ಕನ್ನಡ ಚಿತ್ರರಂಗ ಮೇಲಕ್ಕೆತ್ತಿದ್ದ ಕಂಡ್ರಿ ನಮ್ ಯಡ್ಡಿ

ಆದರೆ, ಹಳ್ಳಕ್ಕೆ ಬಿದ್ದಾಗ ಆಳಿಗೆ ಒಂದು ಕಲ್ಲು ಎಂದು ಎಸೆಯುವುದು ತಪ್ಪು. ಅಪರಾಧಿಗಳಿಗೆ ಶಿಕ್ಷಿಸೋಕೆ ನ್ಯಾಯಾಲಯವಿದೆ. ಸರ್ಕಾರ ಇದೆ. ವೈಯಕ್ತಿಕವಾಗಿ ಇಂಡಸ್ಟ್ರೀಗೆ ಯಡಿಯೂರಪ್ಪ ಅವರ ಬಂಧನದ ಬಗ್ಗೆ ಅಂಥ ಖುಷಿ ಏನಿಲ್ಲ ಎಂದು ಕನ್ನಡ ಚಿತ್ರರಂಗದ ಗಲ್ಲಿ ಗಲ್ಲಿಗಳಲ್ಲಿ ಮಾತು ಶುರುವಾಗಿದೆ.
ಸೊಗಸುಗಾರ ಪುಟ್ಸಾಮಿ ಯಡಿಯುರಪ್ಪ ಅವರಿಗೂ ಸಿನಿಮಾಕ್ಕೂ ಎಲ್ಲಿನ ನಂಟು ಎಂದು ಅನ್ನಿಸಬಹುದು. ಅದರೆ, ಯಡಿಯೂರಪ್ಪ ಅವರ ಸರ್ಕಾರ ಅಧಿಕಾರದಲ್ಲಿದ್ದಾಗ ಸಾಕಷ್ಟು ಅನುದಾನ, ಹೊಸ ನಿಯಮಾವಳಿಗಳನ್ನು ರೂಪಿಸಿ, ಚಿತ್ರರಂಗದ ಏಳಿಗೆಗೆ ಸಹಕರಿಸಿದ್ದರು ಎಂಬುದಂತೂ ನಿಜ.
* 30 ಸಿನಿಮಾಗಳಿಗೆ ಸಿಗುತ್ತಿದ್ದ ಸಬ್ಸಿಡಿಯನ್ನು 50 ಚಿತ್ರಗಳಿಗೆ ಏರಿಸಿದರು.
* ಪೈರಸಿ ಹಾವಳಿ ತಡೆಗಾಗಿ ಗೂಂಡಾ ಕಾಯ್ದೆ ಜಾರಿಗೆ ತಂದರು.
* ಡಾ. ರಾಜ್ ಕುಮಾರ್ ಸ್ಮಾರಕಕ್ಕೆ ಶಂಕುಸ್ಥಾಪನೆ
* ಡಾ. ವಿಷ್ಣುವರ್ಧನ್ ಸ್ಮಾರಕಕ್ಕೆ 10 ಎಕರೆ ಜಮೀನು ನೀಡಿಕೆ.
* ಡಾ. ವಿಷ್ಣುವರ್ಧನ್ ಹಾಗೂ ಡಾ. ಕೆಎಸ್ ಅಶ್ವಥ್ ಅವರ ಹೆಸರಲ್ಲಿ ರಾಜ್ಯಮಟ್ಟದ ಪ್ರಶಸ್ತಿ ಘೋಷಣೆ
* ಕನ್ನಡ ಚಿತ್ರರಂಗಕ್ಕೆ 75 ವರ್ಷ ತುಂಬಿದ ಹಿನ್ನೆಲೆಯಲ್ಲಿ ವಿಜೃಂಭಣೆಯಿಂದ ಅಮೃತ ಮಹೋತ್ಸವ ಆಚರಣೆ.
* ಅಮೃತ ಮಹೋತ್ಸವ ಅಂಗವಾಗಿ ಅಮೃತ ಭವನ ನಿರ್ಮಾಣಕ್ಕಾಗಿ 2 ಎಕರೆ ವಿಶಾಲ ಭೂಮಿಯನ್ನು ನಂದಿನಿ ಲೇಔಟ್ ನಲ್ಲಿ ಗುರುತಿಸಲಾಗಿದೆ. ಕಟ್ಟಡ ನಿರ್ಮಾಣಕ್ಕೆ 5 ಕೋಟಿ ರು ನೀಡಲಾಗಿದೆ.
ಒಳ್ಳೆ ಸಿನಿಮಾಗಳು ಬಂದರೆ ತಪ್ಪದೇ ಕುಟುಂಬ ಸಮೇತ ಬಂದು ಚಿತ್ರವಿಕ್ಷೀಸಿ ಮೆಚ್ಚುಗೆ ಸೂಚಿಸುವ ಪರಿಪಾಠ ಯಡಿಯೂರಪ್ಪ ಅವರಲ್ಲಿತ್ತು. ಒಟ್ಟಿನಲ್ಲಿ ಹಲವು ಹಗರಣಗಳ ಆರೋಪಿ ಯಡಿಯೂರಪ್ಪ ಅವರ ಪರ ಕನ್ನಡ ಚಿತ್ರರಂಗದ ಅನೇಕರು ಸಿಂಪತಿ ಸೂಚಿಸಿದ್ದಾರೆ.
ಏನಾದರೂ ಮುಂದೆ ಸಾಗು..ನೀ ಎಂದು ಹಾಡುತ್ತಾ ಯಡಿಯೂರಪ್ಪ ಅವರು ಜೈಲಿನಿಂದ ಈಗ ಆಸ್ಪತ್ರೆಗೆ ಹಾರಿದ್ದಾರೆ.


Click it and Unblock the Notifications











