»   »  ದೂದ್ ಪೇಡ ದಿಗಂತ್ ಕನ್ನಡದಲ್ಲಿ ಸಖತ್ ಬ್ಯುಸಿ

ದೂದ್ ಪೇಡ ದಿಗಂತ್ ಕನ್ನಡದಲ್ಲಿ ಸಖತ್ ಬ್ಯುಸಿ

Subscribe to Filmibeat Kannada
Diganth
ಉತ್ತರಾಯಣ ಪುಣ್ಯಕಾಲ ಆರಂಭವಾಗುತ್ತಿದ್ದಂತೆ ದೂದ್ ಪೇಡ ದಿಗಂತ್ ಪಥ ಸಹ ಬದಲಾಗಿದೆ. ಅಮೆರಿಕಾದಲ್ಲಿ 'ಈ ಪ್ರೀತಿ' ಚಿತ್ರೀಕರಣ ಮುಗಿಸಿಕೊಂಡು ತವರಿಗೆ ಇದೀಗ ತಾನೆ ಅವರು ಹಿಂತಿರುಗಿದ್ದಾರೆ. 'ಗಾಳಿಪಟ' ಚಿತ್ರಕ್ಕೆ ಸಹಿ ಹಾಕಿದಾಗಲೆ 'ಈ ಪ್ರೀತಿ'ಗೂ ಸಹಿ ಹಾಕಿದ್ದೆ. ಆದರೆ ಗಾಳಿಪಟ ಕಳೆದ ವರ್ಷ ಬಿಡುಗಡೆಯಾಯಿತು. ಈ ಪ್ರೀತಿಗೆ ಇನ್ನೂ ಮೋಕ್ಷ ಸಿಕ್ಕಿಲ್ಲ. ಕಾರಣ ನಮ್ಮ ವೀಸಾ ಎರಡು ಬಾರಿ ತಿರಸ್ಕೃತವಾಗಿತ್ತು. ವೀಸಾ ಸಿಕ್ಕ ಕೂಡಲೆ ವಾಷಿಂಗ್ಟನ್ ಗೆ ಹಾರಿದೆವು ಎನ್ನುತ್ತಾರೆದಿಗಂತ್.

ಹೊಸಬರ 'ಬಿಸಿಲೆ' ಮತ್ತು 'ಹೌಸ್ ಫುಲ್' ಚಿತ್ರಗಳನ್ನೂ ದಿಗಂತ್ ಒಪ್ಪಿಕೊಂಡಿದ್ದಾರೆ. ಹೊಸಬರಲ್ಲಿನ ಹೊಸಹೊಸ ಐಡಿಯಾಗಳು ಅವರಿಗೆ ಇಷ್ಟವಾಗುತ್ತವಂತೆ. ಆ ಕಾರಣಕ್ಕಾಗಿ ಆ ಚಿತ್ರಗಳಿಗೂ ಸೆಲ್ಲೋ ಫೆನ್ನಲ್ಲಿ ಸಹಿ ಹಾಕಿದ್ದಾರೆ. ಏಕೆಂದರೆ ಗೊತ್ತೇ ಇದೆಯಲ್ಲ ದಿಗಂತ್ ಸೆಲ್ಲೋ ಫೆನ್ನಿನ ವಿಶೇಷ ರಾಯಭಾರಿ ಅಂಥ, ಹಾಗಾಗಿ ಬೇರೆ ಪೆನ್ನು ಮುಟ್ಟೋದಿಲ್ಲ! ಹೊಸಬರೊಂದಿಗೆ ಈಗಾಗಲೇ ದಿಗಂತ್ ನಟಿಸಿರುವ 'ಎಸ್ ಎಂ ಎಸ್' ಮತ್ತು 'ಮಿಸ್ ಕ್ಯಾಲಿಫೋರ್ನಿಯಾ' ಚಿತ್ರಗಳು ಅಂಗಾತ ಮಲಗಿವೆ ಎಂಬುದು ಬೇರೆ ವಿಚಾರ.

ದಿಗಂತ್ ನಟನೆಯ 'ಮುಂಗಾರು ಮಳೆ' ಮತ್ತು 'ಗಾಳಿಪಟ' ಚಿತ್ರಗಳು ಯಶಸ್ವಿಯಾಗಿವೆ. ನಿರ್ದೇಶಕ ಯೋಗರಾಜ್ ಭಟ್ ತಮ್ಮ ಮುಂದಿನ ಚಿತ್ರಕ್ಕೆ ದಿಗಂತ್ ರನ್ನು ಸಂಪರ್ಕಿಸಿದ್ದಾರೆ ಎಂದು ಗಾಂಧಿನಗರದಲ್ಲಿ ಮಾತನಾಡಿಕೊಳ್ಳುತ್ತಿರುವುದು ನಿಜವೆ ಎಂದರೆ? ಅದನ್ನು ದಿಗಂತ್ ನಿರಾಕರಿಸುವುದಿಲ್ಲ. ಹೌದು ಡೇಟ್ಸ್ ಹೊಂದಾಣಿಕೆಯಾಗಲಿಲ್ಲ. ಹಾಗಾಗಿ ಒಂದು ಉತ್ತಮ ಅವಕಾಶವನ್ನು ಮಿಸ್ ಮಾಡಿಕೊಂಡೆ ಎನ್ನುತ್ತಾರೆ.

ಹಾಗೆ ಸುಮ್ಮನೆ ಚಿತ್ರ ಹಾಗೂ ನನ್ನ ಗೆಳಯ ಪ್ರೀತು(ಪ್ರೀತಂಗುಬ್ಬಿ) ಬಗ್ಗೆ ಸಾಕಷ್ಟು ಭರವಸೆ ಇತ್ತು. ಆದರೆ ಎಲ್ಲೋ ಎಡವಟ್ಟಾಗಿದೆ. 2009ರಲ್ಲಿ ನನ್ನ ನಟನೆಯನ್ನುಮತ್ತಷ್ಟು ಸುಧಾರಿಸಿಕೊಳ್ಳುತ್ತೇನೆ. ನಟನೆಯಲ್ಲಿ ಸೆಕೆಂಡ್ ಕ್ಲಾಸ್ ನಲ್ಲಿ ಪಾಸಾಗಿದ್ದೇನೆ. ಫಸ್ಟ್ ಕ್ಲಾಸ್, ಡಿಸ್ಟಿಂಕ್ಷನ್, ರ್ಯಾಂಕ್ ....ಹೀಗೆ ಇನ್ನೂ ದಿಗಂತ್ ಮುಂದೆ ಸವಾಲುಗಳ ಪಟ್ಟಿಯೇ ಇದೆ! ಸದ್ಯಕ್ಕೆ ದಿಗಂತ್ ಕನ್ನಡದಲ್ಲೇ ಬ್ಯುಸಿಯಾಗಿರುವ ಕಾರಣ ಬಾಲಿವುಡ್ಡು, ಹಾಲಿವುಡ್ಡು ಎಂದು ಎಲ್ಲೂ ಹೋಗಲ್ಲವಂತೆ!

(ದಟ್ಸ್ ಕನ್ನಡ ಚಿತ್ರವಾರ್ತೆ)

ಪೂರಕ ಓದಿಗೆ
ಫ್ರೆಂಡ್ಸ್ ಪ್ರೊಡಕ್ಷನ್ಸ್ ನೂತನ ಚಿತ್ರದಲ್ಲಿ ದಿಗಂತ್
ಹಿಂದಿ ಬಾರದ್ದಕ್ಕೆ ಹಿಂದೆ ಬಿದ್ದ ದಿಗಂತ್

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada