»   » ಅತ್ಯಂತ ಸೆಕ್ಸಿ ಮಹಿಳೆಯಾಗಿ ಮಂಗಳೂರು ಮಲ್ಲಿಗೆ ದೀಪಿಕಾ

ಅತ್ಯಂತ ಸೆಕ್ಸಿ ಮಹಿಳೆಯಾಗಿ ಮಂಗಳೂರು ಮಲ್ಲಿಗೆ ದೀಪಿಕಾ

Posted By:
Subscribe to Filmibeat Kannada

ಬಾಲಿವುಡ್ ತಾರೆ ದೀಪಿಕಾ ಪಡುಕೋಣೆ ಜಗತ್ತಿನ ಅತ್ಯಂತ ಸೆಕ್ಸಿ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಎಫ್ ಎಚ್ ಎಂ ನಿಯತಕಾಲಿಕೆ ದೀಪಿಕಾಗೆ ಜಗತ್ತಿನ ಅತ್ಯಂತ ಸೆಕ್ಸಿ ಮಹಿಳೆ ಎಂಬ ಪಟ್ಟವನ್ನು ನೀಡಿದೆ. ವಿಶ್ವದ ನೂರು ಮಹಿಳೆಯಲ್ಲಿ ದೀಪಿಕಾ ಸೌಂದರ್ಯ ಮೊದಲ ಸ್ಥಾನದಲ್ಲಿ ನಿಂತಿದೆ.

ಕಳೆದ ವರ್ಷ 6ನೇ ಸ್ಥಾನದಲ್ಲಿದ್ದ ದೀಪಿಕಾ ಈಗ ಏಕಾಏಕಿ ಪ್ರಥಮ ಸ್ಥಾನಕ್ಕೆ ಜಿಗಿದಿದ್ದಾರೆ. ಆಕರ್ಷಕ ಕಪ್ಪು ಉಡುಗೆ ತೊಟ್ಟು ಎಫ್ ಎಚ್ ಎಂ ನಿಯತಕಾಲಿಕೆಯ ಮುಖಪುಟವನ್ನು ದೀಪಿಕಾ ಅಲಂಕರಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಮೊದಲ ಸ್ಥಾನದಲ್ಲಿರುತ್ತಿದ್ದ ಕತ್ರಿನಾ ಈ ಬಾರಿಯ ಹಿಂದೆ ಸರಿದಿದ್ದಾರೆ.

ಇನ್ನು 24ರ ಹರೆಯದ ದೀಪಿಕಾ ಹೇಳುವುದೇನೆಂದರೆ, ದೇಹ ಪ್ರದರ್ಶನವನ್ನು ಸೆಕ್ಸಿ ಎಂದು ಹೇಳಲು ಆಗುವುದಿಲ್ಲ. ನಿಮ್ಮನ್ನು ನೀವು ಎಷ್ಟು ಆತ್ಮವಿಶ್ವಾಸದಿಂದ ಪ್ರದರ್ಶಿಸುತ್ತೀರಿ ಎಂಬುದರ ಮೇಲೆ 'ಸೆಕ್ಸಿ' ಎಂಬುದು ನಿಂತಿದೆ. ನಿಮ್ಮ ಬಗ್ಗೆ ನೀವು ಹೇಗೆ ಫೀಲಾಗುತ್ತಿರಿ ಎಂಬ ಅಂಶ ನೀವೆಷ್ಟೆ ಸೆಕ್ಸಿ ಎಂಬುದನ್ನು ನಿರ್ಧರಿಸುತ್ತದೆ ಎನ್ನುತ್ತಾರೆ ದೀಪಿಕಾ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada