ಸಕ್ಸಸ್ ಗಾಗಿ ಪದ್ಮನಾಭನ್ ದಯಾಳ್ ಸರ್ಕಸ್

ಕಾರಣ ಇಷ್ಟೆ, ಗಣೇಶ್ ರ ಅರಮನೆ, ಬೊಂಬಾಟ್, ಸಂಗಮ ಚಿತ್ರಗಳು ಸೋಲುಂಡಿವೆ. ಈಗ 'ಸರ್ಕಸ್' ಮೇಲೆ ಅವರು ಅಪಾರ ಭರವಸೆ ಇಟ್ಟಿದ್ದಾರೆ. ಆ ಚಿತ್ರವನ್ನು ಹೇಗಾದರು ಮಾಡಿ ಗೆಲ್ಲಿಸಬೇಕೆಂದು ಛಲ ತೊಟ್ಟಿದ್ದಾರೆ. ದಯಾಳ್ ರ ಛಲಕ್ಕೆ ಗಣೇಶ್ ಸಹ ಹೆಗಲು ಕೊಟ್ಟಿದ್ದಾರೆ. ಒಂದು ಹಂತದಲ್ಲಿ ಸರ್ಕಸ್ ಚಿತ್ರಕಥೆಯನ್ನು ಬದಲಾಯಿಕೊಳ್ಳುವ ಮಟ್ಟಿಗೆ ದಯಾಳ್ ಭಯಭೀತರಾಗಿದ್ದರು. ಈ ವಿಚಾರದಲ್ಲಿ ಚಲನಚಿತ್ರ ವಾಣಿಜ್ಯ ಮಂಡಲಿ ಅವರನ್ನು ಹಣ್ಣುಗಾಯಿ ನೀರುಗಾಯಿ ಮಾಡಿಬಿಟ್ಟಿತ್ತು.
ಒಟ್ಟಿನಲ್ಲಿ ದಯಾಳ್ 'ಸರ್ಕಸ್' ಚಿತ್ರವನ್ನು ಸರ್ವಾಂಗ ಸುಂದರವಾಗಿ ಮೂಡಿಬರುವಂತೆ ಶಕ್ತಿ ಮೀರಿ ಪ್ರಯತ್ನಿಸುತ್ತಿರುವು ಸತ್ಯ. ಗಣೇಶ್ ಗಿಂತಲೂ ದಯಾಳ್ ಗೆ ಈ ಚಿತ್ರ ಮುಖ್ಯವಾಗಿಬಿಟ್ಟಿದೆ. ಆ ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸೋಣ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications