»   » ಧೋನಿ ಮತ್ತು ಲಕ್ಷ್ಮಿ ನಡುವೆ ಏನೋ ಒಂಥರಾ!

ಧೋನಿ ಮತ್ತು ಲಕ್ಷ್ಮಿ ನಡುವೆ ಏನೋ ಒಂಥರಾ!

Posted By:
Subscribe to Filmibeat Kannada
Dhoni and Lakshmi Rai
ಕನ್ನಡದ ವಾಲ್ಮೀಕಿ, ಸ್ನೇಹಾನಾ ಪ್ರೀತಿನಾ, ಮಿಂಚಿನ ಓಟ ಚಿತ್ರಗಳಲ್ಲಿ ನಟಿಸಿದ್ದ ಪ್ರಸ್ತುತ ತಮಿಳು ಚಿತ್ರರಂಗದಲ್ಲಿ ಬ್ಯುಸಿಯಾಗಿರುವ 27ರ ಚೆಲುವೆ ಲಕ್ಷ್ಮಿ ರೈ ಗೊತ್ತಲ್ಲ! ಅದೇ ರೀ...ಬೆಳಗಾವಿ ಬೆಡಗಿ, ನೀಳ ಕಾಲುಗಳ ನಟಿಲಕ್ಷ್ಮಿ ರೈ, ಆಕೆ ಇದ್ದಕ್ಕಿದ್ದಂತೆ ಪತ್ರಿಕೆಗಳ ಮುಖಪುಟ ಅಲಂಕರಿಸಿದ್ದಾರೆ. ಆಕೆಗೂ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿಗೂ ನಡುವೆ ಏನೋ ಒಂಥರಾ,ಏನೋ ಒಂಥರಾ ಈ ಪ್ರೀತಿಯು ಈ ರೀತಿಯು ಶುರುವಾದ ಆನಂತರ!

ಚಿತ್ರನಟಿ ಲಕ್ಷ್ಮಿ ರೈ ಮತ್ತು ಧೋನಿ ಭಾನುವಾರ ರಾತ್ರಿ ಚೆನ್ನೈನ ಪ್ರೀಮಿಯಂ ಹೋಟೆಲ್ ಗೆ ಜೊತೆಯಾಗಿ ಹಿತವಾಗಿ, ತೇಲಿ ನಡೆವ...ಎಂದು ಹಾಡಿಕೊಂಡು ಅಲ್ಲದಿದ್ದರೂ ಹಾಗೆ ಸುಮ್ಮನೆ ಹೋಗಿ ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದ್ದಾರೆ. ಜೊತೆಯಾಗಿ ಅವರು ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಅವರು ಸಾಕಷ್ಟು ಸಲ ಕಾಣಿಸಿಕೊಂಡು ಮಾಧ್ಯಮಗಳಿಗೆ ಆಹಾರವಾಗಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಲಕ್ಷ್ಮಿರೈ, ನೀವು ತಿಳಿದುಕೊಂಡಿರುವಂತೆ ನಮ್ಮಿಬ್ಬರ ನಡುವೆ ಆ ರೀತಿ ಏನು ಇಲ್ಲ. ನಮ್ಮುದು ಬರಿ ಸ್ನೇಹ ಸಂಬಂಧವಷ್ಟೆ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಪತ್ರಕರ್ತರು ಬಿಡಬೇಕಲ್ಲ! ಐಪಿಎಲ್ ಪಂದ್ಯ ಮುಗಿದ ಮೇಲೆ ನೀವಿಬ್ಬರೂ ಒಂದೇ ರೆಸಾರ್ಟ್ ನಲ್ಲಿ ರಾತ್ರಿ ಕಳೆದರಂತಲ್ಲಾ ಎಂದು ಕೇಳಿಯೆ ಬಿಟ್ಟರು. ಈ ಪ್ರಶ್ನೆಗೆ ಲಕ್ಷ್ಮಿ ರೈ ಉತ್ತರಿಸಿದೆ ಗಳಗಳನೆ ಅತ್ತೇ ಬಿಟ್ಟರು. ಸರಿ ಧೋನಿಯನ್ನಾದರೂ ಪ್ರಶ್ನಿಸೋಣ ಎಂದರೆ ಆತ ಕೈಗೆ ಸಿಗುತ್ತಿಲ್ಲವಂತೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಲಕ್ಷ್ಮಿರೈ ಬಿಸಿಬಿಸಿ ಚಿತ್ರಗಳಿಗೆ ಇಲ್ಲಿ ಕ್ಲಿಕ್ಕಿಸಿ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada