ಜೋಗಿ ಪ್ರೇಮ್ ಮೇಲೆ ಮಠ ಗುರುಪ್ರಸಾದ್ ಆಣೆ
'ಮಠ' ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ದಿಢೀರ್ ಎಂದು ಮತ್ತೆ ಗಾಂಧಿನಗರದಲ್ಲಿ ಪ್ರತ್ಯಕ್ಷರಾಗಿದ್ದಾರೆ. ಚಿತ್ರಕತೆ, ಸಂಭಾಷಣೆ, ರಿಯಾಲಿಟಿ ಶೋ ಎಂದು ಅವರು ಕಳೆದುಹೋಗಿದ್ದರು. ಈಗವರು ತಮ್ಮ ಮಹತ್ವಾಕಾಂಕ್ಷಿಯ 'ಡೈರೆಕ್ಟರ್ಸ್ ಸ್ಪೆಷಲ್' ಚಿತ್ರವನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಪತ್ರಿಕೆಗಳಲ್ಲಿ ಬಣ್ಣದ ಜಾಹೀರಾತು ನೀಡಿದ್ದಾರೆ.
ಅವತ್ತು 'ಮಠ', ನಿನ್ನೆ 'ಎದ್ದೇಳು ಮಂಜುನಾಥ' ಸದ್ಯದಲ್ಲೇ 'ಡೈರೆಕ್ಟರ್ಸ್ ಸ್ಪೆಷಲ್' ಎಂದಿದ್ದಾರೆ. ಕೇವಲ ಇಷ್ಟೇ ಹೇಳಿದರೆ ಯಾರು ನಂಬುತ್ತಾರೆ? ಅದಕ್ಕಾಗಿಯೇ Pure Entertainment..No Gimmiks...! ಎಂದು ಹಾಕಿ ಅದರ ಕೆಳಗೆ ಪ್ರೇಮ್ ಮೇಲಾಣೆ ಎಂದಿದ್ದಾರೆ! ಈ ಮೂಲಕ ಚಿತ್ರ ಬಿಡುಗಡೆ ಬಗ್ಗೆ ಗ್ಯಾರಂಟಿ ಸರ್ಟಿಫಿಕೇಟ್ ನೀಡಿದಂತಾಗಿದೆ. ಆದರೆ ಬಿಡುಗಡೆ ದಿನಾಂಕದ ಬಗ್ಗೆ ಖಚಿತ ಮಾಹಿತಿ ಇಲ್ಲ.
ಕನ್ನಡದ ಕೋಟ್ಯಾಧಿಪತಿ ರಿಯಾಲಿಟಿ ಶೋಗೆ ಸಂಭಾಷಣೆ ಹೆಣೆದು ಸೈ ಎನ್ನಿಸಿಕೊಂಡಿರುವ ಗುರು ಈಗ ಕೊಂಚ ನಿರಾಳರಾಗಿದ್ದಾರೆ. ತಮ್ಮ ಡೈರೆಕ್ಟರ್ಸ್ ಸ್ಪೆಷಲ್‌ನ್ನು ವಿಶೇಷ ಮುತುವರ್ಜಿಯಿಂದ ಕೈಗೆತ್ತಿಕೊಂಡು ಅಂತಿಮ ಸ್ಪರ್ಶ ನೀಡುತ್ತಿದ್ದಾರೆ. ಅವರ ನಿರ್ದೇಶನ ಇಷ್ಟಪಡುವವರು ಚಿತ್ರವನ್ನು ಕಾತುರದಿಂದ ನಿರೀಕ್ಷಿಸುವಂತಾಗಿದೆ. (ಒನ್‌ಇಂಡಿಯಾ ಕನ್ನಡ)


Click it and Unblock the Notifications











