ನಾನು ತುಂಬ ಅದೃಷ್ಟವಂತೆ: ಅರುಂಧತಿ ನಾಗ್
ಕನ್ನಡ ಚಿತ್ರರಂಗದ ಹಿರಿಯ ಕಲಾವಿದೆ ಹಾಗೂ ರಂಗಕರ್ಮಿ ಅರುಂಧತಿ ನಾಗ್ ಅವರಿಗೆ ಈ ಬಾರಿ ಶ್ರೇಷ್ಠ ಪೋಷಕ ನಟಿ ಪ್ರಶಸ್ತಿ ಸಂದಿದೆ. 'ಪಾ' ಚಿತ್ರದಲ್ಲಿನ ಅವರ ಅಭಿನಯಕ್ಕೆ ರಾಷ್ಟ್ರಪ್ರಶಸ್ತಿ ಸಂದಿರುವುದು ಅವರ ಉತ್ಸಾಹವನ್ನು ಇಮ್ಮಡಿಸಿದೆ. 'ಪಾ' ಚಿತ್ರದಲ್ಲಿ ಅವರು ವಿದ್ಯಾಬಾಲನ್ ಅವರ ತಾಯಿಯಾಗಿ ಹಾಗೂ ಅಮಿತಾಬ್ ಬಚ್ಚನ್‌ಗೆ ಅಜ್ಜಿಯಾಗಿ ಅಮೋಘ ಅಭಿನಯ ನೀಡಿದ್ದರು.
ಪ್ರಶಸ್ತಿ ಸಂದಿರುವ ಬಗ್ಗೆ ಅರುಂಧತಿ ನಾಗ್ ಮಾತನಾಡುತ್ತಾ, ನಾನು ತುಂಬ ಅದೃಷ್ಟವಂತೆ. ಉತ್ತಮ ಚಿತ್ರದಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ ಎಂಬುದನ್ನು 'ಪಾ' ಚಿತ್ರ ನಿರೂಪಿಸಿದೆ. ಭಾರತೀಯ ಚಿತ್ರರಂಗದಲ್ಲಿ ಅಂತಹ ಪಾತ್ರ ಸಿಗುವುದು ತೀರಾ ವಿರಳ ಎಂದಿದ್ದಾರೆ. ಪಾ ಚಿತ್ರದಲ್ಲಿನ ನನ್ನ ಪಾತ್ರ ತೃಪ್ತಿ ತಂದಿದೆ. ತೀರಾ ಅಪರೂಪ ಎನ್ನಿಸುವ ಈ ಪಾತ್ರ ನನ್ನನ್ನು ಹುಡುಕಿಕೊಂಡು ಬಂದಿತ್ತು. ಆ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದೆ.
ಪ್ರಶಸ್ತಿ ಬಂದಿರುವುದು ನಿಜಕ್ಕೂ ಮರೆಯಲಾಗದ ಕ್ಷಣ. ಈ ಹಿಂದೆ ನನಗೆ ಕೇಂದ್ರ ನಾಟಕ ಅಕಾಡೆಮಿ ಪ್ರಶಸ್ತಿ ಲಭಿಸಿತ್ತು. ಈಗ ಚಲನಚಿತ್ರ ರಾಷ್ಟ್ರ ಪ್ರಶಸ್ತಿ ಸಿಗುತ್ತಿರುವುದು ಮತ್ತಷ್ಟು ಸಂತಸಕ್ಕೆ ಕಾರಣವಾಗಿದೆ. ರಂಗಭೂಮಿ ಮತ್ತು ಸಿನಿಮಾ ಇವರೆಡನ್ನೂ ಆಳವಾಗಿ ಪ್ರೀತಿಸುವ ನನಗೆ ಇದೊಂದು ವಿಶೇಷ ಕೊಡುಗೆ ಎಂದಿದ್ದಾರೆ.


Click it and Unblock the Notifications











