ದ್ವಾರಕೀಶ್ ರ 69ನೇ ಸಿನಿಮಾ ವಿಷ್ಣುವರ್ಧನ ಕಲರವ
ವಿಷ್ಣುವರ್ಧನ ಚಿತ್ರದ ಮೂಲಕ ನಟ ವಿಷ್ಣುವರ್ಧನ್ ಆಪ್ತಮಿತ್ರ 'ದ್ವಾರಕೀಶ್ ಮನೆಮಾತಾಗಿದ್ದಾರೆ. ಅವರ ನಿರ್ಮಾಣ ಹಾಗೂ ಸುದೀಪ್ ನಿರ್ದೇಶನದ ಚಿತ್ರ 'ವಿಷ್ಣುವರ್ಧನ' ರಾಜ್ಯಾದ್ಯಂತ ಬಿಡುಗಡೆಯಾಗಿ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಈ ಚಿತ್ರ ದ್ವಾರಕೀಶ್ ರ ನಿರ್ಮಾಣದ 69 ನೇ ಚಿತ್ರ.
ಮೇಯರ್ ಮುತ್ತಣ್ಣ ಚಿತ್ರದ ಮೂಲಕ ಚಿತ್ರನಿರ್ಮಾಣ ಪ್ರಾರಂಭಿಸಿದ ದ್ವಾರಕೀಶ್, ಹಿಂತಿರುಗಿ ನೋಡಲೇ ಇಲ್ಲ. ಸಿಂಗಾಪುರದಲ್ಲಿ ರಾಜಾಕುಳ್ಳ ಕನ್ನಡದ ಚಿತ್ರವನ್ನು ಮೊದಲ ಬಾರಿಗೆ ವಿದೇಶದಲ್ಲಿ ಚಿತ್ರೀಕರಿಸಿದ ಕೀರ್ತಿ ಇವರದು. ಆದರೆ ಚಿತ್ರನಿರ್ಮಾಣದಿಂದ ಆಸ್ತಿ-ಪಾಸ್ತಿ, ಮನೆ ಕಳೆದುಕೊಂಡು ಕಂಗಾಲಾಗಿದ್ದ ಕಾಲವೊಂದಿತ್ತು.
ವಿಷ್ಣುವರ್ಧನ್ ನಟನೆಯ 'ಆಪ್ತಮಿತ್ರ' ಚಿತ್ರದ ಮೂಲಕ ಸಾಕಷ್ಟು ಹಣ ಗಳಿಸಿ ಕಳೆದುಹೋಗಿದ್ದ ಸಂಪತ್ತನ್ನೆಲ್ಲಾ ವಾಪಸ್ ಪಡೆದರು. ನಂತರ ದ್ವಾರಕೀಶ್ ಸಾಕಷ್ಟು ಎಚ್ಚರಿಕೆಯಿಂದಲೇ ಹೆಜ್ಜೆ ಇಡುತ್ತಾ ಸಾಗುತ್ತಿದ್ದಾರೆ. ಈಗ ವಿಷ್ಣುವರ್ಧನ್ ಮೂಲಕ ಮತ್ತೆ ಸಾಕಷ್ಟು ಹಣ ಗಳಿಸುವುದು ಖಾತ್ರಿಯಾಗಿದೆ. ಕನ್ನಡಕ್ಕೆ ಹೀಗೇ ಒಳ್ಳೊಳ್ಳೆಯ ಸಿನಿಮಾಗಳು ದ್ವಾರ್ಕಿಯಿಂದ ಬರಲಿ ಎಂಬುದು ಎಲ್ಲರ ಹಾರೈಕೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











