For Quick Alerts
  ALLOW NOTIFICATIONS  
  For Daily Alerts

  ದುನಿಯಾ ವಿಜಯ್ ಚಿತ್ರ ಭಾರಿ ಬೆಲೆಗೆ ಮಾರಾಟ

  |

  ದುನಿಯಾ ವಿಜಯ್ ನಾಯಕತ್ವದ 'ಭೀಮಾ ತೀರದಲ್ಲಿ' ಚಿತ್ರದ ವಿತರಣೆ ಹಕ್ಕನ್ನು ಚಿಂಗಾರಿ, ಅಣ್ಣಾಬಾಂಡ್ ವಿತರಕರಾಗಿರುವ ಸಮರ್ಥ್ ವೆಂಚರ್ಸ್ ಮಾಲೀಕರಾದ ಪ್ರಸಾದ್ ಪಡೆದುಕೊಂಡಿದ್ದಾರೆ. ಅವರು ಇದನ್ನು ರು. 4.25 ಕೋಟಿಗೆ ಪಡೆದುಕೊಂಡಿದ್ದಾರೆಂಬ ಸುದ್ದಿ ಬಂದಿದೆ. ಸದ್ಯಕ್ಕೆ ಅವರ ವಿತರಣೆಯ 'ಚಿಂಗಾರಿ', ಯಶಸ್ವಿ ಪ್ರದರ್ಶನ ಕಾಣುತ್ತಿದೆ.

  ಈ ಮೊದಲು ಬಂದಿದ್ದ ವಿಜಯ್ ಚಿತ್ರ 'ಜರಾಸಂದ' ಗಲ್ಲಾಪೆಟ್ಟಿಗೆಯಲ್ಲಿ ಗೋತಾ ಹೊಡೆದಿದ್ದರಿಂದ ಸಹಜವಾಗಿ ಈ ವ್ಯವಹಾರ ಜನರಲ್ಲಿ ಕುತೂಹಲ ಕೆರಳಿಸಿದೆ. ಜರಾಸಂಧ ನಂತರ ತೆರೆಗೆ ಬರಲಿರುವ ಚಿತ್ರ ಇದಾಗಿದೆ. ವಿಜಯ್ ಅವರಿಗೆ ನಾಯಕಿಯಾಗಿ ಈ ಚಿತ್ರದಲ್ಲಿ ಪ್ರಜ್ವಲ್ ಪೂವಯ್ಯ ಅಭಿನಯಿಸಿದ್ದಾರೆ.

  ಸಮರ್ಥ್ ವೆಂಚರ್ಸ್ ಮಾಲೀಕರು ಚಿಂಗಾರಿ ಚಿತ್ರದ ಯಶಸ್ವಿ ಪ್ರದರ್ಶನದಿಂದ ಲಾಭದ ಹಾದಿಯಲ್ಲಿದ್ದಾರೆ. ಅವರ ವಿತರಣೆಯ ಮುಂದಿನ ಚಿತ್ರ ಪುನೀತ್ ಅಣ್ಣಾ ಬಾಂಡ್ ಆಗಿರುವುದರಿಂದ ಸಹಜವಾಗಿ ಲಾಭದ ನಿರೀಕ್ಷೆಯಿದೆ. ಈ ನಡುವೆ ಅವರು 2 ತೆಲುಗು ರೀಮೇಕ್ ಚಿತ್ರದ ನಿರ್ಮಾಣವನ್ನು ಸಹ ಘೋಷಿಸಿದ್ದಾರೆ. ವಿಜಯ್, ಪ್ರಸನ್ನ ಪಾಲಿಗೆ ಏನಾಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಾಗಿದೆ. (ಒನ್ ಇಂಡಿಯಾ ಕನ್ನಡ)

  English summary
  Darshan movie 'Chingari' Distributor, Samart Ventures Prasad has taken the distribution rights of Vijay starer movie 'Bheema Theeradalli' for Rs. 4.25 Crore. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X