ಮುಂಬೈನಲ್ಲಿ ಮನೆ ಕೊಳ್ಳಲು ದೀಪಿಕಾ ತೀವ್ರ ಪ್ರಯತ್ನ
ರಣಬೀರ್ ಕಪೂರ್‌ಗೆ ಕಾಂಡೋಮ್ ಉಡುಗೊರೆ ನೀಡುವುದಾಗಿ ಹೇಳಿದ್ದ ಬೆಂಗಳೂರು ಬಾಲೆ ದೀಪಿಕಾ ಪಡುಕೋಣೆ ಹೊಸ ಮನೆ ಕೊಳ್ಳಲು ತೀವ್ರ ಪ್ರಯತ್ನ ಮಾಡುತ್ತ್ತಿದ್ದಾರೆ. ಈಗಾಗಲೆ ಮುಂಬೈನ ಬಾಂದ್ರಾದಲ್ಲಿ ದೀಪಿಕಾಗೆ 2ಬಿಎಚ್‌ಕೆ ಮನೆ ಇದೆ. ಮುಂಬೈನ ಹೃದಯ ಭಾಗದಲ್ಲಿ ಮನೆ ಇದ್ದರೆ ಚೆಂದ ಅನ್ನಿಸಿ ಆಕೆ ಹುಡುಕಾಟ ನಡೆಸಿದ್ದಾರೆ.
ಮುಂಬೈನ ಹೃದಯ ಭಾಗದಲ್ಲಿ ಮನೆಯಿದ್ದರೆ ಜೀವನ ಸೊಗಸಾಗಿರುತ್ತದೆ ಎಂದು ಆಕೆಯ ಗೆಳಯನೊಬ್ಬ ಸಲಹೆ ಕೊಟ್ಟಿದ್ದನಂತೆ. ಹಾಗಾಗಿ ಆಕೆ ಹೊಸ ಮನೆಗೆ ಹುಡುಕಾಟ ನಡೆಸಿದ್ದಾರೆ. ಎಲ್ಲರೊಂದಿಗೆ ಸಂಪರ್ಕದಲ್ಲಿರಲೂ ಅನುಕೂಲವಾಗಿರುತ್ತದೆ ಎಂಬ ದೃಷ್ಠಿಯಿಂದ ದೀಪಿಕಾ ಈ ನಿರ್ಧಾರಕ್ಕೆ ಬಂದಿದ್ದಾರೆ.
ಮುಂಬೈನ ಕೊಲಬಾ ಪ್ರದೇಶದಲ್ಲಿ ಸಿದ್ಧಾರ್ಥ್ ಮಲ್ಯನ ಮನೆಯೂ ಇದೆ. ಹಾಗಾಗಿಯೇ ದೀಪಿಕಾ ಪಡುಕೋಣೆ ಕೂಡ ಅದೇ ಪ್ರದೇಶಕ್ಕ್ಕೆ ಶಿಫ್ಟ್ ಆಗುತ್ತಿದ್ದಾರೆ ಎಂಬ ಗುಸು ಗುಸು ಮಾತುಗಳು ಕೇಳಿಬಂದಿವೆ. ಮನೆ ಎಲ್ಲಾ ನೋಡಿ ಆಗಿದೆಯಂತೆ. ಇನ್ನೇನಿದ್ದರೂ ಕಾಗದ ಪತ್ರಗಳಿಗೆ ಸಹಿ ಹಾಕುವುದಷ್ಟೆ ಬಾಕಿ ಇದೆ ಎಂಬುದು ತಾಜಾ ಸಮಾಚಾರ.
More from Filmibeat
ದೀಪಿಕಾ ಪಡುಕೋಣೆ ಬಾಲಿವುಡ್ ಸಿದ್ಧಾರ್ಥ್ ಮಲ್ಯ ಮುಂಬೈ ಮನೆ ಕಾಂಡೋಮ್ ರಣಬೀರ್ ಕಪೂರ್ deepika padukone siddharth mallya ranbir kapoor condom bollywood


Click it and Unblock the Notifications











