಗಳನ್ನು ಪುಸ್ತಕ ಒಳಗೊಂಡಿರುತ್ತದೆ. ಒಟ್ಟಿನಲ್ಲಿ ವಿಷ್ಣು ಅವರ ಚಿತಾಭಸ್ಮವನ್ನು ಶೇಖರಿಸಿಟ್ಟುಕೊಂಡು ತಮ್ಮ ಅಭಿಮಾನವನ್ನು ಮೆರೆದಿರುವ ಸಾಳಂಕೆ ಅವರಿಂದ ವಿಷ್ಣುವರ್ಧನ್ ಅಭಿಮಾನಿಗಳಿಗೆ ಓದಲು ಮತ್ತೊಂದು ಸಮೃದ್ಧ ಹೊತ್ತಗೆ ಹೊರಬರಲಿದೆ.

    English summary
    Great fan of Sahasasimha Dr Vishnuvardhan, KR Janardhana Rao Salanke has come out with another book on his idol Vishnu. He had released his first book on Vishnu 'Mareyada Manikya - Yajamana Dr. Vishnuvardhan' in 2010. The latest book will be released at Gangavati Kannada Sahitya Sammelana in December 2011.
    Wednesday, November 16, 2011, 11:54
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X