For Quick Alerts
  ALLOW NOTIFICATIONS  
  For Daily Alerts

  ಚಾಲೆಂಜಿಂಗ್ ಸ್ಟಾರ್‌ಗೆ ಹುಟ್ಟುಹಬ್ಬದ ಶುಭಾಶಯಗಳು

  By Rajendra
  |

  ಚಾಲೆಂಜಿಂಗ್ ಸ್ಟಾರ್‌‍ಗೆ ಹುಟ್ಟುಹಬ್ಬದ ಶುಭಾಶಯಗಳು. ಬುಧವಾರ (ಫೆ.16)ಅವರು 35ನೇ ವರ್ಷಕ್ಕೆ ಅಡಿಯಿಟ್ಟರು. ಸದ್ಯಕ್ಕೆ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರೀಕರಣದಲ್ಲಿ ದರ್ಶನ್ ಬಿಜಿಯಾಗಿದ್ದಾರೆ. ಹುಟ್ಟುಹಬ್ಬದ ನಿಮಿತ್ತ ಅವರು ಜೈಪುರದಿಂದ ಬೆಂಗಳೂರಿಗೆ ಕೆಲ ದಿನಗಳ ಹಿಂದೆಯೇ ಆಗಮಿಸಿದ್ದರು.

  ದರ್ಶನ್ ಅವರ ರಾಜರಾಜೇಶ್ವರಿ ಮನೆಯ ಬಳಿ ಅಭಿಮಾನಿಗಳ ಸಡಗರ, ಸಂಭ್ರಮ ಮುಗಿಲು ಮುಟ್ಟಿದ್ದು, ತಮ್ಮ ನೆಚ್ಚಿನ ನಾಯಕನಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದರು. ಇದೇ ಸಂದರ್ಭದಲ್ಲಿ ಕುಮಾರ್ ಬ್ರದರ್ಸ್ ಅವರ 'ಪ್ರೊಡಕ್ಷನ್ ನಂ.5' ಚಿತ್ರವನ್ನು ಪ್ರಕಟಿಸಲಾಗಿದೆ.

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸ್ವಂತ ನಿರ್ಮಾಣದ ಚಿತ್ರ 'ಬುಲ್ ಬುಲ್, ಮಾತಾಡಕಿಲ್ವಾ' ಎಂಬ ಚಿತ್ರವೂ ಪ್ರಕಟವಾಗಿದೆ. ಈ ಚಿತ್ರವನ್ನು ದರ್ಶನ್ ಅವರ ತಾಯಿ ಮೀನಾ ತೂಗುದೀಪ ಶ್ರೀನಿವಾಸ ನಿರ್ಮಿಸುತ್ತಿದ್ದಾರೆ. ಎಂ ಡಿ ಶ್ರೀಧರ್ ಅವರ ನಿರ್ದೇಶನ ವಿ ಹರಿಕೃಷ್ಣ ಸಂಗೀತ ಚಿತ್ರಕ್ಕಿದೆ.

  ಸಂದೇಶ್ ನಾಗರಾಜ್ ನಿರ್ಮಿಸುತ್ತಿರುವ 'ಪ್ರಿನ್ಸ್', ಬಾಲು ನಿರ್ಮಾಣದ 'ಮೇಸ್ತ್ರಿ', ಕೆಸಿಎನ್ ಚಂದ್ರಶೇಖರ್ ನಿರ್ಮಾಣದ 'ಸಾರಥಿ', ಬಿ ಮಹದೇವ್ ಮತ್ತು ಮನುಗೌಡ ನಿರ್ಮಾಣದ 'ಚಿಂಗಾರಿ' ಚಿತ್ರಗಳು ತೆರೆಕಾಣಬೇಕಾಗಿದೆ. 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರವಂತೂ ತೆಲುಗಿನ 'ಮಗಧೀರ' ದಾಖಲೆಯನ್ನು ಅಳಿಸಿಹಾಕಲಿದೆ ಎಂಬ ಮಾತುಗಳು ಕೇಳಿಬಂದಿವೆ. ದರ್ಶನ್‌ಗೆ ಒಳ್ಳೆಯದಾಗಲಿ. ಹುಟ್ಟುಹಬ್ಬದ ಶುಭಾಶಯಗಳು ದರ್ಶನ್.

  English summary
  Challenging star Darshan is celebrating his 35th birthday on16th February. The home banner of Darshan – his mother Meena Toogudeepa Srinivas has announced ‘Bul Bul’…Mathadkilva in the direction of MD Sridhar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X